Connect with us

    BIG BOSS

    ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!

    Published

    on

    ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ತಮ್ಮ ಜರ್ನಿ ಮುಗಿಸಿ ನಿನ್ನೆ ಆಚೆ ಬಂದಿದ್ದಾರೆ. ಬರೋಬ್ಬರಿ 106 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದ ಚೈತ್ರಾ ಅವರು, ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

    ಮನೆಯಿಂದ ಹೊರಬಿದ್ದ ಬೆನ್ನಲ್ಲೇ ಬಿಗ್​ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಎದುರಾದರು. ಈ ವೇಳೆ ಸುದೀಪ್​, ಚೈತ್ರಾ ಅವರ ಬಿಗ್​ಬಾಸ್​ ಜರ್ನಿಯ ವಿಟಿ ತೋರಿಸಿದರು. ಇದನ್ನು ನೋಡಿದ ಚೈತ್ರಾ ಕುಂದಾಪುರ ತುಂಬಾನೇ ಭಾವುಕರಾದರು. ಅದನ್ನು ಗಮನಿಸಿದ ಕಿಚ್ಚ ಸುದೀಪ್, ಚೈತ್ರಾ ಅವರ ಬಳಿ ಬಂದು ಕಣ್ಣೀರು ಒರೆಸಿದರು. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣವನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಬಳಿಕ ಮಾತನಾಡಿದ ಸುದೀಪ್, ನೀವು ತುಂಬಾ ಚೆನ್ನಾಗಿ ಆಡಿದ್ದೀರಿ. ನಿಮಗೆ ನಾವು ತೋರಿಸಿರುವ ವಿಡಿಯೋದಲ್ಲಿ ಒಂದು ಅದ್ಭುತ ಇದೆ. ಎಷ್ಟು ಸಲ ನೀವು ಕಳಪೆ ತೆಗೆದುಕೊಂಡಿದ್ದೀರಿ ಅನ್ನೋದು ಇಂಪಾರ್ಟೆಂಟ್ ಅಲ್ಲ. ವಿಡಿಯೋ ಫಿನಿಶ್ ಆಗಿರೋದು ಉತ್ತಮದೊಂದಿಗೆ. ಬಿಗ್​ಬಾಸ್​ನಿಂದ ನಿಮಗೆ ಒಳ್ಳೆಯದಾಗಿದೆ ಅಂದುಕೊಳ್ತೀನಿ ಎಂದರು.

    ನಂತರ ಚೈತ್ರಾ ಕುಂದಾಪುರ ಮಾತನಾಡಿ.. ಮೊದಲನೇ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಬರಬಾರದು ಅಂತ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ ಇರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೇಗೆ ಬದುಕಬಹುದು ಅನ್ನೋದನ್ನು ಬಿಗ್​ಬಾಸ್​ ಮನೆಯಲ್ಲಿ ಕಲಿತೆ. ಇಲ್ಲಿಗೆ ಬಂದು ಇಷ್ಟು ಜನರ ಜೊತೆಗೆ ಹೇಗೆ ಬದುಕಬೇಕು ಅಂತ ಕಲಿತ್ತಿದ್ದೇನೆ. 105 ದಿನದ ಸಾರ್ಥಕವಾಗಿ ಬದುಕಿದ್ದೇನೆ ಎಂದರು.

    BIG BOSS

    ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ..!

    Published

    on

    ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಬಾಕಿಯಿದೆ. ಹೀಗಾಗಿ. ದಿನದಿಂದ ದಿನಕ್ಕೆ ಆಟ ಹೊಸ-ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದ್ಯ ೧೦೬ನೇ ದಿನಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಒಂಭತ್ತು ಮಂದಿ ಸದಸ್ಯರಿದ್ದಾರೆ. ಈಗಾಗಲೇ ಭಾನುವಾರದ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಅಚ್ಚರಿ ವ್ಯಕ್ತಿ ದೊಡ್ಮನೆಯಿಂದ ಹೊರಬಂದಿದ್ದಾರೆ.

