Connect with us

    LATEST NEWS

    ಕೆಬಿಸಿ16ರ ಮೊದಲ ಕೋಟ್ಯಧಿಪತಿಯಾದ ಚಂದೇರ್; ಅಬ್ಬಾ! ಒಂದು ಕೋಟಿಯ ಪ್ರಶ್ನೆ ಯಾವ್ದು ಗೊತ್ತಾ!?

    Published

    on

    ಭಾರತದ ಅತ್ಯಂತ ಜನಪ್ರಿಯ ಕಿರುತೆರೆ ಶೋಗಳಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಂಡು ಬರುತ್ತಿರುವ ಕೌನ್ ಬನೇಗಾ ಕರೋಡ್ಪತಿಯೂ ಒಂದು. 2000 ರ ಜುಲೈ ನಲ್ಲಿ ಪ್ರಾರಂಭವಾಗಿರುವ ಈ ಶೋನ ಒಂದು ಸೀಸನ್ನಲ್ಲಿ ಶಾರುಖ್ ಖಾನ್ ನಿರೂಪಣೆ ಮಾಡಿದ್ದು, ಉಳಿದೆಲ್ಲಾ ಎಪಿಸೋಡ್ಗಳಿಗೆ ಅಮಿತಾಬ್ ಬಚ್ಚನ್ ಅವರೇ ನಿರೂಪಕರಾಗಿದ್ದಾರೆ. ಕೆಲವು ಬಾರಿ ಮಾತ್ರವೇ ಅತಿಥಿ ನಿರೂಪಕರು ಬಂದು ಹೋಗಿದ್ದಾರೆ.

    k
    ಪ್ರಸ್ತುತ 16ನೇ ಸೀಸನ್ ನಡೆಯುತ್ತಿದ್ದು, ಆಗಸ್ಟ್ 12 ರಂದು ಆರಂಭವಾದ ಈ ಶೋನಲ್ಲಿ ಜಮ್ಮು ಕಾಶ್ಮೀರದ ಚಂದೇರ್ ಪ್ರಕಾಶ್ ಮೊದಲ ಕೋಟ್ಯಧಿಪತಿ ಆಗಿದ್ದಾರೆ.
    1 ಕೋಟಿಯ ಪ್ರಶ್ನೆ ಯಾವುದು?
    ಒಂದು ಕೋಟಿಗೆ ಅಮಿತಾಬ್ ಬಚ್ಚನ್ ಕಠಿಣವಾದ ಪ್ರಶ್ನೆಯನ್ನೇ ಕೇಳಿದ್ದರು. ಆ ಪ್ರಶ್ನೆ, ‘ಒಂದು ದೇಶದ ದೊಡ್ಡ ನಗರ ಇದು. ಆದರೆ, ಈ ನಗರ ಆ ದೇಶದ ರಾಜಧಾನಿ ಅಲ್ಲ, ಆದರೆ ಇದರ ಬಂದರಿಗೆ ಉರ್ದು ಹೆಸರಿದೆ, ಆ ಹೆಸರಿನ ಅರ್ಥ ಶಾಂತಿಯ ನಿರ್ಮಾಣ ಎಂದಾಗಿದೆ. ಯಾವುದು ಆ ನಗರ?’ ಎಂಬುವುದು ಕೋಟಿಯ ಪ್ರಶ್ನೆಯಾಗಿತ್ತು.
    ಅದಕ್ಕೆ ನಾಲ್ಕು ಆಯ್ಕೆಗಳನ್ನು ಸಹ ಬಚ್ಚನ್ ನೀಡಿದ್ದರು. ಓಮನ್, ಸೊಮಾಲಿಯಾ, ತಂಜಾನಿಯಾ ಮತ್ತು ಬ್ರೂನೈ ಆಯ್ಕೆಯಾಗಿತ್ತು. ಪ್ರಶ್ನೆಗೆ ಡಬಲ್ ಫ್ಲಿಪ್ಪರ್ ಲೈಫ್ ಲೈನ್ ಉಪಯೋಗಿಸಿದರು. ಆದರೂ ಮೊದಲು ನೀಡಿದ ಉತ್ತರವೇ ಸರಿಯಾಗಿತ್ತು. ಚಂದೇರ್ ‘ತಂಜಾನಿಯಾ’ ಎಂಬ ಸರಿ ಉತ್ತರವನ್ನೇ ಆರಿಸಿದ್ದರು.


