Home ಕರ್ನಾಟಕ ವಾರ್ತೆ ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಿಎಂ..

ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಿಎಂ..

ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಿಎಂ..

ಬೆಂಗಳೂರು: ಇಂದು (ಜೂ.27) ನಾಡಪ್ರಭು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿ. ಈ ನಡುವೆಯೇ ವಿಶ್ವದಲ್ಲೇ ಅತಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.

ನಾಡಪ್ರಭು ಕೆಂಪೇಗೌಡರ ಹೆಸರನ್ನು ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಚಿರಸ್ಥಾಯಿಗೊಳಿಸಲು 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಹಾಗೂ

ಥೀಮ್ ಪಾರ್ಕ್‍ಗೆ ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಂಭಾಗ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಸಿಎಂಗಳಾದ ಡಾ.ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ,

ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಕೆ.ಗೋಪಾಲಯ್ಯ, ಭೈರತಿ ಬಸವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,

ಶ್ರೀಗಳಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಗಳು, ಸಿದ್ದಗಂಗ ಮಠದ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶ್ರೀ ದೇಶೀಕೇಂದ್ರ ಸ್ವಾಮೀಜಿ,

ವಿಶ್ವ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ ಸೇರಿದಂತೆ ಮತ್ತಿತರ ಗಣ್ಯರು ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಲಿದ್ದು, ಮುಂದಿನ ವರ್ಷ ಇದೇ ವೇಳೆಗೆ ಪ್ರತಿಮೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಅದ್ಧೂರಿ ಕಾರ್ಯಕ್ರಮ ನಡೆಸದೆ ಸಾಮಾಜಿಕ ಅಂತರ ಕಾಪಾಡಿಕೊಂಡೇ ಗಣ್ಯಾತಿ ಗಣ್ಯರು ಪ್ರತಿಮೆ ಹಾಗೂ ಥೀಮ್‍ ಪಾರ್ಕ್ ನಿರ್ಮಾಣಕ್ಕೆ ಚಾಲನೆ ಕೊಟ್ಟರು.

RECENT NEWS

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..!

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..! ತಿರುವಂತನಪುರ : ಸಾಲುಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್​ನ ಮಾಜಿ ಬಿಷಪ್ ಫ್ರಾಂಕೊ ಮುಲಾಕ್ಕಲ್ ಜಾಮೀನು ಅರ್ಜಿಯನ್ನು...

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..!

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..! ನವದೆಹಲಿ : ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮತ್ತು ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ...

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...
error: Content is protected !!