ಮಂಗಳೂರು/ಉಡುಪಿ : ಮೀನಿನ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಮಳೆಗಾಲದ ಎರಡು ತಿಂಗಳ ನಿಷೇಧದ ಬಳಿಕ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಋತು ಇಂದಿನಿಂದ ( ಆ.1) ಆರಂಭಗೊಂಡಿತು.
Muslim boatowner with hindu saliors
ಲಂಗರು ಹಾಕಿ ದಡ ಸೇರಿದ್ದ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಈ ಋತುವಿನ ಮೀನುಗಾರಿಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದವು.
ಇಂದಿನಿಂದ ಹೊಸ ಮೀನುಗಾರಿಕಾ ಋತು ಆರಂಭವಾಗಲಿದ್ದು, ವಾತಾವರಣದಲ್ಲಿನ ಪರಿಸ್ಥಿತಿ ಅವಲೋಕಿಸಿಕೊಂಡು ಸಮುದ್ರಕ್ಕಿಳಿಯುವ ಬಗ್ಗೆ ಮೀನುಗಾರರರು ನಿರ್ಧರಿಸಿದ್ದಾರೆ.
ಆಳ ಸಮುದ್ರ ಮೀನುಗಾರಿಕೆಗೆ ಅಗತ್ಯವಿರುವ ಐಸ್‌ಪ್ಲಾಂಟ್‌ಗಳು ನಿನ್ನಿಯಿಂದಲೇ ತೆರೆದುಕೊಂಡಿದ್ದು, ಮೀನುಗಾರರು ಕಳೆದ ತಿಂಗಳಲ್ಲೇ ಬೋಟ್, ಎಂಜಿನ್, ಬಲೆಗಳ ದುರಸ್ತಿ ಮಾಡಿಕೊಂಡಿದ್ದಾರೆ.
ಮೀನುಗಾರಿಕೆಗೆ ತೆರಳುವ ಹೊರರಾಜ್ಯಗಳ ಕಾರ್ಮಿಕರು ಕೂಡ ಆಗಮಿಸಿದ್ದಾರೆ. ಈ ಬಾರಿ ಭಾರಿ ಮಳೆ, ತೂಫಾನ್‌ನಿಂದ ಸಮುದ್ರ ಅಲ್ಲೋಲ ಕಲ್ಲೋಲವಾಗಿದ್ದು, ಹೆಚ್ಚಿನ ಮೀನುಗಾರಿಕೆ ನಿರೀಕ್ಷಿಸಲಾಗಿದೆ.
ಕಳೆದೆರಡು ತಿಂಗಳಿನಿಂದ ನಾಡದೋಣಿ ಮೀನುಗಾರಿಕೆ ನಡೆಯುತ್ತಿದ್ದು, ಮಳೆಗಾಲದ ಎರಡು ತಿಂಗಳ ಕಾಲ ಮೀನು ಮೊಟ್ಟೆ ಇಡುವ ಅವಧಿ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿತ್ತು.
ಮಲ್ಪೆ ಬಂದರಿನಲ್ಲಿ ಸುಮಾರು 1500ಕ್ಕೂ ಅಧಿಕ ಯಾಂತ್ರೀಕೃತ ಬೋಟ್‌ಗಳನ್ನು ಸಜ್ಜುಗೊಳಸಲಾಗಿದ್ದು ಮತ್ಸ್ಯ ಬೇಟೆಗೆ ಅವರು ಇಂದಿನಿಂದ ಸಮುದ್ರಕ್ಕಿಳಿಯಲಿದ್ದಾರೆ.
ಬಲೆ, ಡೀಸೆಲ್ ಸಂಗ್ರಹ, ಮಂಜುಗಡ್ಡೆಯನ್ನು ಹಾಕಿ ಸಜ್ಜುಗೊಳಿಸಲಾಗುತ್ತಿದ್ದರೂ ಮಲ್ಪೆಯಲ್ಲಿ ಪೂರ್ಣ ಪ್ರಮಾಣದ ಯಾಂತ್ರೀಕೃತ ಮೀನುಗಾರಿಕೆ ಸಮುದ್ರ ಪೂಜೆ ಸಲ್ಲಿಸಿ, ದೇವರಿಗೆ ಮೊರೆ ಇಟ್ಟ ಬಳಿಕವೇ ಆರಂಭವಾಗುವುದೆಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಮೀನುಗಾರಿಕೆಗೆ ತೆರಳಲು ಬೋಟ್‌ಗಳಿಗೆ ತಿಂಗಳಿಗೆ ಸುಮಾರು 15 ಸಾವಿರ ಲೀ. ಡೀಸೆಲ್ ಅಗತ್ಯವಿದ್ದು, ಸರಕಾರ 9 ಸಾವಿರ ಲೀ. ಡೀಸೆಲ್ ತೆರಿಗೆ ರಹಿತವಾಗಿ ಪೂರೈಕೆ ಮಾಡುತ್ತಿದೆ. ಉಳಿದ ಡೀಸೆಲ್ ತೆರಿಗೆ ಸಹಿತ ಖರೀದಿ ಮಾಡಬೇಕಾಗುತ್ತದೆ.
ಡೀಸೆಲ್ ದರ ಹೆಚ್ಚಳದಿಂದ ಮೇ ತಿಂಗಳಲ್ಲಿ ಹೆಚ್ಚಿನ ಬೋಟ್‌ಗಳು ದಡ ಸೇರಿದ್ದವು. ಮೇ ಅಂತ್ಯಕ್ಕೆ ಡೀಸೆಲ್ ದರ ಕಡಿಮೆಯಾಗಿದ್ದರೂ, ಹೆಚ್ಚಿನ ಲಾಭ ಸಿಕ್ಕಿರಲಿಲ್ಲ.
ಇದೀಗ ಡೀಸೆಲ್ ದರ ಇಳಿಕೆಯಿಂದ ಮೀನುಗಾರರಿಗೆ ಭರಪೂರ ಲಾಭವಾಗಲಿದೆ.ಸರಕಾರದ ಆದೇಶದಂತೆ, ಆಳಸಮುದ್ರ ಮೀನುಗಾರಿಕೆಯನ್ನು ಆ.1ರಂದೇ ಆರಂಭಿಸಲಿದ್ದೇವೆ. ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರ್ಸಿನ್ ಬೋಟ್‌ಗಳು 12 ದಿನಗಳ ನಂತರ ಮೀನುಗಾರಿಕೆಗೆ ತೆರಳಲಿವೆ.