Friday, July 1, 2022

ಇಂದಿನಿಂದ CAPS ಅಕಾಡೆಮಿಯಿಂದ ಆನ್‌ಲೈನ್‌ ಅರಿವು ಕಾರ್ಯಾಗಾರ

ಮಂಗಳೂರು: C’s ಅಕಾಡೆಮಿ ಆಫ್‌ ಫ್ರೊಫೆಷನಲ್‌ ಸ್ಟುಡೆಂಟ್ಸ್‌ (ಕ್ಯಾಪ್ಸ್‌) ಸೆಂಟರ್‌ ಫಾರ್‌ ಸಿಎ/ಸಿಎಸ್‌ ಎಜ್ಯುಕೇಶನ್‌ ಬೆಂಗಳೂರು ಇದರ ವತಿಯಿಂದ ಕಾಮರ್ಸ್‌ ಕ್ಯಾರಿಯರ್‌ ಅರಿವು ಕಾರ್ಯಾಗಾರ ನಾಳೆ ಆನ್‌ಲೈನ್‌ನಲ್ಲಿ ನಡೆಯಲಿದೆ.


ಖ್ಯಾತ ಲೆಕ್ಕ ಪರಿಶೋಧಕ ಮತ್ತು ಸಮಾಜ ಸೇವಕ ಸಿಎ ಚಂದ್ರಶೇಖರ್‌ ಶೆಟ್ಟಿ ಮುಂಡ್ಕೂರು ಅವರು ಕಾರ್ಯಾಗಾರ ನಡೆಸಿಕೊಡಲಿದ್ದು,

ಸಿಎ ಚಂದ್ರಶೇಖರ್‌ ಶೆಟ್ಟಿ ಮುಂಡ್ಕೂರು

ಈ ಕಾರ್ಯಾಗಾರದಲ್ಲಿ ವಾಣಿಜ್ಯ ವಿಭಾಗದಲ್ಲಿರುವ ಹಲವು ಅವಕಾಶ, ವೃತ್ತಿಪರ ಕೋರ್ಸ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ, ಜೊತೆಗೆ ಆನ್‌ಲೈನ್‌/ಆಫ್‌ಲೈನ್‌ ತರಗತಿಗಳ ಸತ್ಯ-ಮಿಥ್ಯೆಗಳು, ಸರಿಯಾದ ವಿದ್ಯಾಭ್ಯಾಸ ಆಯ್ಕೆ ಮೂಲಕ ಜೀವನದ ಉನ್ನತ ಸ್ಥಾನಕ್ಕೆ ಹೇಗೆ ತಲುಪಬಹುದು.

ಜೊತೆಗೆ ಆತ್ಮವಿಶ್ವಾಸ ವೃದ್ಧಿಯ ಕುರಿತ ಪ್ರಶ್ನೋತ್ತರಗಳು, ಬಿ.ಕಾಂ ಪದವಿಯನ್ನು ವೃತ್ತಿಪರ ಕೋರ್ಸ್‌ಗಳೊಂದಿಗೆ ಹೇಗೆ ಸಂಯೋಜಿಸಬಹುದು ಎಂಬ ವಿಷಯಗಳ ಬಗ್ಗೆ ಈ ಆನ್ ಲೈನ್ ಕಾರ್ಯಾಗಾರ ನಡೆಯಲಿದೆ.


ಕಾರ್ಯಾಗಾರವು ನಾಳೆ (ಜೂ.22) ರಂದು ರಾತ್ರಿ 8 ಗಂಟೆಗೆ ಝೂಮ್‌ನಲ್ಲಿ ಆರಂಭವಾಗಲಿದೆ.

