ಮೋಟಾರ್ ಪಂಪ್ ಸ್ವಿಚ್ ಆರ್ಫ ಮಾಡಲು ಹೋಗಿ ವಿದ್ಯುತ್ ತಗಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಸಾಯದಲ್ಲಿ ನಡೆದಿದೆ.
ಕಾಸರಗೋಡು: ಮೋಟಾರ್ ಪಂಪ್ ಸ್ವಿಚ್ ಆರ್ಫ ಮಾಡಲು ಹೋಗಿ ವಿದ್ಯುತ್ ತಗಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಸಾಯದಲ್ಲಿ ನಡೆದಿದೆ.
ಕಾಟುಕುಕ್ಕೆ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಜಿತೇಶ್ (17) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಸಾಯ ಗುಳಿಗೆ ಮೊಲೆಯಲ್ಲಿರುವ ಮನೆ ಸಮೀಪ ಪಂಪ್ ಶೆಡ್ ನಲ್ಲಿ ಈ ಘಟನೆ ನಡೆದಿದೆ.
ಮೋಟಾರ್ ಪಂಪ್ ಆಫ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗಲಿದೆ.
ಕೂಡಲೇ ಸ್ಥಳೀಯರ ನೆರವಿನೊಂದಿಗೆ ಮನೆಯವರು ವಿಟ್ಲದ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.