ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣಕ್ಕೆ ಪ್ರತಿಕಾರವಾಗಿ ಚರಣ್ ರಾಜ್ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಒಟ್ಟು ಆರು ಮಂದಿ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಹಿತ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ಕೆಯ್ಯೂರು ನಿವಾಸಿ ನರ್ಮೇಶ್, ನಿತಿಲ್ ಶೆಟ್ಟಿ, ವಿಜೇಶ್, ಈಶ್ವರ ಮಂಗಲದ ರಾಕೇಶ್ ಪಂಚೋಡಿ, ಬಲ್ನಾಡಿನ ರೆಮಂತ್ ಪೊಲೀಸ್ ವಶದಲ್ಲಿದ್ದಾರೆ.
ಶನಿವಾರ ಪುತ್ತೂರು ತಾಲೂಕಿನ ಕೋಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಅರ್ಯಾಪು ಗ್ರಾಮದಲ್ಲಿ 28 ವರ್ಷದ ಚರಣ್ ರಾಜ್ ಎಂಬವರನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ್ದರು.
ಕೊಲೆಯ ಸಂದರ್ಭ ಚರಣ್ ಸ್ನೇಹಿತ ಜೊತೆಗೆ ಇದ್ದರು ಎಂಬ ಮಾಹಿತಿ ಇದೆ.ಈ ವೇಳೆ ಅವರು ತಡೆಯಲು ಅಡ್ಡ ಬಂದಾಗ ಆರೋಪಿಗಳು ಅವರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ಬಳಿಕ ಚರಣ್ ಸ್ನೇಹಿತ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು,ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೊನಾವಣೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದು, ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸೈ ಉದಯರವಿ ಮತ್ತು ಬೆಳ್ಳಾರೆ ಠಾಣೆಯ ರುಕ್ಮಾ ನಾಯ್ಕ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.