LATEST NEWS
ಮೇಲ್ಛಾವಣಿಯಿಂದ ವಿದ್ಯಾರ್ಥಿನಿಯನ್ನು ತಳ್ಳಿ ಹತ್ಯೆ ಮಾಡಿದ ಮಂಗಗಳು
Published
23 hours agoon
By
NEWS DESK2ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಮಂಗವೊಂದು ಮನೆಯ ಮೇಲ್ಛಾವಣಿಯಿಂದ ತಳ್ಳಿದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. ಶನಿವಾರ ಮಧ್ಯಾಹ್ನ ಭಗವಾನ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಮಘರ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಿಯಾ ಕುಮಾರ್ ಅವರು ಮೇಲ್ಛಾವಣಿಯ ಮೇಲೆ ಓದುತ್ತಿದ್ದರು ಎನ್ನಲಾಗಿದೆ. ಈ ವೇಳೆ ಈ ದುರಂತ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಂಗಗಳ ಗುಂಪೊಂದು ಮೇಲ್ಛಾವಣಿಯ ಮೇಲೆ ಕಾಣಿಸಿಕೊಂಡಿತು ಮತ್ತು ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿತು. ಭಯವು ಪ್ರಿಯಾಳನ್ನು ಪಾರ್ಶ್ವವಾಯುವಿಗೆ ತಳ್ಳಿತು, ಈ ಕಾರಣದಿಂದ ಆಕೆಗೆ ಮಂಗಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಈ ವೇಳೆ ಗ್ರಾಮಸ್ಥರು ಗದ್ದಲ ಸೃಷ್ಟಿಸಿದರು. ಈ ವೇಳೆ ಮೆಟ್ಟಿಲುಗಳ ಕಡೆಗೆ ಓಡಿದಾಗ ಮಂಗವೊಂದು ಆಕ್ರಮಣಕಾರಿಯಾಗಿ ಜಿಗಿದು ಆಕೆಯನ್ನು ಬಲವಾಗಿ ತಳ್ಳಿತು, ಇದರಿಂದಾಗಿ ಆಕೆ ಮೇಲ್ಛಾವಣಿಯಿಂದ ಬಿದ್ದಿದ್ದಾಳೆ ಎಂದು ವರದಿಯಾಗಿದೆ.
ಪ್ರಿಯಾ ಅವರ ತಲೆಯ ಹಿಂಭಾಗ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳು ಸೇರಿದಂತೆ ಗಂಭೀರವಾದ ಗಾಯಗಳಾದವು. ಪರಿಣಾಮ ಆಕೆ ಪ್ರಜ್ಞೆ ಕಳೆದುಕೊಂಡಳು. ಪ್ರಿಯಾಳ ಕುಟುಂಬವು ಆಕೆಯನ್ನು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ಯಿತು. ದುರದೃಷ್ಟವಶಾತ್ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಳು.
LATEST NEWS
ಮೊಹಮ್ಮದ್ ಸಿರಾಜ್ ಹಾಗೂ ಝನಾಯಿ ಭೋಸ್ಲೆ ಡೇಟಿಂಗ್ ; ಫೋಟೋ ವೈರಲ್
Published
20 minutes agoon
27/01/2025ಪಾರ್ಟಿಯೊಂದರಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಝನಾಯಿ ಭೋಸ್ಲೆ ಜೊತೆಯಾಗಿ ಕಾಣಿಸಿಕೊಂಡದ್ದು ಅಷ್ಟೇ. ಆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದರ ಬೆನ್ನಲ್ಲೇ ‘ಮೊಹಮ್ಮದ್ ಸಿರಾಜ್ ಹಾಗೂ ಝನಾಯಿ ಭೋಸ್ಲೆ ಡೇಟಿಂಗ್ ಮಾಡುತ್ತಿದ್ದಾರೆ’ ಎಂಬ ಸುದ್ದಿಗಳು ಹುಟ್ಟಿಕೊಂಡಿದೆ.
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರ ಫೋಟೋವೊಂದು ವೈರಲ್ ಆಗಿದ್ದು, ಇದಕ್ಕೆ ಮುಖ್ಯ ಕಾರಣ ಗಾಯಕಿ ಝನಾಯಿ ಭೋಸ್ಲೆ. ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳಾಗಿರುವ ಝನಾಯಿ ಭೋಸ್ಲೆ ಸಿರಾಜ್ ಅವರೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೀಗ ಈ ಬಗ್ಗೆ ಖುದ್ದು ಮೊಹಮ್ಮದ್ ಸಿರಾಜ್ ಸ್ಪಷ್ಟನೆ ನೀಡಿದ್ದು, ‘ಝನಾಯಿ ಭೋಸ್ಲೆ ಅವರು ನನಗೆ ತಂಗಿ ಸಮಾನ. ನನ್ನ ಫ್ರೆಂಡ್ ಆಗಿರುವ ಕಾರಣ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದೆ. ಇದರ ಹೊರತಾಗಿ ಬೇರೇನು ಇಲ್ಲ’ ಎಂದು ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.
