ಕಡಬ: ಮಹಿಳೆಯೋರ್ವರು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸರವನ್ನು ಕಿತ್ತುಕೊಂಡು ಕಾರಿನಲ್ಲಿ ಬಂದ ಇಬ್ಬರು ಪರಾರಿಯಾಗಿದ್ದು, ನಂತರ ಕಾರು ಅಪಘಾತಗೊಂಡು ಇಬ್ಬರೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡಬದ ಸವಣೂರಿನಲ್ಲಿ ಬೆಳಕಿಗೆ ಬಂದಿದೆ.
ಮಹಿಳೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸರವನ್ನು ಕಿತ್ತುಕೊಂಡು ಕಾರಿನಲ್ಲಿ ಬಂದ ಇಬ್ಬರು ಪರಾರಿಯಾದರು. ತಕ್ಷಣ ಮಹಿಳೆ ಕಿರುಚಿಕೊಂಡಾಗ ಸ್ಥಳದಲ್ಲಿದ್ದ ಜನರು ಕಳ್ಳರನ್ನು ಬೆನ್ನಟ್ಟಿದರು.
ಆಗ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ್ದರಿಂದ ಇಬ್ಬರು ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.
ಇಬ್ಬರು ಕೂಡ ಕದಿಯುವುದಕ್ಕಾಗಿಯೇ ಕಾಸರಗೋಡಿನಿಂದ ಬಂದಿದ್ದರು ಎಂದು ತಿಳಿದು ಬಂದಿದೆ.