Thursday, August 11, 2022

ನೀರಿನ ಬಕೆಟ್ ಗೆ ಬಿದ್ದು ಪ್ರಾಣ ಕಳಕೊಂಡ ಕಂದಮ್ಮ..!

ಮೈಸೂರು: ತುಂಬಿದ ನೀರಿನ ಬಕೆಟ್​ಗೆ ಬಿದ್ದು ಕಂದಮ್ಮ ಒಂದು ಸಾವನ್ನಪ್ಪಿರುವ ಘಟನೆ  ಮೈಸೂರಿನ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ‌ ನಡೆದಿದೆ.

ಗ್ರಾಮದ ಸುಂದರ್ ರಾಜ್ ಅವರ 2 ವರ್ಷದ ಮಗು ಸಮರ್ಥ ಮನೆ ಒಳಗಡೆ ಆಟವಾಡುತ್ತಿದ್ದಾಗ ಮನೆಯವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರು. ಆಟ ಆಡುತ್ತಾ ಮಗು ಬಚ್ಚಲು ಮನೆಯ ಹತ್ತಿರ ಹೋಗಿ ನೀರು ತುಂಬಿದ ಬಕೆಟ್​ಗೆ ಆಯತಪ್ಪಿ ಬಿದ್ದು ಪ್ರಾಣ ಕಳಕೊಂಡಿದೆ.

 

ಮಗು ಕಾಣದಿದ್ದಾಗ ಮನೆಯವರು ಎಲ್ಲ ಕಡೆ ಹುಡುಕಿದಾಗ ಮಗು ನೀರು ತುಂಬಿದ್ದ ಬಕೆಟ್​ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಮಗುವನ್ನು ಕಳಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

LEAVE A REPLY

Please enter your comment!
Please enter your name here

Hot Topics

ಆ.14 ರಂದು ಮಂಗಳೂರು ಪುರಭವನದಲ್ಲಿ ನಾಟಕ ಪ್ರದರ್ಶನ ಮತ್ತು ಮೆಗಾ ಮ್ಯಾಜಿಕ್

ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.14 ರ ಭಾನುವಾರ ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ACBಯನ್ನು ಕಿತ್ತೆಸೆದ ಹೈಕೋರ್ಟ್‌

ಬೆಂಗಳೂರು: ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಸರ್ಕಾರ ಹುಟ್ಟುಹಾಕಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿ ಆದೇಶ ಹೊರಡಿಸಿದೆ.ಅಲ್ಲದೇ ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್...