ಭಾಗವಹಿಸುವ ಆಸಕ್ತರು ” ಝೂಮ್‌ ಐಡಿ-88261702588 ಪಾಸ್‌ವರ್ಡ್‌: CAPS ” ಬಳಸಿ ಸೇರಬಹುದಾಗಿದೆ. ಜೊತೆಗೆ ಯೂಟ್ಯೂಬ್‌ (CAPS – Education to Profess) ನಲ್ಲೂ ನೇರಾ ಪ್ರಸಾರವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ 8310249327/9886683697 ಸಂಖ್ಯೆಗೆ ಕರೆ/ವಾಟ್ಸಪ್‌ ಮಾಡಿ ಮಾಹಿತಿ ಪಡಕೊಳ್ಳಬಹುದು ಅಥವಾ WWW.CAPS4CA.COM ವೆಬ್ ಸೈಟಿಗೆ ಲಾಗಿನ್ ಆಗಿ ಮಾಹಿತಿ ಪಡೆಯಬಹುದು.

ಈ ಆನ್ ಲೈನ್ ಕಾರ್ಯಾಗಾರದಲ್ಲಿ ಪಿಯುಸಿ, ಬಿ ಕಾಂ, ಬಿಎಸ್‌ಸಿ ಮತ್ತಿತರರು ಭಾಗವಹಿಸಬಹುದಾಗಿದೆ.


ಇವತ್ತಿನಿಂದ CA Foundation June 2022 ರ ಪರೀಕ್ಷೆಗೆ Quick & Excellent revision classes. ಇಂದು ಸಂಜೆ 7.30ಕ್ಕೆ Confidence Booster session by CA Shetty Sir ಅದರ ನಂತರ Accounts revision 8.00 ರಿಂದ 9.00 ಗಂಟೆಯವರೆಗೆ By CA Shetty Sir. ಇದರ ಜೊತೆಗೆ ಜೂ.24 ರಂದು ಬ್ಯುಸಿನೆಸ್‌ ಲಾ ಆ್ಯಂಡ್‌ ಬಿಸಿಆರ್‌ ವಿಷಯದ ಬಗ್ಗೆ ಡಾ.ರಾಜ್‌ದೀಪ್‌, ಸಿಎ ಮೆಹುಲ್‌, ಸಿಎ ನಾಗಶ್ರೀ ಅವರುಗಳು ಆಂಗ್ಲ ಭಾಷೆಯಲ್ಲಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಜೂ.26 ರಂದು ಮಾಥ್ಸ್‌, ಸ್ಟ್ಯಾಟಿಸ್ಟಿಕ್ಸ್‌ ಹಾಗೂ ಲಾಜಿಕಲ್‌ ರೀಝನಿಂಗ್‌ ವಿಷಯದ ಮೇಲೆ ಸಿಎ ಸುಧೀಂದ್ರ ಎಂಎಸ್‌ ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಜೂ.28 ರಂದು ಬ್ಯುಸಿನೆಸ್‌ ಎಕಾಕಮಿಕ್ಸ್‌ ಹಾಗೂ ಬ್ಯುಸಿನೆಸ್‌ ಕಮರ್ಷಿಯಲ್‌ ವಿಷಯಗಳ ಬಗ್ಗೆ ಪ್ರೊ.ದಿವ್ಯಶ್ರಿ, ಡಾ.ರಾಜ್‌ದೀಪ್‌ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಈ ಎಲ್ಲಾ ಕಾರ್ಯಾಗಾರಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದ್ದಿ ಒಂದು ಗಂಟೆಯ ಅವಧಿ ಹೊಂದಿರುತ್ತದೆ. ಭಾಗವಹಿಸಲಿಚ್ಚಿಸುವವರು ” ಝೂಮ್‌ ಐಡಿ:81492494862 ಹಾಗೂ ಪಾಸ್‌ವರ್ಡ್‌: CAPS400 “ ಮೂಲಕ ಭಾಗವಹಿಸಬಹುದು.

ಯೂಟ್ಯೂಬ್‌ನಲ್ಲಿಯೂ ಈ ನೇರ ಪ್ರಸಾರ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 8310249327/9886683697 ಸಂಖ್ಯೆಗೆ ಕರೆ/ವಾಟ್ಸಪ್‌ ಮಾಡಬಹುದು. ಅಥವಾ WWW.CAPS4CA.COM ಗೆ ಲಾಗಿನ್ ಆಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...