Monday, January 24, 2022

ಉಡುಪಿ: ಮನೆಯಲ್ಲಿ ತಂದಿರಿಸಿದ್ದ ಸ್ಪೋಟಕ ಬ್ಲಾಸ್ಟ್‌: ದಂಪತಿಗೆ ಗಾಯ, ಕಾರು, ಸ್ಕೂಟಿ ಭಸ್ಮ

ಉಡುಪಿ: ಮನೆಯಲ್ಲಿ ತಂದಿರಿಸಿದ್ದ ಸ್ಪೋಟಕ ವಸ್ತುವೊಂದು ಏಕಾಏಕಿ ಸಿಡಿದ ಪರಿಣಾಮ ಇಬ್ಬರು ಗಾಯಗೊಂಡು, ಕಾರು ಸಹಿತ ಹಲವು ವಸ್ತುಗಳು ಸುಟ್ಟುಹೋದ ಘಟನೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ.


ದಿನೇಶ ಶೆಟ್ಟಿ ಎಂಬುವವರ ವಾಸ್ತವ್ಯದ ಮನೆಯ ಕಾರ್‌ ಶೆಡ್‌ನಲ್ಲಿ ಸ್ಪೋಟಕ ವಸ್ತು ಸಿಡಿದಿದೆ. ಈ ವೇಳೆ ಕಾರ್‌ ಸಿಟೌಟ್‌ನ ಮೇಲ್ಚಾವಣಿಯಲ್ಲಿದ್ದ ಲೈಟ್‌ ಹಾಗೂ ಗೋಡೆಯಲ್ಲಿದ್ದ ಲೈಟ್‌ ಮತ್ತು ಸ್ವೀಚ್‌ಗಳು ಸುಟ್ಟಿದ್ದು, ಅಡುಗೆ ಮನೆಯ ಕಿಟಕಿಯ ಗಾಜು ಬಿರುಕು ಬಿಟ್ಟಿದ್ದು, ಶೆಡ್‌ನಲ್ಲಿದ್ದ ಸ್ಕೂಟಿ, ಕಾರು ಸುಟ್ಟು ಹೋಗಿದೆ.

ಸ್ಪೋಟದಿಂದ ಸುಟ್ಟುಹೋದ ಅವಶೇಷಗಳು ಸೇರಿದಂತೆ ಸುಟ್ಟುಹೋದ ಕಾರನ್ನು ನೆರೆಮನೆಯ ಬಳಿ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಪಕ್ಕದಲ್ಲೆ ಕೆಲಸ ಮಾಡುತ್ತಿದ್ದ ದಿನೇಶ ಶೆಟ್ಟಿ ಹಾಗೂ ಪತ್ನಿ ವಸಂತಿ ಶೆಟ್ಟಿ ರವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಪೋಟದ ಶಬ್ದಕ್ಕೆ ಸ್ಥಳೀಯರು ಓಡಿಬಂದಿದ್ದು, ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಮನೆಯ ಕಾರ್‌ ಪಾರ್ಕಿಂಗ್‌ನಲ್ಲಿ ಸ್ಪೋಟಕ ವಸ್ತುವನ್ನು ಅಥವಾ ಇನ್ಯಾವುದೋ ಪಟಾಕಿಯಂತಹ ವಸ್ತುವನ್ನು ಯಾವುದೇ ಮುಂಜಾಗ್ರತೆ ವಹಿಸದೆ ನಿರ್ಲಕ್ಷತನದಿಂದ ಇರಿಸಿದ್ದು ಆ ಕಾರಣದಿಂದ ಅದು ಸ್ಪೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲಿನ ಕೋರೆಯಲ್ಲಿ ಬಳಸುವ ರಾಸಾಯನಿಕ ವಸ್ತು ಸ್ಪೋಟಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಬ್ರಹ್ಮಾವರ ಸಿಐ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...