LATEST NEWS
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ
Published
3 years agoon
By
Adminಹೊಸದಿಲ್ಲಿ: ಕಳೆದ ತಿಂಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿದ್ದ ತೈಲ ಕಂಪೆನಿಗಳು, ಮಾರ್ಚ್ ತಿಂಗಳ ಮೊದಲ ದಿನವೇ ಮತ್ತೆ ಆಘಾತ ನೀಡಿವೆ.
19 ಕೆಜಿ ತೂಕದ ವಾಣಿಜ್ಯ ಬಳಕೆಯ ಅಡುಗೆ ಅನಿಲ ದರವನ್ನು 113ರೂ.ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಸಂಕಷ್ಟದ ನಡುವೆ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಮಂಗಳೂರಿನಲ್ಲಿ 14.2 ಕೆ.ಜಿ ಅಡುಗೆ ಅನಿಲದ ಬೆಲೆ ಯಥಾಸ್ಥಿತಿಯಲ್ಲಿ (900 ರೂ)ಇದೆ. 19 ಕೆಜಿ ನಿಲಿ ಕನೆಕ್ಷನ್ ಬೆಲೆ 2000 ರೂಪಾಯಿ ಇದೆ.
ಫೆಬ್ರವರಿಗೂ ಮುನ್ನ ಕೇವಲ ಐದು ತಿಂಗಳಲ್ಲಿ ವಾಣಿಜ್ಯ ಬಳಕೆ ಅಡುಗೆ ಅನಿಲದ ದರವನ್ನು ಐದು ಬಾರಿ ಹೆಚ್ಚಿಸಲಾಗಿತ್ತು. ನವೆಂಬರ್ 1ರಂದು ಬೆಲೆ ಹೆಚ್ಚಳ ಮಾಡಲಾಗಿತ್ತು. ಅದಕ್ಕೂ ಮುನ್ನ ಅ. 15ರಂದು ಬೆಲೆ ಏರಿಕೆಯಾಗಿತ್ತು.
2022ರ ಏಪ್ರಿಲ್ ಬಳಿಕ ಅಡುಗೆ ಅನಿಲ ದರದಲ್ಲಿ ಗಣನೀಯ ಏರಿಕೆ ಉಂಟಾಗುವ ಸಂಭವ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಎಲ್‌ಪಿಜಿ ಅನಿಲ ಸಿಲಿಂಡರ್‌ಗಳಲ್ಲದೆ, ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ, ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ವಿದ್ಯುತ್ ದರಗಳಲ್ಲಿ ಕೂಡ ಮುಂಬರುವ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ರಷ್ಯಾ- ಉಕ್ರೇನ್ ನಡುವಿನ ಕದನ ಜನಸಾಮಾನ್ಯರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಬಿಕ್ಕಟ್ಟು ಅನಿಲ ಹಾಗೂ ಇಂಧನ ಪೂರೈಕೆಗೆ ಭಾರಿ ಹೊಡೆತ ನೀಡಲಿದ್ದು, ಸರಬರಾಜು ಸಮಸ್ಯೆ ಸೃಷ್ಟಿಯ ಭೀತಿ ಉಂಟಾಗಿದೆ.
LATEST NEWS
ಅಮೆಜಾನ್ ಸಂಸ್ಥಾಪಕನ ಮದುವೆ ಅಂಬಾನಿ ಮದುವೆಗಿಂತನೂ ಗ್ರ್ಯಾಂಡ್…
Published
11 minutes agoon
23/12/2024ಮಂಗಳೂರು/ವಾಷಿಂಗ್ಟನ್: ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಜ್, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರೂ. ದಾಟಲಿದೆ ಎನ್ನಲಾಗಿದೆ.
ಲಾರೆನ್ ಸ್ಯಾಂಚೆಝ್ ಸಂದರ್ಶನಗಳ ಸಮಯದಲ್ಲಿ ತನ್ನ ಮದುವೆಯ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾರೆ ಆದರೆ ದಿನಾಂಕವನ್ನು ದೃಢಪಡಿಸಿಲ್ಲ. ದಿ ಟುಡೇ ಶೋ ಜೊತೆಗಿನ ಚಾಟ್‌ನಲ್ಲಿ, ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಮದುವೆಯ ಯೋಜನೆಯನ್ನು ಕುಶಲತೆಯಿಂದ ಮಾಡುವ ಬಗ್ಗೆ ತಮಾಷೆ ಮಾಡಿದರು, “ನನ್ನ ಬಳಿ Pinterest ಇದೆ. ನಾನು ಎಲ್ಲ ವಧುವಿನಂತೆಯೇ ಇದ್ದೇನೆ.
