BANTWAL
ಬಂಟ್ವಾಳ: ಜನರು ಓಡಾಡುವ ಪರಿಸರದಲ್ಲಿ ಪ್ರತ್ಯಕ್ಷವಾದ ಚಿರತೆ-ಸ್ಥಳೀಯರಲ್ಲಿ ಆತಂಕ
ಬಂಟ್ವಾಳ: ಜನರು ಓಡಾಡುವ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಜನತೆಯಲ್ಲಿ ಆತಂಕ ಸೃಷ್ಠಿಸಿರುವ ಘಟನೆ ಬಂಟ್ವಾಳದ ಫರಂಗಿಪೇಟೆ, ವಳಚ್ಚಿಲ್ನಲ್ಲಿ ನಡೆದಿದೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಾರಿಪಳ್ಳದ ನಿವಾಸಿ ರಫೀಕ್ ಎಂಬವರು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಎಂಬಲ್ಲಿ ಚಿರತೆಯೊಂದನ್ನು ನೋಡಿದ್ದಾರೆ.
ಹತ್ತನೇ ಮೈಲುಗಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿರತೆಯನ್ನು ನೋಡಿದ್ದು ಕೂಡಲೇ ಅದು ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಓಡಿದೆ ಎಂದು ಮಾಹಿತಿ ನಿಡಿದ್ದಾರೆ.
ಚಿರತೆಯ ಬಗ್ಗೆ ಅವರು ಪಕ್ಕದ ಹೊಟೇಲ್ ಒಂದರಲ್ಲಿದ್ದ ಸ್ಥಳೀಯರಲ್ಲಿ ಮಾಹಿತಿ ನೀಡಿದ್ದು ನಿನ್ನೆ ಬೆಳಗ್ಗೆ ಕೂಡಾ ಜನರು ಪರಿಸರದಲ್ಲಿ ಚಿರತೆಯೊಂದನ್ನು ನೋಡಿದ್ದ ಬಗ್ಗೆ ಸುದ್ದಿ ತಿಳಿದು ಬಂದಿದೆ.
ಅದೇ ಚಿರತೆ ರಾತ್ರಿ ಹತ್ತನೇ ಮೈಲುಗಲ್ಲಿನಲ್ಲಿ ಕಂಡುಬಂದಿರಬಹುದು ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.
ಈ ವಿಷಯ ಪರಿಸರದಲ್ಲಿ ಹರಿದಾಡಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
BANTWAL
ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ
ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.
ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.
ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.
ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.
BANTWAL
ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.
ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.
BANTWAL
ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು
ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.
ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು
ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.
- DAKSHINA KANNADA7 days ago
“ಸೆಕ್ಸ್” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್..!
- DAKSHINA KANNADA7 days ago
ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?
- LATEST NEWS6 days ago
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
- FILM3 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