Sunday, June 4, 2023

ಅಖಿಲ ಭಾರತೀಯ ಅಖಾಡ ಪರಿಷದ್‌ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ಓರ್ವ ಶಿಷ್ಯನ ಬಂಧನ

ಪ್ರಯಾಗ್‌ರಾಜ್: ಅಖಿಲ ಭಾರತೀಯ ಅಖಾಡ ಪರಿಷದ್ (ಎಬಿಎಪಿ) ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರು ಪ್ರಯಾಗ್‌ರಾಜ್‌ನಲ್ಲಿನ ಶ್ರೀ ಮಠ ಮಘಾಂಬರಿ ಗಡ್ಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 62 ವರ್ಷದ ಅವರ ದೇಹ ಕೊಠಡಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಕೊಠಡಿಯಲ್ಲಿ ಆತ್ಮಹತ್ಯೆ ಚೀಟಿಯನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮ ಶಿಷ್ಯರಲ್ಲಿ ಒಬ್ಬರಾದ ಆನಂದ್ ಗಿರಿಯಿಂದ ಮಾನಸಿಕ ಹಿಂಸೆ ಅನುಭವಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರಿತ್ತು ಎಂಬುದಾಗಿ ಅವರು ಅದರಲ್ಲಿ ಆರೋಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಮಾನ್ಯತೆ ಪಡೆದಿರುವ 13 ಹಿಂದೂ ಸನ್ಯಾಸ ಸಂಸ್ಥೆಗಳ ಸರ್ವೋಚ್ಛ ನಿರ್ಣಾಯಕ ಸಂಸ್ಥೆಯಾಗಿರುವ ಎಬಿಎಪಿಯ ಮುಖ್ಯಸ್ಥರಾಗಿದ್ದ ನರೇಂದ್ರ ಗಿರಿ ಅವರ ಸಾವು ಅನೇಕ ಸಂದೇಹಗಳಿಗೆ ಕಾರಣವಾಗಿದೆ.
ಈ ಘಟನೆಯ ಬಗ್ಗೆ ಗಿರಿ ಅವರ ಶಿಷ್ಯಂದಿರುವ ಸೋಮವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳುವ ವೇಳೆಗೆ ಮಹಾಂತ ನರೇಂದ್ರ ಗಿರಿ ಅವರ ಅನುಯಾಯಿಗಳು ಬಾಗಿಲು ಒಡೆದು ಕುಣಿಕೆಯಿಂದ ಅವರ ದೇಹವನ್ನು ಕೆಳಕ್ಕಿಳಿಸಿದ್ದರು ಎಂದು ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕೈಬರಹದಲ್ಲಿ ಬರೆಯಲಾದ ಆತ್ಮಹತ್ಯಾ ಚೀಟಿ ಪತ್ತೆಯಾಗಿದೆ. ಅದರಲ್ಲಿ ಅವರು ತಮ್ಮ ಒಬ್ಬ ಶಿಷ್ಯನ ವಿರುದ್ಧ ಆರೋಪ ಮಾಡಿದ್ದಾರೆ.

ಆನಂದ್ ಗಿರಿ ಮಾನಸಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಘಟನೆಯ ಸನ್ನಿವೇಶ ಹಾಗೂ ಆತ್ಮಹತ್ಯೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಮೂವರ ಬಂಧನ
ನರೇಂದ್ರ ಗಿರಿ ಪತ್ರದಲ್ಲಿ ಆರೋಪಿಸಿರುವ ಆನಂದ್ ಗಿರಿ ಹಾಗೂ ಮಹಾಂತ ಅವರೊಂದಿಗೆ ವಾಸಿಸುತ್ತಿದ್ದ ಸಂದೀಪ್ ತಿವಾರಿ ಮತ್ತು ಆದ್ಯ ತಿವಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆನಂದ್ ಗಿರಿ, ಮಹಾಂತ ಅವರ ಅತಿ ಆಪ್ತ ಶಿಷ್ಯನಾಗಿದ್ದು, ಮೇ ತಿಂಗಳಲ್ಲಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು.

ವಂಚನೆ ಹಾಗೂ ಆರ್ಥಿಕ ಅವ್ಯವಹಾರಗಳು ನಡೆದಿದೆ ಎಂದು ಪೂಜಾರಿಗಳ ಗುಂಪು ಆರೋಪಿಸಿದ ಬಳಿಕ ಆನಂದ್ ಗಿರಿಯನ್ನು ಹೊರಗಟ್ಟಲಾಗಿತ್ತು. ಕೆಲವು ದಿನಗಳ ಬಳಿಕ, ತನ್ನ ಗುರುವಿನ ಕಾಲಿಗೆ ಬಿದ್ದು ಆನಂದ್ ಗಿರಿ ಕ್ಷಮಾಪಣೆ ಕೋರುವ ವಿಡಿಯೋ ಹರಿದಾಡಿತ್ತು.

ಆದರೆ ಈ ಸಂಧಾನ ಹೆಚ್ಚು ಸಮಯ ಉಳಿದಿರಲಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.
ಇದು ಕೊಲೆ ಎಂದ ಆನಂದ್ ಗಿರಿ
ಹರಿದ್ವಾರದ ಶ್ಯಾಂಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಮುನ್ನ ಘಾಜಿವಾಲಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಷ್ಯ ಆನಂದ್ ಗಿರಿ ಆತ್ಮಹತ್ಯಾ ಪತ್ರದಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವುದು ಸಂಚಿನ ಭಾಗ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics