BANTWAL
ತಾರಕ್ಕೇರಿದ ರಮಾನಾಥ ರೈ – ಹರಿಕೃಷ್ಣ ಬಂಟ್ವಾಳ್ ವಾಕ್ಸಮರ..!
ತಾರಕ್ಕೇರಿದ ರಮಾನಾಥ ರೈ – ಹರಿಕೃಷ್ಣ ಬಂಟ್ವಾಳ್ ವಾಕ್ಸಮರ..!
ಮಂಗಳೂರು : ಮಾಜಿ ಸಚಿವ ರಮಾನಾಥ ರೈ ಮತ್ತು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರ ವಾಕ್ಸಮರ ಜೋರಾಗಿದೆ. ಮಾಜಿ ಸಚಿವ ರಮಾನಾಥ ರೈ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿ ನಡೆಸಿ ತೀರುಗೇಟು ನೀಡಿದ್ದಾರೆ.
ನಾನು ಎಲ್ಲಿಯೂ ರಮಾನಾಥ ರೈಯನ್ನ ಕೊಲೆಗಾರ ಎಂದು ಹೇಳಿಲ್ಲ. ನನ್ನನ್ನು ಬಂಧಿಸಿ ಎಂದು ಹೇಳುವ ರಮಾನಾಥ ರೈಯವರನ್ನು ಮೊದಲು ಬಂಧಿಸಬೇಕು. ಮೋದಿ, ಪಾಕ್ ಪ್ರಧಾನಿ ತಾಯಿ ಒಂದೇ ಎಂದು ರಮಾನಾಥ ರೈ ಹೇಳಿದ್ದರು.
ರಾಜ್ಯದಲ್ಲಿ ನಡೆದ ಹತ್ಯೆ ಹಿಂದೆ ಪಿಎಫ್ ಐ ಕೈವಾಡವಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ ಐ ಮೇಲಿನ 1,600 ಕೇಸ್ ಗಳನ್ನು ಕೈ ಬಿಟ್ಟಿದ್ದರು. ರಮಾನಾಥ ರೈ ನಿಮಗೆ ಯಾವ ಶಿಕ್ಷೆ ಕೊಡಬೇಕು..? ಕಾಂಗ್ರೆಸ್, ಪಿಎಫ್ ಐ ಎರಡೂ ಒಂದೇ. ಕಾಂಗ್ರೆಸ್ ನಿಮಗೆ ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಲ್ಲ. ರಮಾನಾಥ ರೈಗೆ ಮುಂದೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಅಂತ್ಯವಾದಂತೆ ಎಂದು ಹರಿಕೃಷ್ಣ ಭವಿಷ್ಯ ನುಡಿದರು.
ಬಿಜೆಪಿ ಎಸ್ ಡಿಪಿಐ ಮಧ್ಯೆ ನೇರ ಸ್ಪರ್ಧೆ ಇರುತ್ತದೆ. ರಮಾನಾಥ ರೈ ಮುಖ ಭಾರತ, ದೇಹ, ಮನಸ್ಸು ಪಾಕಿಸ್ತಾನದ್ದು ಎಂದು ವ್ಯಂಗ್ಯ ಮಾಡಿದ ಹರಿಕೃಷ್ಣ, ಕಾಂಗ್ರೆಸ್ ಪಿಎಫ್ ಐ ಗಂಡಬೇರುಂಡ ಇದ್ದಂತೆ.
ಹಿಂದೊಮ್ಮೆ ರೌಡಿ ರಮಾನಾಥ ರೈಗೆ ಯಾಕೆ ಟಿಕೆಟ್ ಕೊಟ್ರಿ ಅಂತಾ ವೀರಪ್ಪ ಮೊಯ್ಲಿ ಕೇಳಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸುವಾಗ ನಿಮಗೆ ಸಂಪಾದನೆ ಇತ್ತಾ ರಮಾನಾಥ ರೈಯವರೇ..? ಎಂದು ಹರಿಕೃಷ್ಣ ಪ್ರಶ್ನಿಸಿದರು.
ರಮಾನಾಥ ರೈಯವರೇ ನೀವು ಆ ಎರಡು ಕೊಲೆಗಳ ಬಗ್ಗೆ ಯಾಕೆ ಮಾತನಾಡಿಲ್ಲ..? ನನ್ನ ಡಿಎನ್ಎ ಪ್ರಶ್ನೆ ಮಾಡಿದ್ದರು ಅಂತಾ ರೈ ಹೇಳಿದ್ದರು. ರಮಾನಾಥ ರೈ ಯಿಂದ ಕಾಂಗ್ರೆಸ್ ದಿವಾಳಿಯಾಗುವುದು ಖಚಿತ.
ನನ್ನನ್ನು ಬಂಧಿಸಿ ಅಂತಾ ರಮಾನಾಥ ರೈ ಅಲೆದಾಡುತ್ತಿದ್ದಾರೆ. ಇವರಿಗೆ ಕಲ್ಲಡ್ಕ ಪ್ರಭಾಕರ್ ಭಟ್ ಕೂದಲು ಅಲುಗಾಡಿಸಲು ಆಗಲಿಲ್ಲ.