    ಚೈತ್ರಾ ಎಲಿಮಿನೇಟ್

    ಇದೀಗ ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇಷ್ಟು ದಿನ ಕೆಲವರು ಚೈತ್ರಾ ಅವರಿಗೆ ಹೆಚ್ಚು ವೋಟ್ ಬೀಳುತ್ತಿಲ್ಲ ಆದರೂ ಹೇಗೆ ಸೇಫ್ ಆಗುತ್ತಿದ್ದಾರೆ ಅಂತ ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಚೈತ್ರಾ 105 ದಿನಗಳ ದೊಡ್ಮನೆ ಜರ್ನಿ ಮುಗಿಸಿದ್ದಾರೆ.

    ಚೈತ್ರಾ ಹಿನ್ನೆಲೆ

    ಉಡುಪಿ ಜಿಲ್ಲೆಯ ಕುಂದಾಪುರದವರಾದ ಚೈತ್ರಾ ಕುಂದಾಪುರ, ತೆಕ್ಕಟ್ಟೆಯಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದರು. ಆನಂತರ ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದ ಇವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದು ಮುಗಿದ ಬಳಿಕ ಸಮಯ ಸುದ್ದಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ ಹಾಗೂ ಮುಕ್ತ ನ್ಯೂಸ್ ಎಂಬ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದರು. ಬಳಿಕ ಉದಯವಾಣಿ ಪತ್ರಿಕೆಯಲ್ಲೂ ಕೆಲಕಾಲ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು.

    Continue Reading

    BIG BOSS

    BBK11: ಐವರು ನಾಮಿನೇಟ್​, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್​ಪಾಸ್​ ಯಾರಿಗೆ..?

    Published

    on

    ಬಿಗ್​​ಬಾಸ್​ ಫಿನಾಲೆಗೆ ಕೇವಲ ಎರಡು ವಾರ ಮಾತ್ರ ಬಾಕಿ ಇದೆ. ವೀಕ್ಷಕರಲ್ಲಿ ಯಾರು ಬಿಗ್​ಬಾಸ್​ ಟೈಟಲ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಈಗಾಗಲೇ ಓರ್ವ ಸ್ಪರ್ಧಿ ಹನುಮಂತ ಅವರು ಫಿನಾಲೆಗೆ ಪ್ರವೇಶ ಮಾಡಿದ್ದಾರೆ.

    ಅಂದ್ಹಾಗೆ ಈ ವಾರ ನಡೆದ ಟಿಕೆಟ್ ಟು ಫಿನಾಲೆ ಫೈಟ್​ನಲ್ಲಿ ಗೆದ್ದು, ಫಿನಾಲೆಗೆ ಹನುಮಂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಬಿಗ್​ಬಾಸ್​ ಮತ್ತಷ್ಟು ರಂಗು ಪಡೆದುಕೊಂಡಿದೆ. ಇದರ ಮಧ್ಯೆ ವೀಕೆಂಡ್ ಬಂದಿದ್ದು, ವೀಕ್ಷಕರು ಕಿಚ್ಚನ ಪಂಚಾಯ್ತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

    ನೂರು ದಿನಗಳ ಕಾಲ ನಡೆದ ರೋಚಕ ಆಟ, ಕಾದಾಟಗಳಿಗೆ ಟ್ವಿಸ್ಟ್​ ಸಿಗುತ್ತಿದೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐವರು ನಾಮಿನೇಟ್ ಆಗಿದ್ದಾರೆ. ಭವ್ಯಗೌಡ, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ, ಚೈತ್ರಾ ಕುಂದಾಪುರ ಅವರು ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಯಾರಿಗೆ ಗೇಟ್​ಪಾಸ್ ಸಿಗಲಿದೆ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ.

    ಅಲ್ಲದೇ ಇಂದಿನ ಕಿಚ್ಚನ ಎಪಿಸೋಡ್​​ನಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇಡೀ ವಾರ ಟಿಕೆಟ್​ ಟು ಫಿನಾಲೆ ಟಾಸ್ಕ್​ ನಡೆದಿದೆ. ಈ ವೇಳೆ ನಡೆದ ಸರಿ ತಪ್ಪುಗಳು ಮತ್ತು ಫಿನಾಲೆಗೆ ಎಂಟ್ರಿ ನೀಡಲು ಸ್ಪರ್ಧಿಗಳನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಮಾಡಲಿದ್ದಾರೆ.

