ಖ್ಯಾತ ಮಲಯಾಳಂ ಹಾಸ್ಯ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ನಿಧನರಾಗಿದ್ದಾರೆ. 42 ವರ್ಷ ವಯಸ್ಸಿನ ಸುಬಿ ದೀರ್ಘ ಕಾಲದಿಂದ ಯಕೃತ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು.
ಕೊಚ್ಚಿ: ಖ್ಯಾತ ಮಲಯಾಳಂ ಹಾಸ್ಯ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ನಿಧನರಾಗಿದ್ದಾರೆ. 42 ವರ್ಷ ವಯಸ್ಸಿನ ಸುಬಿ ದೀರ್ಘ ಕಾಲದಿಂದ ಯಕೃತ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು.
ಇಂದು ಮುಂಜಾನೆ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರುಳೆದಿದ್ದಾರೆ.
ತಮ್ಮ ವಾಕ್ಚಾತುರ್ಯ ಮತ್ತು ಹಾಸ್ಯಪ್ರಜ್ಞೆಗೆ ಹೆಸರು ಪಡೆದಿದ್ದ ಸುಬಿ ಓರ್ವ ನೃತ್ಯಗಾತಿ ಮತ್ತು ಕಾಮಿಡಿಯನ್ ಆಗಿ ವೃತ್ತಿಜೀವನ ಆರಂಭಿಸಿದ್ದರು.
ಮುಂದೆ ಅವರು ಟಿವಿ ಶೋಗಳಾದ ಮಝವಿಲ್ ಮನೋರಮಾದ “ಮೇಡ್ ಫಾರ್ ಈಚ್ ಅದರ್” ಮತ್ತು ಸೂರ್ಯ ಟಿವಿಯ “ಕುಟ್ಟಿ ಪಟ್ಟಲಂ” ನಲ್ಲಿ ನಿರೂಪಕಿಯಾಗಿದ್ದರು.
ಸುಬಿ ಅವರು ಗೃಹನಾಥನ್, ತಕ್ಸರ ಲಹಲ, ಎಲ್ಸಮ್ಮ ಎನ್ನ ಆಂಕುಟ್ಟಿ, ಡ್ರಾಮ, ಕಾರ್ಯಸ್ಥಾನ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು.
ಅವರು ಫಿಟ್ನೆಸ್ ತಜ್ಞೆಯೂ ಆಗಿದ್ದರಲ್ಲದೆ ಕೋವಿಡ್ ಲಾಕ್‌ಡೌನ್ ವೇಳೆ ಆಕೆ ಹೊರತಂದ ವರ್ಕೌಟ್ ವೀಡಿಯೋಗಳು ಬಹಳ ಜನಪ್ರಿಯವಾಗಿದ್ದರು.