    ಅಮಿತಾಬ್ ಬಚ್ಚನ್, ‘ಒಂದು ಕೋಟಿ’ ಎಂದು ಜೋರಾಗಿ ಕೂಗಿದಾಗ ಚಂದೇರ್ ಶಾಂತ ಚಿತ್ತವಾಗಿಯೇ ಇದ್ದರು. ಕೋಟಿ ಗೆದ್ದೊಡನೆ ಅಮಿತಾಬ್ ಬಚ್ಚನ್ ಕಾಲಿಗೆ ನಮಸ್ಕರಿಸಿದಾಗ, ಬಚ್ಚನ್ ಅವರನ್ನು ಆಲಂಗಿಸಿಕೊಟ್ಟರು.
    ಬಳಿಕ ಒಂದು ಕೋಟಿ ರೂಪಾಯಿಯ ಚೆಕ್ ಕೊಟ್ಟು, ಹುಂಡೈನ ವೆನ್ಯು ಕಾರನ್ನು ಸಹ ನೀಡಿದರು. ಬಳಿಕ ಏಳು ಕೋಟಿ ಪ್ರಶ್ನೆಯನ್ನು ಕೇಳಲಾಗಿದೆ. ವಿಶೇಷವೆಂದರೆ ಅದಕ್ಕೂ ಉತ್ತರ ಗೊತ್ತಿತ್ತು, ಆದರೆ ಅವರು ಆಟದಿಂದ ನಿವೃತ್ತಿ ಹೊಂದಿ 1 ಕೋಟಿಯನ್ನಷ್ಟೆ ಸ್ವೀಕರಿಸಿದರು. ಒಟ್ಟಾರೆ ಚಂದೇರ್ ಅದ್ಭುತವಾಗಿ ಆಡಿ ಈ ಸೀಸನ್ನ ಮೊಟ್ಟ ಮೊದಲ ಕೋಟ್ಯಧಿಪತಿಯಾಗಿ ಗುರುತಿಸಿಕೊಂಡಿದ್ದಾರೆ.

    LATEST NEWS

    ಪ್ರಜಾಪ್ರಭುತ್ವದ ದೇಗುಲದಲ್ಲೇ ಅ*ತ್ಯಾ*ಚಾರ ಮಾಡಿದ್ರಾ ಮುನಿರತ್ನ..!?

    Published

    on

    ಬೆಂಗಳೂರು : ಜಾತಿ ನಿಂದನೆ ಹಾಗೂ ಕೊ*ಲೆ ಬೆದರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದ ಶಾಸಕ ಮುನಿರತ್ನ ಸದ್ಯ ಅ*ತ್ಯಾಚಾರ ಪ್ರಕರಣದಲ್ಲಿ ಆ*ರೋಪಿಯಾಗಿ ಎಸ್‌ಐಟಿ ವಶದಲ್ಲಿದ್ದಾರೆ. ಇದೀಗ ಅ*ತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತನ್ನ ಮೇಲೆ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲೇ ಮನಿರತ್ನ ಅ*ತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಸಂತ್ರಸ್ತೆಯ ಈ ಹೇಳಿಕೆಯಿಂದ ಶಾಸಕ ಮುನಿರತ್ನ ವಿರುದ್ಧ ಜನಾಕ್ರೋಶ ತೀವ್ರಗೊಂಡಿದೆ.

    ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯುವ ವಿಧಾನ ಸೌಧದ ಮೂರನೇ ಮಹಡಿ ಹಾಗೂ ವಿಕಾಸ ಸೌಧದ ಮುನಿರತ್ನ ಕಚೇರಿಯಲ್ಲಿ ತನ್ನ ಮೇಲೆ ಅ*ತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕೆಲ ಕಾರ್ಯಕರ್ತರು ವಿಕಾಸ ಸೌಧದ ಬಳಿ ಅರ್ಚಕರನ್ನು ಕರೆತಂದು ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಅನುಮತಿ ಪಡೆಯದೆ ವಿಕಾಸ ಸೌಧಕ್ಕೆ ತೆರಳಲು ಯತ್ನಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

     

    ಮುನಿರತ್ನ ವಿಚಾರವಾಗಿ ಹಲವು ಸ್ಫೋ*ಟಕ ವಿಚಾರಗಳು ಬಹಿರಂಗವಾಗುತ್ತಿದ್ದು, ತನ್ನ ನೀಚ ಕೃ*ತ್ಯಕ್ಕೆ ಅದೆಂತಾ ಕೀಳು ಮಟ್ಟಕ್ಕೆ ಇಳಿದಿದ್ದ ಅನ್ನೋದು ಗೊತ್ತಾಗಿದೆ. ಇದರ ನಡುವೆ ವಿಕಾಸ ಸೌಧ ಹಾಗೂ ವಿಧಾನ ಸೌಧದಲ್ಲೇ ಇಂತಹ ಹೇಯ ಕೃ*ತ್ಯ ನಡೆಸಿದ್ದು ಘೋರ ಅಪ*ರಾಧ ಅಲ್ಲದೆ ಬೇರೆನೂ ಅಲ್ಲ. ಇದೀಗ ಪೊಲೀಸರು ಸಂತ್ರಸ್ತೆಯ ಹೇಳಿಕೆಯ ವಿಚಾರವಾಗಿ ಮುನಿರತ್ನರನ್ನ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

    Continue Reading

    DAKSHINA KANNADA

    ಐಶ್ವರ್ಯಾ ರೈಗೆ ಆರೋಗ್ಯ ಸಮಸ್ಯೆ..! ಪೋಸ್ಟ್‌ ವೈರಲ್‌..!

    Published

    on

    ಮಂಗಳೂರು :  ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ ವಿಚಾರವಾಗಿ ಇತ್ತೀಚೆಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಸಾಕಷ್ಟು ಸುದ್ದಿಯಾಗಿದ್ದರು. ಐಶ್ವರ್ಯಾ ರೈ ಹಾಗೂ ಅಭಿಶೇಖ್ ಬಚ್ಚನ್‌ ಡಿವೋರ್ಸ್‌ ವಿಚಾರವಾಗಿ ದಿನಕ್ಕೊಂದು ಸುದ್ದಿ ಹರಡುತ್ತಿತ್ತು. ಈ ನಡುವೆ ತನ್ನ ಸೌಂದರ್ಯದ ಕಡೆ ಗಮನ ಕೊಡುತ್ತಿದ್ದ ಐಶ್ವರ್ಯಾ ರೈ ಇದೀಗ ತೂಕ ಏರಿಸಿಕೊಂಡ ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ ಇತ್ತೀಚೆಗೆ 2024 ರ ಫ್ಯಾಶನ್ ವೀಕ್‌ನಲ್ಲೂ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೆಮಿಂಗ್ ರೀತಿಯಲ್ಲಿ ನಟಿ ಟ್ರೋಲ್ ಆಗುತ್ತಿದ್ದಾರೆ. ಪೋಸ್ಟ್ ಒಂದರಲ್ಲಿ “ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್​ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಬರೆಯಲಾಗಿದೆ. ಆದ್ರೆ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಡಿಲೀಟ್ ಕೂಡಾ ಮಾಡಲಾಗಿದೆ.