    Continue Reading

    BIG BOSS

    BBK11; ಶರಣ್, ಅದಿತಿ ಫಿನಾಲೆ ಟಿಕೆಟ್ ಕೊಟ್ಟಿರುವುದು ಯಾರಿಗೆ ಗೊತ್ತಾ…?

    Published

    on

    100 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಬಿಗ್​ ಬಾಸ್​ ಶೋ ಸಾಗುತ್ತಿದೆ. ಇನ್ನೇನು ಕೆಲವು ದಿನಗಳು ಮಾತ್ರ ಈ ಶೋ ನಡೆಯಲಿದ್ದು ಅಷ್ಟರಲ್ಲೇ ಅದೃಷ್ಟಶಾಲಿ ಯಾರೆಂದು ಆಯ್ಕೆ ಮಾಡಬೇಕಿದೆ. ಈ ಸಂಬಂಧ ಈ ವಾರದ ಫಿನಾಲೆಗೆ ಹೋಗುವ ಒಬ್ಬ ಆಟಗಾರರ ಹೆಸರು ಹೇಳಲು ನಟ ಶರಣ್ ಹಾಗೂ ಅದಿತಿ ಪ್ರಭುದೇವ ಅವರು ಬಿಗ್​ಬಾಸ್ ಮನೆಗೆ ಆಗಮಿಸಿದ್ದಾರೆ.

    ಬಿಗ್​ಬಾಸ್ ಕೊಟ್ಟಿರುವ ಟಾಸ್ಕ್ ಅನ್ನು ರಜತ್ ಕಿಶನ್, ಹನುಮಂತು, ಭವ್ಯ ಹಾಗೂ ತ್ರಿವಿಕ್ರಮ್ ಈ ನಾಲ್ವರು ಸರದಿಯಲ್ಲಿ ಆಡಬೇಕಾಗಿದೆ. ಟ್ರಂಕ್​ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್​ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ​

    ಸದ್ಯ ಈ ಟಾಸ್ಕ್​ಗೆ ಅಣಿಯಾಗಿರುವ ತ್ರಿವಿಕ್ರಮ್, ರಜತ್ ಕಿಶನ್, ಭವ್ಯ ಹಾಗೂ ಹನುಮಂತು ಇವರಲ್ಲಿ ಯಾರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸುತ್ತಾರೋ ಅವರು ಫಿನಾಲೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲಿದ್ದಾರೆ. ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ಸ್ಪರ್ಧಿಯನ್ನು ಗುರುತಿಸಿದ್ದಾರೆ. ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಎಂದು ಶರಣ್ ಹೇಳಿದ್ದಾರೆ. ಆದರೆ ಸ್ಪರ್ಧಿ ಯಾರು ಎಂದು ಹೆಸರನ್ನು ಬಹಿರಂಗ ಪಡಿಸಿಲ್ಲ.

    ಇನ್ನು ಗೇಮ್​ನಲ್ಲಿ ಭವ್ಯ, ಹನುಮಂತು, ತ್ರಿವಿಕ್ರಮ್, ಕ್ಯಾಪ್ಟನ್ ರಜತ್ ಎಲ್ಲರೂ ಮೇಲೆ ಏರಿ ಟಾಸ್ಕ್ ಪೂರ್ಣಗೊಳಿಸಿ, ಬಾವುಟವನ್ನಿಟ್ಟು ಬಿಗ್​ಬಾಸ್ ಎಂದು ಕೂಗಿದ್ದಾರೆ. ಆದರೆ ಯಾರು ಕಡಿಮೆ ಅವಧಿಯಲ್ಲಿ ಟಾಸ್ಕ್ ಪೂರ್ಣಗೊಳಸಿದ್ದಾರೆ, ಯಾರು ಗೆಲುವು ಪಡೆದಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಅದನ್ನು ಇಂದು ನಡೆಯುವ ಶೋನಲ್ಲಿ ತಿಳಿಸbಹುದು.

    Continue Reading

    LATEST NEWS

    Trending