ಇದನ್ನೂ ಓದಿ : ಭಾರತವಿಲ್ಲದೆ ಜಗತ್ತೇ ಶೂನ್ಯ ; ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್ಜಿಗೆ 2019ರಲ್ಲಿ ಡೈವೋರ್ಸ್ ನೀಡಿದ್ದ ಬೆಜೋಸ್, ಮಾಜಿ ಪತ್ನಿಗೆ 3 ಲಕ್ಷ ಕೋಟಿ ರು.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್ ಜೊತೆ ನಂಟು ಹೊಂದಿದ್ದರು. ಸದ್ಯ, ಬೆಜೋಸ್ ಅವರ ಆಸ್ತಿ 20 ಲಕ್ಷ ಕೋಟಿ ರು.ನಷ್ಟಿದೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಖರ್ಚು ಬರೋಬ್ಬರಿ 5000 ಕೋಟಿ ರು. ದಾಟಿತ್ತು.
DAKSHINA KANNADA
ಕರಾವಳಿ ಉತ್ಸವ: ಕದ್ರಿ ಪಾರ್ಕಿನಲ್ಲಿ ರೋಮಾಂಚಕಾರಿಯಾದ ಚಿಟ್ಟೆ ಪ್ರದರ್ಶನ
Published
1 hour agoon
23/12/2024ಮಂಗಳೂರು : ಕೆಲವು ವರ್ಷಗಳ ಬಳಿಕ ಈ ಬಾರಿ ಮತ್ತೆ ಆರಂಭಗೊಂಡಿರುವ ಕರಾವಳಿ ಉತ್ಸವ ಎರಡೇ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆಯನ್ನು ಕೂಡಾ ಮಾಡಿದ್ದು, ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿರುವುದಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಡಿಸೆಂಬರ್ 21ರಿಂದ ಆರಂಭಗೊಂಡಿರುವ ಕರಾವಳಿ ಉತ್ಸವದ ಆಕರ್ಷಕ ಮೆರವಣಿಗೆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿವೆ. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಡಿ.೨೧ರಿಂದ ಜನವರಿ ೧೯ರವರೆಗೆ ನಡೆಯಲಿದೆ. ಪ್ರತೀ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಝಲಕ್ ಇರಲಿದೆ. ಕರಾವಳಿ ಕರ್ನಾಟಕದ ಕಲೆ, ಕರಕುಶಲ ಮತ್ತು ಖಾದ್ಯಗಳ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಮನೋರಂಜನೆಯ ಭರಪೂರವಿದೆ. ಇದಲ್ಲದೇ ಡಿ.29ರವರೆಗೆ ಮೇರಿಹಿಲ್ ಹೆಲಿಪ್ಯಾಡಿನಲ್ಲಿ ಹೆಲಿಕಾಫ್ಟರ್ ರೈಡ್ ಆರಂಭಿಸಲಾಗಿದ್ದು, ಇದಕ್ಕೂ ಬಹಳಷ್ಟು ಜನ ಆಗಮಿಸುತ್ತಿದ್ದಾರೆ. ಡಿ.22ರಿಂದ ಜ.19ರವರೆ ಕದ್ರಿ ಪಾರ್ಕಿನಲ್ಲಿ ರೋಬೋಟಿಕ್ ಚಿಟ್ಟೆ ಪ್ರದರ್ಶನವಿದ್ದು, ಈ ಪ್ರದರ್ಶನವನ್ನು ವೀಕ್ಷಣೇ ಮಾಡಲು ಬಹಳಷ್ಟು ಜನ ಆಗಮಿಸುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಈ ಪ್ರದರ್ಶನ ಸಂಜೆ 4 ರಿಂದ ರಾತ್ರಿ 9 ರವರೆಗೆ ಮಾತ್ರ ಇರಲಿದೆ. ಅಲ್ಲದೆ ಇಂದು ವಸ್ತುಪ್ರದರ್ಶನ ವೇದಿಕೆಯಲ್ಲಿ ನೃತ್ಯರೂಪಕವಿರಲಿದೆ. ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇವರಿಂದ ಕಾರ್ಯಕ್ರಮವಿದೆ. ನಾಳೆ ಸಂಜೆ ದೇವದಾಸ್ ಕಾಪಿಕಾಡ್ ನಿದೇಆರ್ಶನದ ತುಳುಹಾಸ್ಯ ನಾಟಕ ಎರ್ಲಾ ಗ್ಯಾರಂಟಿ ಅತ್ತ್ ಎನ್ನುವ ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಪ್ರದರ್ಶಿಸಲ್ಪಡಲಿದೆ.
