LATEST NEWS
ಬೆಂಗಳೂರು : ಬಸ್ ಹತ್ತುವಾಗ ಬಿದ್ದು ವಿದ್ಯಾರ್ಥಿನಿ ಗಂಭೀರ – ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ..!
ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆಯೇ ಬಸ್ ಹರಿದಿದ್ದು, ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ನಡೆದಿದ್ದು ಸ್ಥಳದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.
ಬೆಂಗಳೂರು: ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆಯೇ ಬಸ್ ಹರಿದಿದ್ದು, ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ನಡೆದಿದ್ದು ಸ್ಥಳದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ.
ಕೋಲಾರ ಮೂಲದ ಶಿಲ್ಪಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಈಕೆ ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದಾಳೆ.
ಶಿಲ್ಪಾ ಬಸ್ ಹತ್ತುತ್ತಿದ್ದಂತೆಯೇ ಚಾಲಕ ಮುಂದಕ್ಕೆ ಮೂವ್ ಮಾಡಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಶಿಲ್ಪಾಳ ಮೇಲೆ ಬಸ್ ಹರಿದು ಗಂಭೀರ ಗಾಯಗೊಂಡಿದ್ದಾಳೆ.
ಸದ್ಯ ಗಾಯಗೊಂಡ ಶಿಲ್ಪಾಳನ್ನು ಸ್ಥಳೀಯ ಪೊಲೀಸರು ಹತ್ತಿರದ ಅಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಅಪಘಾತ ಪ್ರಕರಣ ಸಂಬಂಧಿಸಿದಂತೆ ಯೂನಿವರ್ಸಿಟಿ ಒಳಗೆ ವಾಹನ ಬಿಡದಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಯೂನಿವರ್ಸಿಟಿಯ ಎಲ್ಲಾ ಗೇಟ್ ಗಳನ್ನು ಬೀಗ ಹಾಕಿ ಧರಣಿ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ ಆರ್ ಪಿ ವಾಹನ ಆಗಮಿಸಿದೆ. ಸ್ಥಳಕ್ಕಾಗಮಿಸಿದ ಬಿಎಂಟಿಸಿ ಪಶ್ಚಿಮ ವಲಯದ ಡಿಸಿ ಶ್ರೀನಾಥ್, ಯುವತಿಯ ಚಿಕಿತ್ಸಾ ವೆಚ್ಚ ಭರಿಸೋದಾಗಿ ಭರವಸೆ ನೀಡಿದ್ದಾರೆ.
ಅಲ್ಲದೆ ಯುವತಿಯನ್ನ ಈಗಾಗ್ಲೇ ಪೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂರ್ನಾಲ್ಕು ಸರ್ಜರಿ ಮಾಡಬೇಕು ಅಂತ ಹೇಳಿದ್ದಾರೆ. ಎಲ್ಲಾ ಚಿಕಿತ್ಸಾ ವೆಚ್ಚ ಭರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
LATEST NEWS
ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಉಡುಪಿ : ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಬೆಂಗಳೂರು ಪ್ರವಾಸ ಮಾಡ್ತಿದ್ದಾರೆ. ಮೂರು ಬಾರಿ ಕಾರಣಾಂತರದಿಂದ ಉಡುಪಿಗೆ ಬರಲು ಸಾಧ್ಯವಾಗಿರಲಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಅನುಮತಿ ಪಡೆದು ಉಡುಪಿ ಬಂದಿದ್ದೇನೆ. ಕರಾವಳಿ ಜನರ ರಕ್ತದಲ್ಲಿ ಹಿಂದುತ್ವ ಇದೆ. ಮೋದಿಯ 10 ವರ್ಷದ ಆಡಳಿತವನ್ನು ಜಗತ್ತು ಕೊಂಡಾಡಿದೆ. ಎಲ್ಲಾ ಅಸಾಧ್ಯಗಳನ್ನು ಪ್ರಧಾನಿ ಮೋದಿ ಸಾಧ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದ ಜನರಲ್ಲಿ ವಿಶ್ವಾಸ -ಭರವಸೆ ಮೂಡಿಸಿದ್ದು ಮೋದಿ. ರಾಮಮಂದಿರ, ಆರ್ಟಿಕಲ್ 370 ರದ್ದು, ಅಭಿವೃದ್ಧಿ ಎಲ್ಲವೂ ಮೋದಿ ಕಾಲದಲ್ಲಿ ಆಗಿದೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ. ನಾವು ರಕ್ಷಣೆ ಮಾಡ್ತೇವೆ ಎಂದು ಖರ್ಗೆ ಹೇಳ್ತಾರೆ. ಮೋದಿ ಮತ್ತೆ ಪ್ರಧಾನಿ ಆಗಬಾರದು ಅಂತ ಖರ್ಗೆ ಕರೆ ಕೊಡ್ತಾರೆ. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಕಗ್ಗೊ*ಲೆ ಮಾಡಿದ್ದಾರೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾ ಸಾಹೇಬರ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಅಂಬೇಡ್ಕರ್ ರ ಪಂಚ ತೀರ್ಥಕ್ಷೇತ್ರ ಅಭಿವೃದ್ಧಿ ಮಾಡಿದ್ದು ಮೋದಿ – ಬಿಜೆಪಿ ಸರಕಾರ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್
DAKSHINA KANNADA
ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!
ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.
ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.
Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
DAKSHINA KANNADA
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್
ಬಂಟ್ವಾಳ : ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಪೋರೇಟರ್ ಆಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ಕವಿತಾ ಸನಿಲ್ ವಿಧಾನ ಸಭಾ ಚುನಾವಣೆಯಲ್ಲೂ ಸಾಕಷ್ಟು ಪ್ರಚಾರ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಅವರಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಕವಿತಾ ಸನಿಲ್ ಸದ್ಯ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ತನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಪಕ್ಷ ಚಟುವಟಿಕೆಯಿಂದ ದೂರ ಉಳಿದಿದ್ದರು. ಯಾವುದಾದರು ಒಂದು ನಿಗಮ ಸಿಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾದ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಟ್ವಾಳಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಬಿಜೆಪಿ ಬಾವುಟ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!