Friday, May 20, 2022

ಲೈಂಗಿಕವಾಗಿ ಸಹಕರಿಸುವಂತೆ ಕೋಡ್ಯಾನ್ಸರ್‌ಗೆ ಕಿರುಕುಳ: ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್

ಮುಂಬಯಿ: ಸಹ ನೃತ್ಯಗಾತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.


ಮುಂಬೈ ನಗರದ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಯಲಾಗಿದೆ.
ಈ ವರದಿಯ ಪ್ರಕಾರ,

ಗಣೇಶ್ ಆಚಾರ್ಯ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಸಿ, 354-ಡಿ (ಹಿಂಬಾಲಿಸುವಿಕೆ), 509 (ಮಹಿಳೆಗೆ ಅವಮಾನ), 323 (ನೋವು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 506 (ಅಪರಾಧ ಬೆದರಿಕೆ)ದ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಣೇಶ್ ಆಚಾರ್ಯ ವಿರುದ್ಧ ಸಹ ಡ್ಯಾನ್ಸರ್​ ಒಬ್ಬರು ಲೈಂಗಿಕ ಕಿರಕುಳ ಆರೋಪ ಮಾಡಿದ್ದರು.”ಲೈಂಗಿಕವಾಗಿ ಸಹಕರಿಸುವಂತೆ ಗಣೇಶ್ ಕೋರಿದ್ದರು. ಆದರೆ, ಇದನ್ನು ನಿರಾಕರಿಸಿದೆ. ಚಿತ್ರರಂಗದಲ್ಲಿ ಯಶಸ್ಸು ಸಿಗಬೇಕಾದರೆ ದೈಹಿಕವಾಗಿ ಸಹಕರಿಸುವಂತೆ ಹೇಳಿದ್ದರು. ಆದರೆ ನಾನು ವಿರೋಧಿಸಿದ್ದೆ. ಹೀಗಾಗಿ ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಸಂಘದಿಂದ ನಾನು ಸದಸ್ಯತ್ವ ಕಳೆದುಕೊಂಡೆ” ಎಂದು ಆಕೆ ಆರೋಪಿಸಿದ್ದರು

LEAVE A REPLY

Please enter your comment!
Please enter your name here

Hot Topics

ಕರಾವಳಿ ಜಿಲ್ಲೆಯಲ್ಲಿ ‘ಧರ್ಮ ದಂಗಲ್‌’ಗೆ ಬಲಿಯಾಯಿತೇ ‘SSLC’ ಫಲಿತಾಂಶ..!?

ಮಂಗಳೂರು:ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತೀ ಬಾರಿಯೂ ಜಿಲ್ಲಾವಾರು ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕಾಗಿ ನೇರಾ-ನೇರಾ ಪೈಪೋಟಿ ನಡೆಸುತ್ತಿದ್ದ ದಕ್ಷಿಣ ಕನ್ನಡ 20ನೇ ಸ್ಥಾನಕ್ಕೆ ಕುಸಿದರೆ ಉಡುಪಿ ಜಿಲ್ಲೆ 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಗುಣಾತ್ಮಕ...

ಪಠ್ಯದಲ್ಲಿ ನಾರಾಯಣಗುರು ಹೆಸರು ಕೈ ಬಿಟ್ಟಿರುವುದು ಮಾನವ ಕುಲಕ್ಕೆ ನೋವಾಗಿದೆ-ಮಾಜಿ ಸಚಿವ ರೈ

ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಕೈ ಬಿಟ್ಟಿರುವುದು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ನೋವಾಗಿಲ್ಲ. ಸಮಸ್ತ ಮಾನವ ಸಮಾಜಕ್ಕೆ ನೋವು ತರುವಂತಹ ವಿಚಾರ ಎಂದು ಮಾಜಿ ಸಚಿವ...

ಹೈಕೋರ್ಟ್‌ನಲ್ಲಿ ನಮಾಝ್‌ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಿದ ‘ಮಾಧ್ಯಮ’ದ ವಿರುದ್ಧ FIR

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕೊಠಡಿ ಒಳಗೆ ಮಹಿಳೆಯರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಕೋರ್ಟ್‌ ಆವರಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್ ದೂರು ದಾಖಲಿಸಿದ್ದಾರೆ.ಹೈಕೋರ್ಟ್ ನ ಉಸ್ತುವಾರಿ ರಿಜಿಸ್ಟ್ರಾರ್...