LATEST NEWS
ಭಾರತವಿಲ್ಲದೆ ಜಗತ್ತೇ ಶೂನ್ಯ ; ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
Published
2 hours agoon
23/12/2024ಮಂಗಳೂರು/ನವದೆಹಲಿ: ಹಲವು ರಾಷ್ಟ್ರಗಳು ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಅಮೆರಿಕದಂತಹ ಪ್ರಬಲ ರಾಷ್ಟ್ರವು ಭಾರತವನ್ನು ಹೊಗಳುತ್ತದೆ. ಭಾರತಕ್ಕೆ ಸಹಾಯ ಮಾಡಲು ರಷ್ಯಾ ಯಾವಾಗಲೂ ಸಿದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತವಿಲ್ಲದ ಅಂತಾರಾಷ್ಟ್ರೀಯ ಸಂಬಂಧಗಳು ಅಪೂರ್ಣವೆಂದು ಅನೇಕ ದೇಶಗಳು ಭಾವಿಸುವುದನ್ನು ಅಲ್ಲಗಳೆಯುವಂತಿಲ್ಲ ಎಂದು 2019ರಿಂದ 2022ರವರೆಗೂ ಭಾರತಕ್ಕೆ ಜರ್ಮನ್ ರಾಯಭಾರಿಯಾಗಿದ್ದ ವಾಲ್ಟರ್ ಲಿಂಡ್ನರ್ ಹೇಳಿದ್ದಾರೆ. ವಿಶ್ವದ ಹೆಚ್ಚಿನ ದೇಶಗಳೊಂದಿಗೆ ಸೌಹಾರ್ದಯುತ ಮತ್ತು ವಿಶ್ವಾಸಯುತ ಸಂಬಂಧ ಇರುವ ದೇಶಗಳ ಸಂಖ್ಯೆ ಹೆಚ್ಚಿಲ್ಲ. ಅಂತಹ ವಿರಳ ದೇಶಗಳಲ್ಲಿ ಭಾರತವೂ ಒಂದು ಎಂದು ಮಾಜಿ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ (Walter J. Lindner) ಹೇಳಿದ್ದಾರೆ.
‘ವಾಟ್ ದ ವೆಸ್ಟ್ ಶುಡ್ ಲರ್ನ್ ಫ್ರಂ ಇಂಡಿಯಾ’ (ಪಶ್ಚಿಮ ದೇಶಗಳು ಭಾರತದಿಂದ ಕಲಿಯುವುದೇನು?’) ಎನ್ನುವ ಪುಸ್ತಕದಲ್ಲಿ ವಾಲ್ಟರ್ ಲಿಂಡ್ನರ್ ಅವರು “ಹೊಸ ವಿಶ್ವ ವ್ಯವಸ್ಥೆಯಲ್ಲಿ ಭಾರತದ ಪಾತ್ರವೇನಿರಬಹುದು ಎನ್ನುವ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕದ ಬಗ್ಗೆ ಹಾಗೂ ಭಾರತದ ಬಗ್ಗೆ ಅವರು ಎಕನಾಮಿಕ್ ಟೈಮ್ಸ್ನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂದು ದೇಶದ ಬಗ್ಗೆ ಪುಸ್ತಕಗಳು ಬರೆಯಲಾಗುತ್ತಿದೆ ಎಂದರೆ ಆ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದು ಭಾವಿಸಬಹುದು. ಚೀನಾದ ಆರ್ಥಿಕತೆ ಬೆಳೆಯುತ್ತಿದ್ದಾಗ ಹೀಗೆ ಪುಸ್ತಕಗಳು ಪ್ರಕಟವಾಗಿದ್ದವು. ಈಗ ಭಾರತದ ಬಗ್ಗೆ ಪುಸ್ತಕಗಳು ಪ್ರಕಟವಾಗುತ್ತಿವೆ. ಇದು ಭಾರತದ ಆರ್ಥಿಕ ಬೆಳವಣಿಗೆ ಸಾಧಿಸಲಾಗುತ್ತಿರುವುದರ ದ್ಯೋತಕವಾಗಿದೆ” ಎಂದಿದ್ದಾರೆ.
