ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ..
ಮಂಗಳೂರು : ಸರಣಿ ಅಪಘಾತ ಮತ್ತು ಜೀವಹಾನಿಗೆ ಕುಖ್ಯಾತಿ ಪಡೆದ ಮಂಗಳೂರು ಹೊರವಲಯದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಪ್ರದೇಶಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ಮೇಲ್ಸೇತುವೆಯಲ್ಲಿ ನಿನ್ನೆ ಸಂಜೆ ನಡೆದ ಅಫಘಾತದಲ್ಲಿ ನವದಂಪತಿ ದಾರುಣವಾಗಿ ಸಾವನ್ನಪ್ಪಿದ್ದರು.
ಹೆದ್ದಾರಿ ಪ್ರಾಧಿಕಾರ,ನವಯುಗ ಕನ್ಟ್ರಕ್ಷನ್ ನ ಅಧಿಕಾರಿಗಳು, ಸಂಚಾರಿ ಪೊಲಿಸ್ ಅಧಿಕಾರಿಗಳು ಈ ಸಂದರ್ಭ ಜೊತೆಯಲ್ಲಿದ್ದು, ಈ ಪ್ರದೇಶದಲ್ಲಿ ಆಗುತ್ತಿರುವ ಅಪಘಾತಗಳು ಮತ್ತು ಜೀವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುವ ಕಾರ್ಯಯೋಜನೆ ಅನುಷ್ಟಾನಕ್ಕೆ ತರಲು ಪರಾಮರ್ಶೆ ನಡೆಸಲಾಯಿತು.
ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು ಈ ಸ್ಥಳ ರಾಷ್ಟ್ರೀಯ ಹೆದ್ದಾರಿ ಮತ್ತು ಸ್ಥಳೀಯ ಸರ್ವಿಸ್ ರಸ್ತೆಗಳಿಂದ ಕೂಡಿದಾಗಿದ್ದು ಅಪಾಯಗಳನ್ನು ಅಹ್ವಾನಿಸುವಂತಿದೆ ಮತ್ತು ಅವೈಜ್ಞಾನಿಕವಾಗಿದೆ.
ಆದ್ದರಿಂದ ಈ ಸ್ಥಳದಲ್ಲಿ ಅಪಘಾತಗಳನ್ನು ತಪ್ಪಿಸಲು ತಕ್ಷಣ ಮಟ್ಟಿಗೆ ಸರ್ವಿಸ್ ರೋಡ್ ಗಳಿಗೆ ಹಂಪ್ಸ್ ಹಾಕುವುದು ಮತ್ತು ಇಲ್ಲಿನ ಸಂಚಾರ ದಟ್ಟನೆಯನ್ನು ಕಡಿಮೆ ಮಾಡಲು ಬದಲಿ ಸಂಚಾರಿ ವ್ಯವಸ್ಥೆಗಳನ್ನು ಅನುಷ್ಟಾನಕ್ಕೆ ತರಲು ಸೂಚಿಸಲಾಗಿದೆ, ಇದರಿಂದ ಅಪಘಾತಗಳು ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.