Connect with us

LATEST NEWS

ಜಿಂಗಲ್‌ ಬೆಲ್‌ ಜಿಂಗಲ್‌ ಬೆಲ್‌ ಕ್ರಿಸ್ಮಸ್‌ ಹಬ್ಬ ಬಂತು…..

Published

on

ಕ್ರಿಸ್‌ಮಸ್‌ ಹಬ್ಬ ಅಂದ್ರೆ ಅದೊಂದು ಸಂಭ್ರಮ, ಸಂತಾಕ್ಲಾಸ್‌, ಉಡುಗೊರೆ, ಸಿಹಿತಿಂಡಿ, ಭಿನ್ನ ವಿಭಿನ್ನ ಗೋದಲಿ, ಬಣ್ಣ ಬಣ್ಣದ ನಕ್ಷತ್ರ,

ಡೆಕೋರೇಷನ್ಸ್‌ ಹೀಗೆ ಹತ್ತು ಹಲವು ವೈಶಿಷ್ಟ್ಯತೆಯ ಹಬ್ಬ, ಇದು ಒಂದು ಪ್ರದೇಶ, ದೇಶ, ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದಾದ್ಯಂತ ಆಚರಿಸುವ ವರ್ಷದ ಕೊನೆಯ ಹಬ್ಬ.


ಇನ್ನು ಮಂಗಳೂರಿಗೆ ಬಂದರೆ ಕ್ರಿಸ್‌ಮಸ್‌ ಹಬ್ಬದ ಖುಷಿಯೇ ಬೇರೆ. ಡಿಸೆಂಬರ್‌ ತಿಂಗಳ ಮೊದಲವಾರದಿಂದ ಗೋದಲಿ ತಯಾರಿಸಲು ಸಿದ್ದತೆಗಳು ಆರಂಭವಾಗುತ್ತದೆ. ಜೊತೆಗೆ ಕುಸ್ವಾರ್‌(ಸಿಹಿತಿಂಡಿಗಳು) ತಯಾರಿಕೆ ಸಿದ್ದತೆ,

ಅಂಗಡಿಗಳಿಗೆ ತೆರಳಿ ನಕ್ಷತ್ರ, ತರಹೇವಾರಿಯ ಡೆಕೋರೇಷನ್ಸ್‌ ತರುವುದು ಹೀಗೆ ಒಂದಿಷ್ಟು ಸಂಭ್ರಮದ ಕ್ರಿಸ್‌ಮಸ್‌ನ ತಯಾರಿಗಳು ಭರದಿಂದ ನಡೆಯುತ್ತಿದೆ.

ಕಳೆದೆರಡು ವರ್ಷದಿಂದ ಕೊರೋನಾ ಈ ಸಂಭ್ರಮವನ್ನು ಕಸಿದಿತ್ತು. ಇದೀಗ ಈ ವರ್ಷ ಮತ್ತೆ ಕ್ರಿಸ್‌ಮಸ್‌ ಸಂಭ್ರಮ ಗರಿಗೆದರಿದೆ.

ಕ್ರಿಸ್‌ಮಸ್‌ ಕ್ಯಾರೋಲ್ಸ್‌

ಡಿ.24ರ ರಾತ್ರಿಗೆ ನತಲಾಚಿ ರಾತ್ರಿ ಅಂತ ಕರೆಯುತ್ತಾರೆ. ಅಂದು ಕ್ರಿಸ್ಮಸ್‌ ಕ್ಯಾರೋಲ್ಸ್‌ಗಳನ್ನು ಹಾಡುತ್ತಾರೆ. ಕ್ಯಾರೊಲ್ಸ್ ಅಂದರೆ ಕ್ರಿಸ್ತನ ಜನನವನ್ನು ಹಾಡಿ,

ಹೊಗಳುವ ಉಲ್ಲಾಸದ ಹಾಡು, ವಿಶೇಷ ಬಲಿಪೂಜೆಯ ಮುಂಚೆ 1 ಗಂಟೆಗಳ ಕಾಲ ಸಮುಧುರ ಸಂಗೀತದೊಂದಿಗೆ ಇದನ್ನು ಹಾಡುತ್ತಾರೆ. ಇದಾದ ನಂತರ ವಿಶೇಷ ಬಲಿಪೂಜೆಯಲ್ಲಿ ನಡೆಯುತ್ತದೆ. ನಂತರ ಒಬ್ಬರಿಗೊಬ್ಬರು ಶುಭಾಷಯ ಹಂಚುತ್ತಾರೆ.