ಭಾರತದ ಸಾಫ್ಟ್ ಪವರ್ :
“ಪ್ಲಾಸ್ಟಿಕ್ ವಿರುದ್ಧ ಹೋರಾಡಲೋ, ಅಥವಾ ಮೆಗಾ ಸಿಟಿಗಳನ್ನು ರೂಪಿಸಲೋ ಯಾರಾದರೂ ಏನಾದರೂ ಮಾಡಬೇಕೆಂದರೆ ಮೊದಲು ಭಾರತದಲ್ಲಿ ಅದಕ್ಕೆ ಪರಿಹಾರ ಹುಡುಕಬೇಕು” ಎಂದು ವಾಲ್ಟರ್ ಜೆ ಲಿಂಡ್ನರ್ ತಿಳಿಸಿದ್ದಾರೆ. ಸಾಫ್ಟ್ ಪವರ್ ಎಂಬುದು ಭಾರತದ ಡಿಎನ್‌ಎನಲ್ಲೇ ಇದೆ. ಹೀಗಾಗಿ, ಈ ಮೃದುಶಕ್ತಿಯು ಭಾರತಕ್ಕೆ ಯಾವಾಗಲೂ ಇದ್ದೇ ಇರುತ್ತದೆ. ಇತಿಹಾಸ, ಆದ್ಯಾತ್ಮಿಕತೆ, ಸಂಸ್ಕೃತಿ, ಧರ್ಮ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ವಿಶ್ವಾದ್ಯಂತ ಭಾರತದ ಛಾಪು ಇದೆ. ಈಗ ಭಾರತದಲ್ಲಿ ವಿಶ್ವದಲ್ಲೇ ಅತಿದೊಡ್ಡ ಜನಸಂಖ್ಯೆ ಇದೆ. ಈಗ ಭಾರತ ಸಾಫ್ಟ್ ಪವರ್ಗಿಂತಲೂ ದೊಡ್ಡ ಪ್ರಭಾವ ಹೊಂದಿದೆ. ಭಾರತದ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆ ಇಲ್ಲದೇ ಜಗತ್ತು ಮುಂದಡಿ ಇಡಲು ಆಗುವುದಿಲ್ಲ ಎನ್ನುವ ಸ್ಥಿತಿ ಇದೆ. ಕಳೆದ ಎರಡು-ಮೂರು ವರ್ಷಗಳಿಂದ ಆಗುತ್ತಿರುವ ಜಾಗತಿಕ ರಾಜಕೀಯ ವಿಚಲನಗಳು, ಯುದ್ಧ, ಬಿಕ್ಕಟ್ಟು ಇತ್ಯಾದಿ ಪರಿಸ್ಥಿತಿಯಲ್ಲೂ ಭಾರತವು ಸೂಪರ್ಪವರ್ ಗುಂಪುಗಳ ನಡುವೆ ಸಮತೋಲನ ಸಾಧಿಸಲು ಯಶಸ್ವಿಯಾಗಿದೆ. ಪೂರ್ವ ಮತ್ತು ಪಶ್ಚಿಮ, ಹಾಗೂ ಉತ್ತರ ಮತ್ತು ದಕ್ಷಿಣ ನಡುವೆ ಸೇತುವಾಗಿದೆ ಎಂದು ವಾಲ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
LATEST NEWS
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯುತ್ತೆ ಗೊತ್ತಾ ?
WWE ಫ್ಯಾನ್ಸ್ ಗೆ ಆಘಾತ: ರೇಯ್ ಮಿಸ್ಟೀರಿಯೋ ನಿಧನ !
ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪ*ಲ್ಟಿ; ರೈಡರ್ ಕ*ಣ್ಮರೆ
ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
Trending
- BIG BOSS7 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- LATEST NEWS5 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS3 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA6 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು