Saturday, June 3, 2023

ನಾಳೆ ಬೆಳ್ಳಿತೆರೆಗೆ ‘ಚೇಜ್’: ಪ್ರೀಮಿಯರ್‌ ಶೋನಲ್ಲಿ ಮನಗೆದ್ದ ಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌ ಮೂವಿ

ಮಂಗಳೂರು: ಭಾರತೀಯ ಸಿನಿ ರಂಗದ ಇತ್ತಿಚಿನ ವರ್ಷಗಳನ್ನು ನೋಡಿದ್ರೆ ಕನ್ನಡ ಸಿನಿಮಾಗಳದ್ದೇ ಹವಾ.

ಕನ್ನಡ ಮಣ್ಣಿನಲ್ಲಿ ಸಿದ್ದಗೊಂಡ ಅನೇಕ ಸಿನಿಮಾಗಳು ಬಾಕ್ಸ್ ಆಫೀಸ್ ಗಳನ್ನು ಚಿಂದಿ ಮಾಡಿ ದಾಖಲೆ ನಿರ್ಮಿಸಿದೆ. ಇದೀಗ ಇದೇ ಸಾಲಿಗೆ ಸೇರುವ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಮತ್ತೊಂದು ಸಿನಿಮಾ ಚೇಜ್.

ಸಸ್ಪೆನ್ಸ್-ಹಾರರ್ ಥ್ರಿಲ್ಲರ್‌ಗಳ ಕಥೆ ಇರುವ ಚೇಸ್ ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದ್ದು, ಇದರ ಪ್ರಿಮಿಯರ್ ಶೋ ಮಂಗಳೂರಿನ ಬಿಗ್ ಸಿನಿಮಾಸ್ ನಲ್ಲಿ ನಡೆಯಿತು.


ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಂ .ಬಿ ಪುರಾಣಿಕ್ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಹಾರೈಸಿ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ರು.

ಚಿತ್ರ ವೀಕ್ಷಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿ, ಎಲ್ಲರೂ ಸಿನೆಮಾ ನೋಡಿ ಈ ಅತ್ಯುತ್ತಮ ಚಿತ್ರಕ್ಕೆ ಸಿನಿರಸಿಕರು ಸಹಕಾರ ನೀಡಬೇಕು ಎಂದರು.


ಚೇಜ್ ನ ಪ್ರಿಮೀಯರ್ ಶೋ ಗೆ ಸಿಕ್ಕ ರೆಸ್ಪಾನ್ಸ್ ಕಂಡ ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ ಫುಲ್ ಖುಷ್ ಆಗಿದ್ದರು. “ಕಷ್ಟ ಪಟ್ಟು ಮಾಡಿದ ಸಿನೆಮಾಗೆ ಸಿಕ್ಕಿರುವ ಪಾಸಿಟಿವ್ ರಿವ್ಯೂ ನೋಡಿ ಸಿನೆಮಾ ಗೆದ್ದಷ್ಟೇ ಸಂತೋಷವಾಗಿದೆ.

ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಕುಟುಂಬ ಸಮೇತರಾಗಿ ಸಿನೆಮಾ ನೊಡಿ ಹರಸಿ ಹಾರೈಸಿ ಎಂದ್ರು.


ಚಿತ್ರದ ನಾಯಕಿ ರಾಧಿಕಾ ನಾರಾಯಣ್ ಖುದ್ದಾಗಿ ಜನರು ನಾನು ನಿಭಾಯಿಸಿರುವ ಪಾತ್ರದ ಕುರಿತು ವಿಶ್ಲೇಷಣೆ ಮಾಡುತ್ತಿದ್ದು, ಚಿತ್ರದಲ್ಲಿ ಮೂಡಿ ಬಂದ ಪ್ರತಿಯೊಂದು ಸೀನ್ ಬಗ್ಗೆಯೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಚಿತ್ರವನ್ನು ಇದೇ ರೀತಿ ಬೆಂಬಲಿಸಿ ಎಂದರು. ಚಿತ್ರದ ಮತ್ತೊರ್ವ ನಾಯಕ ನಟ ಅರ್ಜುನ್ ಯೋಗಿಶ್ ರಾಜ್ ಮಾತನಾಡಿ “ಮೊದಲ ಬಾರಿ ನಮ್ಮದೇ ಸಿನೆಮಾವನ್ನು ಜನಗಳ ಮಧ್ಯೆ ಕುಳಿತು ನೋಡಿದ್ದು ಬಹಳ ಖುಷಿ ತಂದಿದೆ.

ಚಿತ್ರ ನೋಡಿ ಕುಡ್ಲ ಜನತೆ ನೀಡಿರುವ ರಿವ್ಯೂ ನೋಡಿ ಸಖತ್ ಥ್ರಿಲ್ ಆಗಿದೆ. ಜನ ಪಾತ್ರ ಮೆಚ್ಚಿ ಕೊಂಡಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.


ಪ್ರಿಮಿಯರ್ ಶೋನ ಮತ್ತೊಂದು ವಿಶೇಷ ಎಂದರೆ ಕೊನೆವರೆಗೂ ಪೂರ್ತಿ ಚಿತ್ರವನ್ನು ವೀಕ್ಷಿಸಿ ಚಿತ್ರಪ್ರೇಮಿಗಳ ಗಮನ ಸೆಳೆದ್ರು ಬಿಜೆಪಿ ನಾಯಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್. ಚಿತ್ರದ ಪ್ರಿಮಿಯರ್ ಶೋ ನೋಡಲು ಬಂದ ಅನೇಕ ಗಣ್ಯರು,

ಚಿತ್ರ ರಸಿಕರು ಹಾಗೂ ಸಿನಿ ರಂಗದ ತಾರೆಯರು ಚೇಸ್ ಚಿತ್ರದ ಕಥಾ ಹಂದರ ನೋಡಿ ನಿಜಕ್ಕೂ ಸರ್ ಪ್ರೈಸ್ ಆಗಿದ್ದರು.
ಮನೋಹರ್ ಸುವರ್ಣ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಯುಎಫ್‌ ಓ ಸಂಸ್ಥೆ ವಿತರಕರಾಗಿದ್ದಾರೆ. ತಾರಾಗಣದಲ್ಲಿ ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ.

ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಸೇರಿದಂತೆ ಪ್ರಮುಖರ ತಾರಾಗಣ ದಂಡೇ ಚಿತ್ರಕ್ಕಿದೆ. ಒಟ್ನಲ್ಲಿ ನಾಳೆ ಸಿನೆಮಾ ಅದ್ಧೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕ ಪ್ರಭುಗಳ ಪ್ರತಿಕ್ರಿಯೆಗೆ ಚಿತ್ರತಂಡ ಕಾದು ಕುಳಿತಿದೆ.

LEAVE A REPLY

Please enter your comment!
Please enter your name here

Hot Topics