    ಐಶ್ವರ್ಯಾ ರೈ ಕುರಿತಾದ ಇಂತಹ ವಿಚಾರಗಳು ಸುದ್ದಿಯಾಗುತ್ತಿರುವುದು ಇದೇನು ಹೊಸದಲ್ಲವಾದ್ರೂ, ಐಶ್ವರ್ಯ ತೂಕ ಹೆಚ್ಚಿಸಿಕೊಂಡಿದ್ದಾರೆ ಅನ್ನೋದು ಕೂಡಾ ಸುಳ್ಳಲ್ಲ. ಇತ್ತೀಚೆಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಅವರು ದಪ್ಪವಾಗಿ ಕಾಣಿಸಿಕೊಂಡಿದ್ದು ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ.

    Continue Reading

    DAKSHINA KANNADA

    ಮೊಬೈಲ್ ವಿಚಾರಕ್ಕೆ ಗಲಾಟೆ ಕೊ*ಲೆಯಲ್ಲಿ ಅಂತ್ಯ : ಆ*ರೋಪಿ ಅರೆಸ್ಟ್‌..!

    Published

    on

    ಮಂಗಳೂರು :  ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಸಮೀಪ ಸೆಪ್ಟಂಬರ್ 21 ರಂದು ನಡೆದಿದ್ದ ಕೊ*ಲೆ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲಕ 39 ವರ್ಷದ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾತನ ಕೊ*ಲೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ತೋಟಾ ಬೆಂಗ್ರೆಯ ನಿವಾಸಿಯಾಗಿರುವ ಧರ್ಮರಾಜ್ ಸುವರ್ಣ ಎಂಬಾತನನ್ನು ಬಂಧಿಸಿದ್ದಾರೆ.

    ಕೊ*ಲೆ ನಡೆಸಿ ಪರಾರಿಯಾಗಿ ಕೇರಳದ ಕೊಝಿಕೋಡ್‌ ಜಿಲ್ಲೆಯ ಚೊಂಪಾಳ ಎಂಬಲ್ಲಿ ಆ*ರೋಪಿ ಅಡಗಿಕೊಂಡಿದ್ದ. ಆ*ರೋಪಿಯ ಜಾಡು ಹಿಡಿದು ಹೋದ ಪೊಲೀಸರು ಸೆಪ್ಟಂಬರ್ 26 ನಸುಕಿನ ಜಾವ 3 ಘಂಟೆಗೆ ಆ*ರೋಪಿಯನ್ನು ಬಂಧಿಸಿದ್ದಾರೆ.  ಆ*ರೋಪಿ ಹಾಗೂ ಕೊ*ಲೆಯಾದ ಬಸವರಾಜ್ ವಡ್ಡರ್‌ ಕೆಲ ಸಮಯದಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಧರ್ಮರಾಜ್ ಹೊಸ ಮೊಬೈಲ್ ಒಂದನ್ನು ಖರೀದಿ ಮಾಡಿದ್ದು, ಅದನ್ನು ಬಸವರಾಜ್‌ ವಡ್ಡರ್ ಉಪಯೋಗಕ್ಕೆ ಪಡೆದುಕೊಂಡಿದ್ದ. ಆದ್ರೆ ಮೊಬೈಲ್ ಹಿಂತಿರುಗಿಸದೆ ಸತಾಯಿಸಿದ್ದು, ಮೊಬೈಲ್ ಹಾಳು ಮಾಡಿದ್ದ ಎಂಬುವುದು ಧರ್ಮರಾಜ್ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು,  ಧರ್ಮರಾಜ್ ಕೋಪದಿಂದ ಮರದ ಸಲಾಕೆಯಿಂದ ಬಸವರಾಜ್ ವಡ್ಡರ್ ಮೇಲೆ ಹ*ಲ್ಲೆ ನಡೆಸಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬಸವರಾಜ್ ವಡ್ಡರ್ ರ*ಕ್ತಸ್ರಾವದಿಂದ ಮೃ*ತ ಪಟ್ಟಿದ್ದಾಗಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಧರ್ಮರಾಜ್‌ನನ್ನು  ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಮುಂದುವರೆಸಿದ್ದಾರೆ.

    Continue Reading

    LATEST NEWS

    Trending