Saturday, September 18, 2021

ಜಿಲ್ಲೆಯಾದ್ಯಂತ ಮತ್ತೆ ಖಾಸಗಿ ಬಸ್‌ ದರ ಏರಿಕೆ

ಮಂಗಳೂರು: ದ.ಕ. ಕೆನರಾ ಬಸ್ ಮಾಲಕರ ಸಂಘ, ಉಡುಪಿಯ ಕರಾವಳಿ ಬಸ್ ಮಾಲಕರ ಸಂಘಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಮೇರೆಗೆ ಪ್ರಾಧಿಕಾರವು ನಿನ್ನೆಯಿಂದ ಅನ್ವಯವಾಗುವಂತೆ ಖಾಸಗಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ.

ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ಬಸ್ಗ‌ಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಮೀ.ಗೆ ಪ್ರತೀ ಪ್ರಯಾಣಿಕರಿಂದ ಕನಿಷ್ಠ ಮೊತ್ತ 4 ಪೈಸೆಯಂತೆ ತೆಗೆದುಕೊಳ್ಳುವಂತೆ ಬಸ್ ಮಾಲಕರಿಗೆ ನಿರ್ದೇಶನ ನೀಡಲಾಗಿದೆ.

ಸಿಟಿ ಬಸ್- ನಗರ: ಮೊದಲ ಸ್ಟೇಜ್‌ಗೆ (2 ಕಿ.ಮೀ.ವರೆಗೆ) ಕನಿಷ್ಠ 12 ರೂ. ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕ್ರಮವಾಗಿ 15ರಿಂದ 30ರೂ.ವರೆಗೆ ಏರಿಕೆ ಮಾಡಲಾಗಿದೆ. ಸಿಟಿ ಬಸ್ ಗ್ರಾಮಾಂತರದಲ್ಲಿ  ಮೊದಲ ಸ್ಟೇಜ್ ಗೆ 2 ಕೀ ಮೀವರೆಗೆ ಕನಿಷ್ಠ 12 ರೂ. ದರ ನಿಗದಿಗೊಳಿಸಲಾಗಿದೆ. ಕ್ರಮವಾಗಿ 30 ರೂ. ಟಿಕೆಟ್ ದರ ಪಡೆಯಬಹುದಾಗಿದೆ.

ಎಕ್ಸ ಪ್ರೆಸ್ ಬಸ್ ದರ: ಮೊದಲ ಸ್ಟೇಜ್ ಗೆ 11 ರೂ. ಟಿಕೆಟ್ ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಕೊನೆಯ 25ನೇ ಸ್ಟೇಜ್ಗೆ ಅಂದರೆ 156ರಿಂದ-163 ಕಿ,ಮೀ ಗೆ 190 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಸಾರಿಕೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...