Friday, August 12, 2022

ಮಂಗಳೂರು: ಖಾಸಗಿ ಸಿಟಿ ಬಸ್ಸುಗಳಲ್ಲಿ ನೂತನ ಸ್ಪರ್ಶದೊಂದಿಗೆ ಚಲೋ ಕಾರ್ಡ್‌ ಬಿಡುಗಡೆ

ಮಂಗಳೂರು: ನಗರದ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲಕರವಾಗಲಿ ಎನ್ನುವ ದೃಷ್ಟಿಯಿಂದ ಪರಿಚಯಿಸಲಾಗಿರುವ ಚಲೋ ಕಾರ್ಡ್‌ ಅತ್ಯಲ್ಪ ಅವಧಿಯಲ್ಲೇ ಜನಪ್ರಿಯವಾಗಿದ್ದು, ಮಂಗಳೂರಿನಲ್ಲಿ ಸಂಚರಿಸುವ 42 ಮತ್ತು 44 ನಂಬರಿನ ಬಸ್ಸುಗಳಲ್ಲಿ ಚಲೋ ಡಿಜಿಟಲ್‌ ಪಾಸುಗಳು ಮತ್ತು ಲೈವ್‌ ಟ್ರ್ಯಾಕಿಂಗ್‌ ಅನ್ನು ಡಿಜಿಟಲ್ ವ್ಯವಸ್ಥೆಯನ್ನು ಬಸ್ಸುಗಳಲ್ಲಿ ಘೋಷಿಸಲಾಗಿದೆ.


ಈ ಹಿನ್ನೆಲೆಯಲ್ಲಿ ಈ ವಿಶೇಷ ವ್ಯವಸ್ಥೆಗೆ ಸಂಚಾರಿ ಎಸಿಪಿ ನಟರಾಜ್‌ ಇಂದು ತಲಪಾಡಿಯಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇದೊಂದು ಅತ್ಯುತ್ತಮ ಸವಲತ್ತುಗಳನ್ನು ಹೊಂದಿರುವ ವಿಶೇಷ ಆಪ್ ಆಗಿದ್ದು, ಅತ್ಯಲ್ಪ ಅವಧಿಯಲ್ಲಿ ಜನಮೆಚ್ಚುಗೆ ಪಡೆದಿದೆ.

ಇದನ್ನು ಸರ್ವರೂ ಬಳಸಿಕೊಳ್ಳಬೇಕು ಎಂದರು. ಇದೇ ಸಂದರ್ಭ ಪ್ರಯಾಣಿಕರಿಗೆ ವಿಶೇಷ ಡಿಜಿಟಲ್‌ ಚಲೋ ಕಾರ್ಡ್‌ ವಿತರಣಾ ಕಾರ್ಯವೂ ನಡೆಯಿತು. ಡಿಜಿಟಲ್‌ ಪಾಸ್‌ಗಳು ಗ್ರಾಹಕರಿಗೆ ಲಾಭದಾಯಕ, ಅನುಕೂಲಕರ ಮತ್ತು ಸುರಕ್ಷಿತವಾಗಿರುವ ಗುರಿಯನ್ನು ನೀಡಿದೆ.

ಸ್ಟೇಟ್‌ಬ್ಯಾಂಕ್‌ – ತೊಕ್ಕೊಟ್ಟು ಮತ್ತು ಸ್ಟೇಟ್‌ಬ್ಯಾಂಕ್‌ ತಲಪಾಡಿ ಮಾರ್ಗದಲ್ಲಿ ಸಾವಿರಾರು ಮಂದಿ ಪ್ರಯಾಣಿಕರನ್ನು ಪಾಸ್‌ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಕಚೇರಿಗೆ ಹೋಗುವವರು, ದೈನಂದಿನ ಪರಯಾಣಿಕರು, ವಿದ್ಯಾರ್ಥಿಗಳು , ಅಪರೂಪದಲ್ಲಿ ಪ್ರಯಾಣ ಹೋಗುವವರು ಕೂಡಾ ಚಲೋಟ್‌ ಕಾರ್ಡ್‌ ಬಳಸುತ್ತಿದ್ದಾರೆ.

ಈ ಪಾಸುಗಳ ಪ್ರಯಾಣಿಕರಿಗೆ ಅನುಕೂಲಕರವಾಗುವ ಜೊತೆಗೆ ಹೆಚ್ಚಿನ ಹಣದ ಉಳಿತಾಯವನ್ನೂ ಮಾಡುತ್ತಿದೆ ಎಂದು ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ವಿವರಿಸಿದರು.

ಕಳೆದ ವರ್ಷ ಚಲೋ ಕಾರ್ಡ್‌ ನಗರದ ಬಹುತೇಕ ಬಸ್ಸುಗಳಲ್ಲಿ ಸ್ವಯಂಸೇವಾ ಟಿಕೆಟಿಂಗ್ ಯಂತ್ರಗಳು, ಸಂಪರ್ಕರಹಿತ ಪಾವತಿಗಳು ಮತ್ತು ಪೇಪರ್‌ಲೆಸ್‌ ಟಿಕೆಟಿಂಗ್‌ನೊಂದಿಗೆ ಡಿಜಿಟಲೀಕರಣಗೊಳಿಸಿದ್ದು, ಹಾಂಕ್‌ಕಾಂಗ್, ಸಿಂಗಾಪುರ, ಲಂಡನ್‌ನಂತಹ ಜಾಗತಿಕ ನಗರಗಳಲ್ಲಿ ಬಸ್ ಪ್ರಯಾಣಕ್ಕೆ ಸಮಾನವಾದ ಅನುಭವನವನ್ನು ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಕಾರ್ಯದರ್ಶಿ ವಿಜಯಕೃಷ್ಣ ಪುತ್ರನ್, ಪ್ರಮುಖರಾದ ಅಶ್ವತ್ಥಾಮ ಹೆಗ್ಡೆ, ಸುದೇಶ್ ಕುಮಾರ್‌, ಅಬ್ದುಲ್ ರಝಾಕ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6...

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹಿಟ್‌ ಆ್ಯಂಡ್‌ ರನ್‌: ಓರ್ವ ಸ್ಪಾಟ್‌ ಡೆತ್‌, ಮತ್ತೋರ್ವನಿಗೆ ಗಾಯ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿ ಹುಲ್ಲು ಕಟಾವು ಮಾಡುತ್ತಿದ್ದ ಕಾರ್ಮಿಕರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಘಟನೆ ಮಂಗಳೂರು ನಗರದ ಜೆಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು...

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....