Connect with us

DAKSHINA KANNADA

ಸಿಟಿ ಬಸ್‌ ಗಳ ಚಲೋ ಕಾರ್ಡ್ ಚಲೋ ಇಲ್ಲಾರೀ..! ಕಾರ್ಡ್ ತೋರಿಸಿದ ಪ್ರಯಾಣಿಕನಿಗೆ ಅರ್ಧ ಚಂದ್ರ ತೋರಿಸಿದ ನಿರ್ವಾಹಕ..

Published

on

ಸಿಟಿ ಬಸ್‌ ಗಳ ಚಲೋ ಕಾರ್ಡ್ ಚಲೋ ಇಲ್ಲಾರೀ..! ಕಾರ್ಡ್ ತೋರಿಸಿದ ಪ್ರಯಾಣಿಕನಿಗೆ ಅರ್ಧ ಚಂದ್ರ ತೋರಿಸಿದ ನಿರ್ವಾಹಕ..

Chalo card for city buses of Mangalore r Use less..!?

ಮಂಗಳೂರು :  ಮಂಗಳೂರು ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರಿಗೆ ಅನೂಕೂಲವಾಗಲೆಂದು, ದಕಿಣ ಕನ್ನಡ ಜಿಲ್ಲಾಬಸ್ ಮಾಲಕ ಚಾಲಕರ ಸಂಘ ಚಲೋ ಸಂಸ್ಥೆ ಸಹಯೋಗದೊಂದಿಗೆ ಸ್ಮಾಟ್ ಟರ್ಚ್ ನೀಡಿ ಚಲೋ ಕಾರ್ಡ್ ವ್ಯವಸ್ಥೆ ಪರಿಚಯಿಸಿದೆ.

ಆದ್ರೆ ಸದ್ಯ ಈ ಚಲೋ ಕಾರ್ಡ್‍ನಿಂದ ಬಸ್ ಪ್ರಯಾಣಿಕರಿಗೆ ಅನುಕೂಲವಾಗುವ ಬದಲು ಅವಮಾನಕ್ಕೆ ಈಡಾಗುವಂತಹ ಪರಿಸ್ಥಿತಿ ಎದುರಾಗಿದೆ.

ಚಲೋ ಕಾರ್ಡ್ ತೋರಿಸಿದಾಗ ಮುಖವನ್ನು ಸಿಂಡರಿಸ್ತಾ ಇದ್ದು, ಕಾರ್ಡ್ ಬದಲಿಗೆ ದುಡ್ಡು ಕೊಡಿ ಎಂದು ಸಿಟಿ ಬಸ್ ನಿರ್ವಾಹಕರು ಒತ್ತಾಯಿಸುತ್ತಾರೆ.

ಇಲ್ಲದಿದ್ದರೆ ಬಸ್‍ನಿಂದ ಇಳಿಯಿರಿ ಎಂದು ನಿರ್ವಾಹಕರು ಪ್ರಯಾಣಿಕರಿಗೆ ಅವಾಜ್ ಹಾಕುತ್ತಿದ್ದಾರೆ.

ಬಸ್ ನಿರ್ವಾಹಕನ ಈ ವರ್ತನೆಯಿಂದ ಹಲವು ಮಂದಿ ಪ್ರಯಾಣಿಕರು ಬಸ್ಸಿನಲ್ಲಿ ಮಾರ್ಯಾದಿ ಹೋಗುವುದು ಬೇಡ ಎಂದು , ಚಲೋ ಕಾರ್ಡ್ ಇದ್ದರೂ ದುಡ್ಡು ಕೊಟ್ಟು ಹೋಗುತ್ತಿದ್ದಾರೆ.

ಬಸ್ಸಿನಲ್ಲಿ ಆಗುವ ಈ ಸಮಸ್ಯೆಯನ್ನು ಹಲವು ಮಂದಿ ದೂರು ನೀಡದೆ ಸುಮ್ಮನೆ ಇದ್ದಾರೆ.

ಈ ವಿಚಾರದ ಕುರಿತು ದಕ್ಷಿಣ ಕನ್ನಡ ಬಸ್ ಚಾಲಕ ಮಾಲಕ ಸಂಘ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರ ಗಮನಕ್ಕೆ ತಂದಾಗ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದು,ಸದ್ಯ ಸಿಟಿ ಬಸ್ ಪ್ರಯಾಣಿಕರು ಸಮಸ್ಯೆ ಪರಿಹಾರವಾಗುತ್ತದೆ ಅನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

ಸಿಟಿ ಬಸ್‍ನಲ್ಲಿ ಚಲೋ ಕಾರ್ಡ್ ಬಗ್ಗೆ ನಿರ್ಲಕ್ಷ್ಯ ವಹಿಸಿ , ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ ಮಾಡುವ ಇಂತಹ ಕೆಲವು ಕಂಡೆಕ್ಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಇಂತಹುದೇ ಘಟನೆ ಮಂಗಳೂರು ನಗರದ ಸಿಟಿ ಬಸ್ ನಲ್ಲಿ  ಶುಕ್ರವಾರ ನಡೆದಿದೆ.

ನಗರದಲ್ಲಿ ಓಡಾಡುವ  ರೂಟ್ ನಂಬ್ರ 6 ರ ಸಿಟಿ ಬಸ್ ನಲ್ಲಿ ದಿನನಿತ್ಯ ಕೆಲಸಕ್ಕೆ ಹೋಗುವ ವ್ಯಕ್ತಿ ತಮ್ಮ ಚಲೋ ಕಾರ್ಡನ್ನು ಬಸ್ ನಿರ್ವಾಹಕನಿಗೆ ತೋರಿಸದಾಗ ಉಡಾಫೇಯಿಂದ ವರ್ಥಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಸ್ ನಿಂದ ಕೆಳಗಿಳಿಸಿದ್ದಾರೆ ಎಂದು ದೂರಿದ್ದಾರೆ.

ನಿರ್ವಾಹಕನ ಈ ರೀತಿಯ ದಬ್ಬಾಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು ಬಸ್ ಚಾಲಕ ಮಾಲಕ ಸಂಘಕ್ಕೆ ಮೌಖಿಕ ದೂರನ್ನು ನೀಡಲಾಗಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.

ಸಂಘ ಜಾರಿಗೆ ತಂದ ವ್ಯವಸ್ಥೆ ಮಂಗಳೂರಿನ ಪ್ರಜ್ಞಾವಂತ ಪ್ರಯಾಣಿಕರಿಗೆ ಸಹಕಾರಿಯಾಗಬೇಕಿದ್ದು ಜೊತೆಗೆ ಸಿಟಿ ಬಸ್ ಸಿಬಂದಿಗಳಿಗೆ ಬಸ್ ಏರುವ ಪ್ರಯಾಣಿಕರಲ್ಲಿ ಸೌಜನ್ಯದಿಂದ ವರ್ತಿಸುವ ಪಾಠ ಕೂಡ ಸಂಘ ಹೇಳಬೇಕಾಗಿದೆ.

1 Comment

1 Comment

  1. Anil kumar kankanady

    18/12/2022 at 6:36 AM

    ಜನರಿಗೆ ಪ್ರಯೋಜನ ವಾಗಳೆಂದು ಬಸ್ ಮಾಲಕರ ಸಂಘದ ಒಳ್ಳೆಯ ಬೆಳವಣಿಗೆ. ತಮ್ಮ ಸಂಘದ ಕಾರ್ಯಕ್ಕೆ ಅಭಿನಂದನೆಗಳು.ಜನರಿಗೆ ತೊಂದರೆ ಕೊಡುವ ದುರ್ನಡತೆ ತೋರುವ ಬಸ್ ನಿರ್ವಾಹಕರ ವರ್ತನೆ ಖಂಡನೆ.ಅದಕ್ಕೆ ಸೂಕ್ತ ಸಲಹೆ ನೀಡಿ.ನಿರ್ವಾಹಕರಿಗೆ ಸ್ವಲ್ಪ ನಷ್ಟ ತಮ್ಮ ಜೇಬು ತುಂಬುವ ಹಣ ಮಾಲಕರ ಕೈ ಸೇರುತ್ತದೆ ಎಂಬ ಸಿಟ್ಟು ಇದರಿಂದ ಆಗಿದೆ ಆದರೆ ಬಸ್ ಮಾಲಕರಿಗೆ ಇದು ಲಾಭ ತಂದಿದೆ ಜನರಿಗೂ ತುಂಬಾ ಉಪಯೋಗ ಲಾಭ ಪ್ರಯೋಜನ ಇದೆ ತಪ್ಪುಗಳು ನಡೆಯೋದು ಸಹಜ ನಿರ್ವಾಹಕರಿಗೆ ಸೂಕ್ತ ಸಲಹೆ ತರಬೇತಿ ನೀಡಿ.ಸರಿಪಡಿಸಿ ಜನರಿಗೆ ಉತ್ತಮ ಸೇವೆ ನೀಡಿ ಧನ್ಯವಾದ🙏

Leave a Reply

Your email address will not be published. Required fields are marked *

DAKSHINA KANNADA

ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!

Published

on

ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ‌ಮಾಹಿತಿ ನೀಡಿದ್ದಾರೆ.

ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Continue Reading

DAKSHINA KANNADA

ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ

Published

on

ಮಂಗಳೂರು: ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ  ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು
ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ  ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, “ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ” ಎಂದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ , ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.

Continue Reading

DAKSHINA KANNADA

Mangaluru: ಬೆಳ್ಮ ಬೋಲ್ದನ್‌ ಕುಟುಂಬಿಕರು ತರವಾಡು ಮನೆಯಲ್ಲಿ ಕೋಲೋತ್ಸವ

Published

on

ಮಂಗಳೂರು: ಕೊಣಾಜೆ ಬೆಳ್ಮದಲ್ಲಿರುವ ಬೋಲ್ದನ್‌ ಕುಟುಂಬಿಕರ ತರವಾಡು ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಮೂರನೇ ವರ್ಷದ ಕೋಲೋತ್ಸವ ಭಾನುವಾರ ರಾತ್ರಿ ಸಂಭ್ರಮದಿಂದ ಜರುಗಿತು.

ಭಾನುವಾರ ಬೆಳಿಗ್ಗೆ ಪ್ರಶಾಂತ್ ಉಡುಪ ಪೌರೋಹಿತ್ಯದಲ್ಲಿ ನಾಗತಂಬಿಲ, ಗಣಹೋಮ ನಡೆದ ಬಳಿಕ ಶ್ರೀ ವೆಂಕಟ್ರಮಣ ದೇವರ ಮುಡಿಪು ಕಟ್ಟುವಿಕೆಯಲ್ಲಿ ಸರ್ವ ಕುಟುಂಬಿಕರು ಪಾಲ್ಗೊಂಡು ದೇವತಾ ಕಾರ್ಯದಲ್ಲಿ ಭಾಗವಹಿಸಿದರು. ಮಧ್ಯಾಹ್ನ ಅನ್ನಸಂಪರ್ತಣೆ ನಡೆಯಿತು.

ಅದೇ ದಿನ ರಾತ್ರಿ 7.30ಕ್ಕೆ ದೈವದ ಭಂಡಾರ ಏರಿ ಬಳಿಕ ಕಲ್ಲುರ್ಟಿ , ಪಂಜುರ್ಲಿ, ಗುಳಿಗ ಕೋಲ ಉತ್ಸವ ಜರುಗಿತು. ಮರುದಿನ ಅಗೇಲು ಸೇವೆ ನಡೆಯಿತು.

ತರವಾಡು ಮನೆಯ ಮೋಹಿಣಿ ಬೆಳ್ಮ, ಐತಪ್ಪ ಬೆಳ್ತಂಗಡಿ, ಧರ್ಣಪ್ಪ ಧರ್ಮಸ್ಥಳ, ವಿಶ್ವನಾಥ ಕಡಬ, ದಯಾನಂದ್‌ ಹುಬ್ಬಳ್ಳಿ, ದೇವದಾಸ ಬೆಳ್ಮ, ಆನಂದ ಕಡಬ, ಚಂದ್ರಶೇಖರ ಎಕ್ಕೂರು, ಹರೀಶ ವರ್ಕಾಡಿ ಮೊದಲಾದವರು ಭಾಗವಹಿಸಿದ್ದರು.

ರಾತ್ರಿ ತರವಾಡಿನ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ನಡೆದು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆನಂದ ಕಡಬ ಮಂಡಿಸಿದರು.

ಕ್ಷೇತ್ರದ ಅಂಗಣಕ್ಕೆ ಇಂಟರ್‌ಲಾಕ್ ಅಳವಡಿಸಿದ ದಯಾನಂದ ಹುಬ್ಬಳ್ಳಿ, ತರವಾಡು ಮನೆಗೆ ಗ್ರೈಂಡರ್‌ ನೀಡಿದ ಶೋಭಾ ವಾಮಂಜೂರು, ತರವಾಡು ಮನೆಗೆ ಕೊಡುಗೆಯಾಗಿ ನೀಡಿದ ಕುರ್ಚಿಗಳಿಗೆ ಆರ್ಥಿಕ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು.

 

ದಿನಕರ ಕಯ್ಯಾರ, ವಿಕ್ರಾಂತ್‌ ಜಪ್ಪಿನಮೊಗರು , ಧನ್‌ರಾಜ್ ತಲಪಾಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರೂ ಉಪಸ್ಥಿತರಿದ್ದರು.

Continue Reading

LATEST NEWS

Trending