Connect with us

    DAKSHINA KANNADA

    ಮಂಗಳೂರು: ಎ.ಜೆ ಆಸ್ಪತ್ರೆಗೆ ಭೇಟಿ ನೀಡಿ ಸಂಸದ ನಳಿನ್ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ

    Published

    on

    ಮಂಗಳೂರು: ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇಂದು ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು, ನಗರದ ಏಜೆ ಆಸ್ಪತ್ರೆಗೆ ಭೇಟಿ ನೀಡಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆರೋಗ್ಯ ವಿಚಾರಿಸಿದರು.


    ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಲೋಕಸಭಾ ಸದಸ್ಯ ಡಿ.ವಿ. ಸದಾನಂದ ಗೌಡ, ಶಾಸಕ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹಾಗೂ ಇತರೆ ಗಣ್ಯರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಪುತ್ತೂರು : ಖಾಸಗಿ ಆಸ್ಪತ್ರೆಯಲ್ಲಿ ಅ*ಗ್ನಿ ಅವಘ*ಡ

    Published

    on

    ಪುತ್ತೂರು : ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಬೆಂ*ಕಿ ಕಾಣಿಸಿಕೊಂಡಿದ್ದು, ಅ*ಗ್ನಿಶಾಮಕ ದಳದವರು ಬೆಂ*ಕಿ ನಂದಿಸುವಲ್ಲಿ ಯಶಸ್ಸಿಯಾಗಿದ್ದಾರೆ.

    ಬೊಳುವಾರಿನ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯುತ್ ಮೀಟರ್ ಬೋರ್ಡ್‌ನ ಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಜಂಕ್ಷನ್ ಬಾಕ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಇದನ್ನೂ ಓದಿ : ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ

    ಆಸ್ಪತ್ರೆಯ ತುಂಬಾ ಹೊಗೆ ತುಂಬಿಕೊಂಡಿದ್ದು, ತಕ್ಷಣ ಆಗ್ನಿಶಾಮಕ ದಳದವರು ಆಗಮಿಸಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ. ರೋಗಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಲಾಗಿದೆ.

    Continue Reading

    DAKSHINA KANNADA

    ಎಂ ಆರ್ ಎಫ್ ಘಟಕ ಸ್ಥಾಪನೆಗೆ ರಾಜ್ಯ ಸರಕಾರದ ಅನುಮೋದನೆ

    Published

    on

    ಮಂಗಳೂರು ; ಮಂಗಳೂರಿನ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯಗಳೆಲ್ಲವನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂ ಆರ್ ಎಫ್) ಘಟಕವ ಸ್ಥಾಪಿಸುವ ಸಲುವಾಗಿ ಮಹಾನಗರ ಪಾಲಿಕೆಯಿಂದ ಕಳುಹಿಸಲಾಗಿದ್ದ ಯೋಜನಾ ವರದಿಗೆ ರಾಜ್ಯ ಸರ್ಕಾರದಿಂದ ತಾಂತ್ರಿಕ ಅನುಮೋದನೆ ಲಭಿಸಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ ಗಳಲ್ಲಿ ವದಿನಂಪ್ರತಿ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು ಅದರಲ್ಲಿ 300 ಟನ್ ಗಳಷ್ಟು ಹಸಿ ಕಸ ಪ್ರತಿನಿತ್ಯ ಡಂಪಿಂಗ್ ಯಾರ್ಡ್ ಗೆ ಸೇರುತ್ತಿದೆ. ಶೇ.70 ರಷ್ಟು ಹಸಿ ಕಸ – ಶೇ, 30 ರಷ್ಟು ಒಣ ಕಸ ಎನ್ನುವುದಾಗಿ ವಿಭಜಿಸಲಾಯಿತು. ಒಣ ತ್ಯಾಜ್ಯವನ್ನು ಮಾತ್ರ ಸದ್ಯ ವಿಲೇವಾರಿ ಮಾಡಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅದರ ಮರು ಬಳಕೆ ಮಾಡಲಾಗುತ್ತಿದೆ.

    ಯೋಜನೆಗೆ ತಗುಲುವ ವೆಚ್ಚ 11.04 ಕೋ.ರೂ.

                          ತ್ಯಾಜ್ಯ ವಿಲೇವಾರಿಯು ಒಂದು ದೊಡ್ಡ ಸಮಸ್ಯೆಯಾಗಿ ನಮ್ಮ ಕಣ್ಣೆದುರು ಬಂದು ನಿಂತಿದೆ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಒಂದು ವೇಳೆ ಸದಿಯಾದ  ಇದ್ದಲ್ಲಿ ರಾಜ್ಯ ಸರ್ಕಾರದ ಮೆಲೆ ಕಠಿಣ ಕ್ರಮದೊಡನೆ ದಂಢ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಘಟಕ ನಿರ್ಮಾಣದ ಉದ್ದೇಶ ಮಂಗಳೂರಿನಲ್ಲಿ 11.04 ಕೋ.ರೂ. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿನ ಅನುದಾನ 5.10 ಕೋ. ಆಗಿದ್ದು ಬಾಕಿ ಉಳಿದ 5.94 ಕೋ. ಮಹಾನಗರ ಪಾಲಿಕೆ ಒದಗಿಸಬೇಕು. ಶೇ.30 ಹೊಂದಿಕೊಳ್ಳಲು ಅವಕಾಶವಿದೆ ಎನ್ನುತ್ತಾರೆ ಸುಧೀರ್ ಶೆಟ್ಟಿ ಕಣ್ಣೂರು.

