ಬಂಟ್ವಾಳ ತಾಲೂಕಿನಲ್ಲಿ ಚರ್ಚ್ ಕಳವು : ಪೀಠೋಪಕರಣ, ಪವಿತ್ರ ಸೊತ್ತುಗಳಿಗೆ ಹಾನಿ..!
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಚರ್ಚ್ ಕಳವು ನಡೆದಿದೆ. ಇಲ್ಲಿನ ನಾವೂರು ಗ್ರಾಮದ ಫರ್ಲ ಚರ್ಚಿಗೆ ಕಳ್ಳರು ನುಗ್ಗಿ ಹಣಕ್ಕೆ ತಡಕಾಡಿ ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಕೂಡ ನಡೆದಿದೆ.
ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಆದರೆ ಗುರುತು ಪತ್ತೆಯಾಗಿಲ್ಲ.
ಚರ್ಚಿನ ಬಾಗಿಲು ಮುರಿದು ಒಳ್ಳ ನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆದಿದ್ದು, ಆದರೆ ಚರ್ಚಿನಲ್ಲಿ ಹಣದೇ ಇಡದೇ ಇರುವುದರಿಂದ ಅವರು ಬರಿಗೈಯಲ್ಲಿ ವಾಪಾಸಾಗಿರುವ ಸಾಧ್ಯತೆ ಇದೆ.
ಘಟನೆ ಶುಕ್ರವಾರ ತಡ ರಾತ್ರಿ ನಡೆದಿದ್ದು, ಚರ್ಚಿನ ಪವಿತ್ರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
https://studio.youtube.com/video/og_wj6EWw54/edit