ಸ್ವಾದಿಷ್ಟ ಕುಸ್ವಾರ್‌ ಸ್ವೀಟ್ಸ್‌
ಕರಾವಳಿ ಕ್ರಿಸ್‌ಮಸ್‌ನ ಇನ್ನೊಂದು ವಿಶೇಷತೆ ಅಂದ್ರೆ ಕುಸ್ವಾರ್‌ ಅರ್ಥಾತ್‌ ಸಿಹಿತಿನಿಸುಗಳು ಕ್ರೈಸ್ತ ಬಾಂಧವರ ಮನೆಯಲ್ಲಿ ತಯಾರಿಸಿದ ತಿಂಡಿ-ತಿನಿಸುಗಳಾದ ಅಕ್ಕಿಯಿಂದ ತಯಾರಿಸಿದ ಲಾಡು, ಕಿಡಿಯೊ, ಗುಳಿಯೋ,

ನಿರ್ವ್ಯೊ, ಕುಕ್ಕೀಸ್‌, ನೆವೆ, ಚಕ್ಕುಲಿ, ಕೇಕ್‌, ಖಾರಕಡ್ಡಿಗಳನ್ನು ಕ್ರಿಸ್‌ಮಸ್‌ ಹಬ್ಬದಂದು ನೆರೆಮನೆಯವರಿಗೆ, ಗೆಳೆಯರು, ಸಹೋದ್ಯೋಗಿ ಸೇರಿದಂತೆ ಎಲ್ಲರಿಗೂ ಹಂಚುವ ಪ್ರಕ್ರಿಯೆಯೂ ಕ್ರಿಸ್ಮಸ್‌ ಹಬ್ಬದಂದು ನಡೆಯಲಿದೆ.
ಗೋದಲಿ ಹಿನ್ನೆಲೆ
2000 ವರ್ಷಗಳ ಹಿಂದೆ ಯೇಸು ಕ್ರಿಸ್ತ ಒಂದು ದನದ ಕೊಟ್ಟಿಗೆಯಲ್ಲಿ ಹುಟ್ಟಿದರು ಎಂಬ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಗೋದಲಿಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಯೇಸು ಕ್ರಿಸ್ತರ ತಂದೆ ಜೋಸೆಫ್‌ ಅವರು ಜನಗಣತಿಯ ಸಂದರ್ಭದಲ್ಲಿ ತನ್ನ ಹೆಸರು ನೋಂದಣಿಗೆ ಬೆತ್ಲೆಹೇಮಿಗೆ ತುಂಬು ಗರ್ಭಿಣಿಯಾಗಿದ್ದ ಮಡದಿ ಮರಿಯಳ ಜತೆ ಹೋದಾಗ ಅಲ್ಲಿ ಮರಿಯಳಿಗೆ ಹೆರಿಗೆಯ ಬೇನೆ ಕಾಣಿಸಿಕೊಂಡಿತ್ತು.
ಹೆರಿಗೆಗೆ ಎಲ್ಲೂ ಜಾಗ ಸಿಗದ ಕಾರಣ ಹತ್ತಿರದಲ್ಲೇ ಒಂದು ದನದ ಕೊಟ್ಟಿಗೆಯಲ್ಲಿ ಮರಿಯ ಅವರು ಯೇಸು ಕಂದನಿಗೆ ಜನ್ಮ ನೀಡಿದರು ಎನ್ನುವುದು ನಂಬಿಕೆ. ಹಾಗಾಗಿ ಗೋದಲಿ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ಸಂಭ್ರಮ ಇನ್ನೂ ಹೆಚ್ಚಾಗಲಿ

ಕ್ರಿಸ್‌ಮಸ್‌ ಅಂದರೆ ಅದೊಂದು ಸಂಭ್ರಮದ ಹಬ್ಬ ಆದರೆ ಆ ಸಂಭ್ರಮ ಈಗಿಲ್ಲ. ಕಾರಣಗಳು ಹಲವು. ಒಂದೆಡೆ ಕೆಲಸದೊತ್ತಡ, ಅವಿಭಕ್ತ ಕುಟುಂಬ, ಒಂದಿಬ್ಬರು ಮಕ್ಕಳು,

ತಂತ್ರಜ್ಞಾನದ ಹೆಚ್ಚಿನ ಬಳಕೆ ಹೀಗೆ ಹತ್ತು ಹಲವು ಕಾರಣಗಳು ಈ ಸಂಭ್ರಮಕ್ಕೆ ಸ್ವಲ್ಪ ಮಟ್ಟಿನ ಪೆಟ್ಟು ನೀಡಿರುವುದು ವಾಸ್ತವ ಸತ್ಯ. ಆದರೂ ಈಗಲೂ ಒಂದು ಮಟ್ಟಿನ ಸಂಭ್ರಮದ ಕಳೆ ಇದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಮೊದಲಿನ ಸಂಭ್ರಮ ಸಡಗರ ಮರುಕಳಿಸಲಿ.

