Saturday, November 27, 2021

ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಸೇನೆಗೆ ಹಸ್ತಾಂತರಿಸಿದ ಚೀನಾ

ಶಿಮ್ಲಾ: ಅರುಣಾಚಲ ಪ್ರದೇಶದ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.


ಹಸ್ತಾಂತರ ಪ್ರಕ್ರಿಯೆಯು ಚೀನಾ ಪ್ರದೇಶದಲ್ಲಿ ನಡೆದಿದ್ದು, ಐವರು ಭಾರತೀಯ ಗಡಿಗೆ ಬರಲು ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಂಡಿತು. ಕಿಬಿತು ಬಾರ್ಡರ್​ ಪೋಸ್ಟ್​ನಿಂದ ಭಾರತೀಯರು ಅರುಣಾಚಲ ಪ್ರದೇಶಕ್ಕೆ ಪ್ರವೇಶ ನೀಡಿದರು.
ಶುಕ್ರವಾರವಷ್ಟೇ ಟ್ವೀಟ್​ ಮಾಡಿದ್ದ ಕೇಂದ್ರ ಸಚಿವ ಕಿರಣ್​ ರಿಜಿಜು, ಭಾರತೀಯರನ್ನು ಹಸ್ತಾಂತರಿಸುವುದಾಗಿ ಚೀನಾದ ಪಿಎಲ್​ಎ ಭಾರತೀಯ ಸೇನೆಗೆ ಖಚಿತಪಡಿಸಿದೆ. ಹಸ್ತಾಂತರ ಪ್ರಕ್ರಿಯೆಯು ನಾಳೆ ಯಾವುದೇ ಸಮಯದಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು.

ಸೆಪ್ಟೆಂಬರ್​ 2ರಂದು ತಮ್ಮ ಅಜಾಗರೂಕತೆಯಿಂದ ಅಪ್ಪರ್​ ಸಬನ್​ಸಿರಿಯಲ್ಲಿರುವ ಭಾರತೀಯ ಗಡಿ ನಿಯಂತ್ರಣಾ ರೇಖೆಯಿಂದ ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಇಂಡಿಯನ್​ ಆರ್ಮಿ ನಿರಂತರ ಶ್ರಮದಿಂದಾಗಿ ಪತ್ತೆ ಹಚ್ಚಿದೆ. ಹಾಟ್​ಲೈನ್​ ಮೂಲಕ ಚೀನಾ ಆರ್ಮಿ ಸೆಪ್ಟೆಂಬರ್​ 8 ರಂದು ಪ್ರತಿಕ್ರಿಯೆ ನೀಡಿದ್ದು, ನಾಪತ್ತೆಯಾದವರು ಚೀನಾ ಭಾಗದಲ್ಲಿರುವುದಾಗಿ ಖಚಿತಪಡಿಸಿದೆ ಎಂದು ಇಂಡಿಯನ್​ ಆರ್ಮಿ ಮುಂಚೆಯೇ ಟ್ವೀಟ್​ ಮಾಡಿತ್ತು.

ಬೇಟೆಯಾಡಲು ಹೋಗಿ ಗಡಿ ವಾಸ್ತವ ರೇಖೆನ್ನು ದಾಟಿ ಸುಬನ್ಸಿರಿ ಎಂಬಲ್ಲಿ ಚೀನಾದ ಪ್ರಾಂತ್ಯದೊಳಗೆ ನುಗ್ಗಿದ್ದರು ಎಂಬ ಆರೋಪದ ಮಲೆ ಅವರನ್ನು ಚೀನಾದ ಸೇನೆ ಬಂಧಿಸಿ ಇರಿಸಿಕೊಂಡಿತ್ತು. ಐವರು ತಮ್ಮ ಬಳಿ ಇರುವುದಾಗಿ ಸೆಪ್ಟೆಂಬರ್ 8ರಂದು ಚೀನಾಹೇಳಿಕೊಂಡಿತ್ತು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...