ಝನಾಯಿ ಭೋಸ್ಲೆ ಕೂಡ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದು, ‘ಮೊಹಮ್ಮದ್ ಸಿರಾಜ್ ನನ್ನ ಅಣ್ಣ. ನನ್ನ ಪ್ರೀತಿಯ ಅಣ್ಣ’ ಎಂದು ವೈರಲ್ ಆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
BIG BOSS
ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ಧ್ವನಿ ಪ್ರದೀಪ್ ಬಡೆಕ್ಕಿಲ ವಿದಾಯ
Published
28 minutes agoon
27/01/2025By
NEWS DESK2ಹಲವು ಬದಲಾವಣೆಗಳಿಗೆ ಬಿಗ್ ಬಾಸ್ ಕನ್ನಡ 11ರ ಈ ಸೀಸನ್ ಸಾಕ್ಷಿಯಾಗಿದೆ. ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಇದು ತಮ್ಮ ಕೊನೆಯ ಸೀಸನ್ ಎಂದು ಈಗಾಗಲೇ ಘೋಷಿಸಿದ್ದಾರೆ.
ಈ ಸೀಸನ್ ಶುರುವಾಗುವ ಮುನ್ನ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಾರೋ ಎಂಬುದು ದೊಡ್ಡ ಪ್ರಶ್ನೆ ಆಗಿತ್ತು. ಆದರೆ ಈ ಸೀಸನ್ ನಲ್ಲಿ ಸುದೀಪ್ ನಿರೂಪಣೆ ಮಾಡುವುದಾಗಿ ಬಿಗ್ ಬಾಸ್ ಪ್ರೋಮೋದ ಮೂಲಕ ತಿಳಿದುಬಂದಿತ್ತು.
ಕಳೆದ ವಾರ ಕಿಚ್ಚನ ಪಂಚಾಯಿತಿ ಬಳಿಕ ತಮ್ಮ ಕೊನೆಯ ಪಂಚಾಯಿತಿ ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜತೆಗೆ ಬಿಗ್ ಬಾಸ್ ಅಭಿಮಾನಿಗಳು ಇದಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಇದೀಗ ಇನ್ನೊಂದು ಶಾಕ್ ಕೊಟ್ಟಿದ್ದು ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ. ಹೌದು, ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಹಾಗೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ಬಡೆಕ್ಕಿಲ ಪ್ರದೀಪ್ ಮನೆಮಾತಾಗಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಧ್ವನಿಯಾಗಿಯೂ ಪ್ರದೀಪ್ ಅವರೇ ಇದ್ದಾರೆ ಎಂದು ಎಲ್ಲರೂ ಹೇಳುವುದು ಹೌದು. ಹೀಗಾಗಿ ಬಿಗ್ ಬಾಸ್ ಧ್ವನಿ ಎನ್ನಲಾಗುವ ಪ್ರದೀಪ್ ಅವರು ಕೂಡ ಬೆಂಗಳೂರನ್ನು ತೊರೆಯಲಿದ್ದು, ಕಿಚ್ಚ ಸುದೀಪ್ ವಿದಾಯದೊಂದಿಗೆ ಬಿಗ್ ಬಾಸ್ ಧ್ವನಿಯೂ ವಿದಾಯ ಹೇಳಲಿದೆ.
ಬಡೆಕ್ಕಿಲ ಪ್ರದೀಪ್ ಅವರು ಈಗಾಗಲೇ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ತಾವು ಅನಿವಾರ್ಯ ಕಾರಣಗಳಿಂದಾಗಿ ಹುಟ್ಟೂರು ಪುತ್ತೂರಿಗೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.
DAKSHINA KANNADA
ತಡರಾತ್ರಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಜಪ್ಪಿನಮೊಗರು ಬಳಿ ಹೊತ್ತಿ ಉರಿದ ಅಂಗಡಿ
Published
30 minutes agoon
27/01/2025By
NEWS DESK3ಮಂಗಳೂರು : ಭಾನುವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಜಪ್ಪಿನ ಮೊಗರು ಬಳಿಯ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ.
ಜಪ್ಪಿನ ಮೊಗರು ಬಳಿಯ ಗ್ಲಾಸ್ ಸೆಂಟರ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಇಡೀ ಅಂಗಡಿಯನ್ನು ಬಸ್ಮ ಮಾಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ಅಗ್ನಿ ಶಾಮಕದಳಕ್ಕೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯುಟ್ ಕಾರಣ ಅಂತ ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.
ಅಗ್ನಿಯ ಕೆನ್ನಾಲಿಗೆ ಸುಟ್ಟು ಕರಕಲಾದ ಗ್ಲಾಸ್ ಸೆಂಟರ್‌ನಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.
LATEST NEWS
ರಾಜ್ಯದಲ್ಲಿ ತೀವ್ರ ಚಳಿ ಜೊತೆಗೆ 3 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.!
ಗಾರ್ಮೆಂಟ್ ಜಾಬ್ ಸಿಕ್ಕಿದ ಬಳಿಕ ಓದಿಸಿದ ಗಂಡನನ್ನೇ ತೊರೆದ ಹೆಂಡತಿ
50 ಲಕ್ಷದಲ್ಲಿ ಹನುಮಂತನಿಗೆ ಸಿಗೋ ಹಣ ಎಷ್ಟು ಗೊತ್ತಾ?
ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ
“ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ಹನುಮಂತನ ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತನೇ ಗೆಲ್ಲುತ್ತಿದ್ದ- ರಜತ್
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS7 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