ನನ್ನ ಪತ್ನಿಯನ್ನು ರೇಪ್ ಮಾಡಿ ಕೊಲ್ಲುತ್ತಾರೆ ಅಂದಿದ್ದರು. ಜಲೀಲ್ ಹತ್ಯೆ ಆದಾಗ ನಿಮ್ಮ ಮೇಲೆ ಆರೋಪ ಮಾಡಲಾಗಿತ್ತು.
ಕಾಂಗ್ರೆಸ್ಸಿಗರೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ರಮಾನಾಥ ರೈ ನಳಮಹಾರಾಜನಿಗೆ ಕಚ್ಚಿದ ಕಾರ್ಕೋಟ ಇದ್ದಂತೆ ಎಂದು ಹರಿಕೃಷ್ಣ ವಾಗ್ದಾಳಿ ನಡೆಸಿದರು.
BANTWAL
ಬಂಟ್ವಾಳ: ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಮೃ*ತ್ಯು
ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ವೋರ್ವರು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ.
ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35) ಮೃ*ತಪಟ್ಟ ದುರ್ದೈವಿ.
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಗುರುವಾರ ಸಂಜೆ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ಮನೆಯೊಂದರ ವಯರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿದೆ. ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಾಳುವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ದೇವದಾಸ್ ರವರು ಮೃ*ತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
BANTWAL
ಬಂಟ್ವಾಳ | ಗಣೇಶೋತ್ಸವ ಶೋಭಾಯಾತ್ರೆ ವೇಳೆ ಪಾನೀಯ, ಸಿಹಿತಿಂಡಿ ನೀಡಬೇಡಿ: ಮಸೀದಿಗೆ ಭಜನಾ ಮಂದಿರದಿಂದ ಪತ್ರ
ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರಿನಲ್ಲಿ ಈ ಹಿಂದೆ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ಹಂಚಿ ಸೌಹಾರ್ದತೆಯನ್ನು ಮೆರೆದಿದ್ದರು. ಅದು ಭಾರೀ ಸುದ್ದಿಯಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಹಿಂದೂ – ಮುಸ್ಲಿಂ ಸೌಹಾರ್ದತೆಗೆ ಬ್ರೇಕ್ ಬಿದ್ದಿದೆ. ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷ ಗಣೇಶೋತ್ಸವದ ವೇಳೆ ಇಲ್ಲಿನ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಕಳೆದ ವರ್ಷ ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಸಿಹಿ ತಿಂಡಿ ಹಂಚುತ್ತಿರುವುದು ನಡೆದುಕೊಂಡು ಬಂದಿತ್ತು.
ಆದರೆ, ಕಳೆದ ವರ್ಷ ತಂಪು ಪಾನೀಯ, ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥರಾದ ಆರೋಪದಲ್ಲಿ ಈ ಬಾರಿ ಅದಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಎರಡು ಸಮುದಾಯಗಳ ನಡುವಣ ಸಾಮರಸ್ಯ ಕೆಡುವ ಆತಂಕವೂ ಎದುರಾಗಿದೆ. ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಬರೆದಿರುವ ಪತ್ರದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ. ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ.
ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗ್ರತೆಗಾಗಿ ತಮ್ಮಲ್ಲಿ ಮನವಿ ಮಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಿಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’’ ಎಂದು ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ಬರೆದಿದ್ದು ಎನ್ನಲಾದ ವೈರಲ್ ಆಗಿರುವ ಪತ್ರದಲ್ಲಿ ಉಲ್ಲೇಖವಾಗಿದೆ.
BANTWAL
ಕಾರು-ಲಾರಿ ಮುಖಾಮುಖಿ ಡಿಕ್ಕಿ; ಕಾರಿನಲ್ಲಿದ್ದ ವ್ಯಕ್ತಿ ಗಂಭೀ*ರ
ಬಂಟ್ವಾಳ: ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಕ್ರೆಟ್ಟಾ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡೂ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನಡೆದ ಈ ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸಜಿಪ ಎಂಬಲ್ಲಿ ಅಂಗಡಿ ನಡೆಸುತ್ತಿದ್ದ ಬೋಳಂಗಡಿಯ ಮುಸ್ತಾಫ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಕಾರಿನಲ್ಲಿದ್ದ ಮುಸ್ತಾಫ ಅವರಿಗೆ ಗಂಭೀರ ಗಾಯವಾಗಿದೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಮುಸ್ತಾಫ ಅವರನ್ನು ಕಾರಿನಿಂದ ಹೊರಗೆ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರೀತಿಗಾಗಿ ಪೀಡಿಸಿದ ಅನ್ಯಮತೀಯ ಯುವಕ ಪೊಲೀಸ್ ವಶಕ್ಕೆ..!
ತೀವ್ರ ಸ್ವರೂಪದ ಗಾಯವಾಗಿರುವ ಮುಸ್ತಾಫ ಅವರಿಗೆ ಬಂಟ್ವಾಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಗಾಯಾಳು ಮುಸ್ತಾಫ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!