LATEST NEWS

ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ, ಮಗ

Published

on

ಮಂಗಳೂರು/ಮಹಾರಾಷ್ಟ್ರ : ತಂದೆ ಮತ್ತು ಮಗ ಇಬ್ಬರೂ ಒಂದೇ ಮರಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

‘ತಂದೆ ತನಗೆ ಸ್ಮಾರ್ಟ್ ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಂದೇಡ್ ಜಿಲ್ಲೆಯ ಬಿಳೋಳಿ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ ಇರುವುದರಿಂದ ಮನೆಗೆ ಬಂದಿದ್ದ.

ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

‘ಇದೇ ವೇಳೆ ಬಾಲಕ ಓಂಕಾರ್ ತನ್ನ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು, ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣೂ ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್ ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

ಮೃತ ಬಾಲಕನ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

 

Continue Reading

LATEST NEWS

ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

Published

on

ಮಂಗಳೂರು/ಬೆಂಗಳೂರು : ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃ*ತ್ಯ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದಿದೆ. ತಡರಾತ್ರಿ ದು*ಷ್ಕರ್ಮಿಗಳು ವಿ*ಕೃತಿ ಮೆರೆದಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಕೆಚ್ಚಲುಗಳನ್ನು ಕೊಯ್ದು ಕಿ*ಡಿಗೇಡಿಗಳು ಪರಾರಿಯಾಗಿದ್ದಾರೆ.

ರಾತ್ರಿಯಿಡೀ ಹಸುಗಳು ರ*ಕ್ತದ ಮಡುವಿನಲ್ಲಿ ನರಳಾಡಿವೆ. ಇಂದು(ಡಿ.12) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದಿದ್ದಾರೆ.

ಸಂಸದ ಪಿಸಿ ಮೋಹನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.

Continue Reading

LATEST NEWS

ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

Published

on

ಮಂಗಳೂರು/ಹೈದರಾಬಾದ್ : ರೀಲ್ಸ್ ಮಾಡಲು ಹೋದ ಐವರು ಯುವಕರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿ ಪೇಟ್ ಜಿಲ್ಲೆಯ ಕೊಂಡ ಪೋಚಮ್ಮ ಸಾಗರ ಜಲಾಶಯದಲ್ಲಿ ನಡೆದಿದೆ.

ಇಂದು ಏಳು ಮಂದಿ ಯುವಕರ ತಂಡ ಬೆಳಗ್ಗೆ ಒಂಬತ್ತರ ಸುಮಾರಿಗೆ ಜಲಾಶಯದ ಬಳಿ ಬಂದು, ಅಲ್ಲೇ ತಿರುಗಾಡಿ ಕೊನೆಗೆ ನೀರಿಗೆ ಇಳಿದಿದ್ದರು. ನೀರಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯವನ್ನು ಈಜು ಬಾರದ ಇಬ್ಬರು ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು.

ಇದನ್ನೂ ಓದಿ: ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಐವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇಬ್ಬರು ಅವರ ರಕ್ಷಣೆಗೆ ಮುಂದಾದ್ರೂ ಸಾಧ್ಯವಾಗಿಲ್ಲ. ಮುಶೀರಾಬಾದ್‌ನ ಸಹೋದರರಾದ ಧನುಷ್ (20), ಲೋಹಿತ್ (17), ಬನ್ಸಿಲಾಲ್ ಪೇಟೆಯ ದಿನೇಶ್ವರ್ (17), ಖೈರತಾಬಾದ್‌ನ ಚಾಂತಲ್ ಬಸ್ತಿಯ ಜತಿನ್ (17), ಮತ್ತು ಸಾಹಿಲ್ (19) ನೀರು*ಪಾಲಾದ ಯುವಕರು. ಮೃಗಾಂಕ್‌ (17) ಮತ್ತು ಇಬ್ರಾಹಿಂ (19) ಇಬ್ಬರು ನೀರಿನ ಆಳಕ್ಕೆ ಇಳಿಯದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಜಲಾಶಯದ ಬಳಿ ಜನರ ಓಡಾಟ ಕಡಿಮೆ ಇದ್ದ ಕಾರಣ ಮುಳುಗುತ್ತಿದ್ದ ಐವರ ರಕ್ಷಣೆಗೆ ಯಾರೂ ಸಿಗಲಿಲ್ಲ ಎಂದು, ಬದುಕಿ ಉಳಿದ ಇಬ್ಬರು ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ.

 

Continue Reading

LATEST NEWS

Trending

Exit mobile version