    ಘಟಕ ನಿರ್ಮಾಣಕದ ಸಮಯ 6 ತಿಂಗಳು

                       ರಾಜ್ಯ ಸರ್ಕಾರ ಎಂ ಆರ್ ಎ‍ಫ್ ಘಟಕಗಳ ನಿರ್ಮಾಣಕ್ಕೆ ಈಗಾಗಲೇ ಸೂಚನೆಯನ್ನು ನೀಡಿದೆ. ಟೆಂಡರ್ ಬರಬೇಕಂದರೆ ಮೊದಲೇ ಮಂಜೂರಾತಿ ನೀಡಬೇಕು. ದೊಡ್ಡ ಮೊತ್ತದ ಯೋಜನೆಯಾಗಿರುವುದರಂದ ಇದರ ಪ್ರಕ್ರಿಯೆಯು  ರಾಜ್ಯ ಮಟ್ಟದಲ್ಲಿ ನಡೆಯಬೇಕು. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಪಕ್ಷ 6 ತಿಂಗಳಾದರು ಬೆಕಾಗಬಹುದು ಎಂಬ ನಿರೀಕ್ಷೆ ಇದೆ. 109 ಟನ್ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯ ಪಚ್ಚನಾಡಿಯಲ್ಲಿ ನಿರ್ಮಾಣವಾಗಲಿರುವ ಎಂ ಆರ್ ಎಫ್ ಘಟಕ ಹೊಂದಿದೆ. 11.04 ಕೋ.ರೂ ವೆಚ್ಚದಲ್ಲಿ 8.55 ಕೋ ಘಟಕದ ರಚನೆ ಹಾಗು ಸಿವಿಲ್ ಕೆಲಸಗಳಿಗೆ ಮೀಸಲಿಡಲಾಗಿದೆ. 2.49 ಕೋ. ಮೊತ್ತವನ್ನು ಘಟಕದಲ್ಲಿ ಕಾರ್ಯಾಚರಿಸುವ ವೇ ಬ್ರಿಡ್ಜ್, ಟ್ರೋಮೆಲ್ ಯಂತ್ರ, ಕನ್ವೇಯರ್, ಮ್ಯಾಗ್ನೇಟಿಕ್ ಸಪರೇಟರ್, ಏರ್ ಬ್ಲೋಮರ್, ಅಟೋಮ್ಯಾಟಿಕ್ ಹೊರಿಝಾಂಟಲ್ ಬೈಲಿಂಗ್ ಮಿಷನ್, ಶ್ರೇಡ್ಡರ್, ಸ್ಟೋರೇಜ್ ಬಿನ್, ವೀಲ್ ಬ್ಯಾರೋ, ಬೇಲರ್ ಯಂತ್ರ, ಅಗ್ನಿಶಮನ ಯಂತ್ರಗಳು, ಎಲೆಕ್ಟ್ರಿಕಲ್ ಉಪಕರಣ, ಲೋಡರ್ ಹೊಂದಿರುವ ಟ್ರ್ಯಾಕ್ಟರ್ ಮೊದಲಾದ ಯಂತ್ರಗಳ ಖರೀದಿಗೆ ಮೀಸಲಿರಿಸಲಾಗಿದೆ

    Continue Reading

    DAKSHINA KANNADA

    ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ

    Published

    on

    ಮಂಗಳೂರು : ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದನ್ನು ಹಲವರು ಇಷ್ಟ ಪಡುತ್ತಾರೆ. ಹೆಚ್ಚಿನವರ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದನ್ನು ಕಾಣುತ್ತೇವೆ. ತಮ್ಮ ಮಕ್ಕಳಂತೆ ಅವುಗಳನ್ನು ಮುದ್ದು ಮಾಡುತ್ತಾರೆ. ಆದ್ರೆ, ಇಲ್ಲಿ ಮಾತ್ರ ಆಗಿರೋದು ಬೇರೆ.

    ಹೌದು, ಜೀವಂತ ಸಾಕು ನಾಯಿಯನ್ನು ಮನೆ ಮಾಲಕರು ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೊಟ್ಟ ಹೇಯ ಕೃ*ತ್ಯ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ನಗರದ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಾಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.

    ಇದನ್ನೂ ಓದಿ : ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು

    ಘಟನೆಯ ವಿಡೀಯೋ ಸಿಟಿ ಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

    Continue Reading

    LATEST NEWS

    Trending