ಬಂಟ್ವಾಳ: ಚಿಕನ್ ಸ್ಟಾಲ್‌ನ ಕೋಳಿ ಪಂಜರದಿಂದ 50ಕ್ಕೂ ಅಧಿಕ ಕೋಳಿಗಳನ್ನು ಕದ್ದೊಯ್ದ ಅಪರೂಪದ ಘಟನೆ ವಿಟ್ಲದ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್‌ನಲ್ಲಿ ನಡೆದಿದೆ.
ಮಾಲಕರು ಎಂದಿನಂತೆ ಇಂದು ಅಂಗಡಿ ತೆರೆಯಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಚಿಕನ್ ಸ್ಟಾಲ್‌ನ ಪಂಜರದಲ್ಲಿ ಇದ್ದ 75 ಕೆ.ಜಿಯಷ್ಟು ಕೋಳಿಗಳನ್ನು ಕದ್ದೊಯ್ದಿದ್ದು, ಈಗ ಕೋಳಿಗೆ 160 ಅಥವಾ 170 ರೂಪಾಯಿ ಬೆಲೆ ಇದೆ. ಆದ್ದರಿಂದ ಕಳ್ಳರು ಕೋಳಿ ಕಳ್ಳತನ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.