Thursday, December 2, 2021

ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಘೋಷಿಸಿದ ಸಹಕಾರ ಸಚಿವ

ಮಂಗಳೂರು: ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ ಮಾಡುತ್ತೇವೆ ಎಂದು ಸಹಕಾರಿ ಸಚಿವ ಎಸ್‌ಟಿ ಸೋಮಶೇಖರ್‌ ಘೋಷಿಸಿದ್ದಾರೆ.


ನಗರ ಹೊರವಲಯದ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಬಿಜೆಪಿ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಡಿಸಿಸಿ ಬ್ಯಾಂಕ್‌ ಪ್ರತ್ಯೇಕಕ್ಕೆ ಸಹಕಾರ ಇಲಾಖೆಯಲ್ಲಿರುವವರ ಒತ್ತಾಸೆ ಇದೆ. ಮಂಗಳೂರಿನ ಶಾಸಕರು,

ಲೋಕಸಭಾ ಸದಸ್ಯರು ಮತ್ತು ಅನೇಕರು ಈ ಬಗ್ಗೆ ಹೇಳಿದ್ದಾರೆ. ಮಂಗಳೂರು ಡಿಸಿಸಿ ಬ್ಯಾಂಕ್‌ ನವೋದಯ ಎಂದು ಸ್ವಸಹಾಯ ಸಂಘ ಮಾಡಿದೆ. ಈ ಬಗ್ಗೆ ನಾನೇನೂ ಆಬ್ಜೆಕ್ಷನ್‌ ಮಾಡುವುದಿಲ್ಲ, ನಾನು ಅದರ ಮ್ಯಾನೇಜ್‌ಮೆಂಟ್‌ನ ಟ್ರಸ್ಟಿಯಾಗಿದ್ದರೂ,

ಡಿಸಿಸಿ ಬ್ಯಾಂಕ್‌ನಲ್ಲಿ ನವೋದಯ ಸಂಘಕ್ಕೆ ಅವಕಾಶ ನೀಡುವುದು ಕಾನೂನು ಬಾಹಿರ ಎಂದು ವಾಗ್ದಾಳಿ ನಡೆಸಿದರು.
ಡಿಸಿಸಿ ಬ್ಯಾಂಕ್‌ ನವೋದಯ ಟ್ರಸ್ಟ್‌ ಪ್ರತೀ ತಿಂಗಳು 19 ಲಕ್ಷ ವರ್ಗಾವಣೆ ಮಾಡುತ್ತಾರಲ್ವ ಅದು ಕಾನೂನು ಬಾಹಿರ. ಯಾವುದೇ ಅಧಿಕಾರಿ ಇದಕ್ಕೆ ಬೆಂಬಲ ನೀಡುತ್ತಾರೋ ಅವರನ್ನು ನಾನು ಸಹಕಾರ ಮಂತ್ರಿಯಾಗಿ ಯಾರನ್ನೂ ನಾನು ಟಾಲರೇಟ್‌ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾರೇ ದೊಡ್ಡವರಿರಲಿ,

ಯಾರದ್ದೇ ಹೆಸರು ಹೇಳಿದರೂ, ಯಾರನ್ನೂ ಎಷ್ಟೇ ವರ್ಷ ಸಹಕಾರ ಇಲಾಖೆಯಲ್ಲಿದ್ದವರನ್ನು ಬಿಡುವುದಿಲ್ಲ. ಅವರು ಅಧ್ಯಕ್ಷರಿರಲಿ, ರಾಜಕೀಯ ಬೆಂಬಲ ಇರಲಿ. ಅವರನ್ನು ಮಟ್ಟ ಹಾಕುವ ಅಧಿಕಾರಿಗಳು ಈ ಮಂಗಳೂರಿನಲ್ಲಿ ಇರಬೇಕಾಗುತ್ತದೆ.

ಇದಕ್ಕೆ ಬೆಂಬಲ ನೀಡುವವರನ್ನು ಸಸ್ಪೆಂಡ್‌ ಮಾಡಬೇಕಾಗುತ್ತದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಾನು ಹೇಳಿದ್ದೇ ಕಾನೂನು, ನಾನು ಹೇಳಿದವರಿಗೆ ಲೋನ್‌,

ನಾನು ಹೇಳಿದ ಸ್ತ್ರೀ ಶಕ್ತಿಗೆ ಲೋನ್‌ ಕೊಡುತ್ತೇವೆ ಎಂಬ ಮದದಿಂದ ಅಧ್ಯಕ್ಷಗಿರಿ ನಡೆಸುತ್ತಾರೋ ಅದಕ್ಕೆಲ್ಲಾ ಕಡಿವಾಣ ಹಾಕುವ ಕಾನೂನು ತರುತ್ತೇವೆ ಎಂದು ಎಚ್ಚರಿಸಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...