ಮಂಗಳೂರು: ನಗರದ ಬೋಳೂರಿನ ಬತ್ತೇರಿ ಫ್ರೆಂಡ್ಸ್ ಆಯೋಜಿಸಿರುವ ಪ್ರೊ ಕಬ್ಬಡ್ಡಿ ಸ್ಪರ್ಧೆ ಕುರಿತಂತೆ ಬಾಲಿವುಡ್‌ನ ಖ್ಯಾತ ಕಾಮಿಡಿ ನಟ ಜಾನಿ ಲಿವರ್ ತಮ್ಮ ಹಾಸ್ಯದ ಮಾತುಗಳ ಮೂಲಕ ಕಬಡ್ಡಿ ಕ್ರೀಡೆಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.
ಕಬಡ್ಡಿ ಆಟದಲ್ಲಿನ ಸನ್ನಿವೇಶವನ್ನು ಹಾಸ್ಯದ ಮೂಲಕ ವಿವರಿಸಿರುವ ಅವರು ಮೂರು ಆಟಗಳ ಖುಷಿಯನ್ನು ಕಬ್ಬಡ್ಡಿ ಎನ್ನುವ ಒಂದೇ ಕ್ರೀಡೆಯಲ್ಲಿ ಕಾಣಬಹುದು ಎಂದಿದ್ದಾರೆ.
ಕ್ರಿಕೆಟ್, ಫುಟ್ಪಾಲ್, ಡಬ್ಲ್ಯೂ ಡಬ್ಲೂ ಎಫ್ ಆಟದ ಮಜಾ ಒಂದೇ ಆಟದಲ್ಲಿ ಬರುತ್ತದೆ. ನೋಡಿ …ಪ್ರೋತ್ಸಾಹಿಸಿ… ಖುಷಿ ಅನುಭವಿಸಿ ಎಂದು ಜಾನಿ ಲಿವರ್ ಹೇಳಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲೂ ಭಾರೀ ವೈರಲ್ ಆಗಿದೆ.