Friday, August 19, 2022

ಇಂದಿನಿಂದ ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ

ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದೇ ಏ. 12 ಮತ್ತು 13ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಅವರು ಏ.12ರ ಮಂಗಳವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಮಣಿಪಾಲ್‍ನಿಂದ ಬೆಳಿಗ್ಗೆ 9 ಗಂಟೆಗೆ ಮಂಗಳೂರಿಗೆ ಆಗಮಿಸುವರು.


ಬೆಳಿಗ್ಗೆ 9 ರಿಂದ ರಾತ್ರಿ 7 ಗಂಟೆಯ ವರೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿರುವ ಸಭೆಗಳಲ್ಲಿ ಭಾಗವಹಿಸುವರು. ರಾತ್ರಿ 7.30ಕ್ಕೆ ಮಂಗಳೂರಿನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ರಾತ್ರಿ 8.15ಕ್ಕೆ ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವರು. 8.45ಕ್ಕೆ ಅಲ್ಲಿಂದ ಹಿಂತಿರುಗಿ ರಾತ್ರಿ 9.15ಕ್ಕೆ ಮಂಗಳೂರಿಗೆ ಆಗಮಿಸಿ, ನಗರದಲ್ಲಿ ವಾಸ್ತವ್ಯ ಮಾಡುವರು.
ಏ.13ರ ಬುಧವಾರ ಬೆಳಿಗ್ಗೆ 8.30ಕ್ಕೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಬಂಟ್ವಾಳಕ್ಕೆ ತೆರಳಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಸಭೆಗಳಲ್ಲಿ ಭಾಗವಹಿಸುವರು.
ಮಧ್ಯಾಹ್ನ 12.30ಕ್ಕೆ ಬಂಟ್ವಾಳದಿಂದ ರಸ್ತೆ ಮಾರ್ಗವಾಗಿ ನಿರ್ಗಮಿಸಿ 1.05ಕ್ಕೆ ಬಜಪೆಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, 1.40ಕ್ಕೆ ವಿಮಾನದ ಮೂಲಕ ಹೊರಟು ಮಧ್ಯಾಹ್ನ 2.35ಕ್ಕೆ ಬೆಂಗಳೂರು ತಲುಪುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ…!

ಕಾಸರಗೋಡು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ ಹಾಕಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಸುರತ್ಕಲ್ ನ ಬಿನೋಯ್ ಯಾನೆ ಸನತ್ ಶೆಟ್ಟಿ ಬಂಧಿತ ಆರೋಪಿ.ಈತ ಸಂಗಮ್...

ಇಂದು & ನಾಳೆ ಮಂಗಳೂರಿನಲ್ಲಿ ಮೂಡುಬಿದ್ರೆ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿವೇಕ್ ಮೋಟಾರ್ ಫೀಡರ್ ಮತ್ತು 11ಕೆ.ವಿ ಮಾರ್ಕೆಟ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10...