ಮಂಗಳೂರು/ಮುಂಬೈ : ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಹಿಂದಿ ಬಿಗ್ ಬಾಸ್ ಸೀಸನ್ 18 ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ನಲ್ಲಿ ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ.
ಈ ವಾರ ನಡೆಯಲಿರುವ ‘ವೀಕೆಂಡ್ ಕಾ ವಾರ್’ ಎಪಿಸೋಡ್ ನಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಆಪ್ತ ಸ್ನೇಹಿತೆ ರವಿನಾ ಟಂಡನ್, ಅವರ ಮಗಳು ರಾಶಾ ಹಾಗೂ ಅಜಯ್ ದೇವಗನ್ ಸಹೋದರಳಿಯ ಅಮನ್ ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರ ಜೊತೆಗೆ ಕ್ರಿಕೆಟಿಗ ಯಜುವೇಂದ್ರ ಚಹಲ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರವಿನಾ ಟಂಡನ್ ಮತ್ತು ಇತರರು ಸಿನಿಮಾ ಪ್ರಮೋಷನ್ ಸಂಬಂಧ ಶನಿವಾರ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಭಾನುವಾರದ ಎಪಿಸೋಡ್ ನಲ್ಲಿ ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್ ಮತ್ತು ಶಶಾಂಕ್ ಸಿಂಗ್ ಬರಬಹುದು ಎನ್ನಲಾಗುತ್ತಿದೆ. ಈ ಮೂವರು ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸ್ಪೀನ್ನರ್ ಯಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಭಾರಿ ಸುದ್ದಿಯಲ್ಲಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಇದೇ ವದಂತಿಯಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೂಡ ಸಿಲುಕಿಕೊಂಡಿದೆ. ಹೀಗಾಗಿ ಶ್ರೇಯಸ್ ಅಯ್ಯರ್, ಚಹಲ್ ಒಟ್ಟಿಗೆ ಶೋನಲ್ಲಿ ಕಾಣಿಸಿಕೊಳ್ಳುತ್ತಿರೋದು ವೀಕ್ಷಕರಿಗೆ ಭಾರೀ ಕುತೂಹಲ ಮೂಡಿಸಿದೆ.
ಕನ್ನಡದ ಬಿಗ್ ಬಾಸ್ ಶೋನಲ್ಲಿ ಕಳೆದ ವಾರ ಯಾರನ್ನೂ ಮನೆಯಿಂದ ಆಚೆ ಕಳಿಸಿಲ್ಲ. ಆದರೆ ಈ ವಾರ 9 ಸ್ಪರ್ಧಿಗಳಲ್ಲಿ ಯಾರದರೂ ಗೇಟ್ ಪಾಸ್ ಪಡೆದುಕೊಳ್ಳುತ್ತಾರೆ. ಅದು ಯಾರು ಎಂಬುದೇ ಪ್ರೇಕ್ಷಕರ ಕುತೂಹಲವಾಗಿತ್ತದೆ. ಹೀಗಾಗಿಯೇ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಯನ್ನು ಹೊರಗೆ ಕಳಿಸಿಕೊಡುತ್ತಾರೆ. ಗ್ರ್ಯಾಂಡ್ ಫಿನಾಲೆ ಸಮೀಪಿಸುತ್ತಿದ್ದು ಸ್ಪರ್ಧಿಗಳಿಗೆ ಒತ್ತಡ ಹೆಚ್ಚಾಗಿದೆ. ಇದರ ಜೊತೆ ಟಾಸ್ಕ್ಗಳಲ್ಲೂ ಗೆಲುವು ಪಡೆಯಬೇಕಾಗಿದೆ.
ಮನೆಯಲ್ಲಿನ ಸದಸ್ಯರಿಗೆ ಇಂದು ನೀಡಿರುವ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದೆ ಹೆಚ್ಚು ಕಾಣುತ್ತದೆ. ಟಾಸ್ಕ್ ಪ್ರಕಾರ ಒಂದು ಕೈಯಲ್ಲಿ ಪೋಲ್ ಮತ್ತೊಂದು ಕೈಯಲ್ಲಿ ಬಣ್ಣದ ನೀರಿನ ಬಾಟಲ್ ಕೊಟ್ಟಿರುತ್ತಾರೆ. ಒಂದು ಬಾರಿಗೆ ಇಬ್ಬರು ಸ್ಪರ್ಧಿಗಳು ಆಡಬೇಕು. ಕೈಯಲ್ಲಿರುವ ಪೋಲ್ನಿಂದ ಹೊಡೆದು ಬಾಟಲ್ ಒಳಗಿನ ಬಣ್ಣದ ನೀರಿನ್ನು ಚೆಲ್ಲಬೇಕು. ಯಾರ ನೀರು ಹೆಚ್ಚಿಗೆ ಚೆಲ್ಲುತ್ತಾವೋ ಅವರು ಸೋತಂತೆ. ಒಂದು ವೇಳೆ ಬಾಟಲ್ ಕೆಳಗೆ ಬಿದ್ದರೂ ಸ್ಪರ್ಧಿ ಸೋತಾಗೆ.
ಸದ್ಯ ಈ ರೀತಿಯ ಗೇಮ್ ಆಡುವಾಗ ತ್ರಿವಿಕ್ರಮ್ ಮುಖ, ಮುಖಕ್ಕೆ ಮಂಜು ಪೋಲ್ನಿಂದ ಹೊಡೆದರು. ಹೆಂಗೆ ಬಿತ್ತು, ಹೇಗೆ ಬಿತ್ತು ಎಂದು ಹೇಳಿದರೆ, ಹೀಗೆ ಹೊಡೆದರೆ ಹೆಂಗೆ?. ನಾನು ಹೊಡೆಯುತ್ತೇನೆ ಎಂದು 2 ಸೆಕೆಂಡ್ಗೆ ಮಂಜು ಕೈಯಲ್ಲಿನ ಬಾಟಲ್ ಬೀಳಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಪೋಲ್ನಿಂದ ತ್ರಿವಿಕ್ರಮ್ ಹೊಡೆದಿರುವುದು ವಿಡಿಯೋದಲ್ಲಿದೆ. ಆದರೆ ಮಂಜು ಕೈಯಿಂದ ಬಾಟಲ್ ಕೆಳಗೆ ಬಿದ್ದಿಲ್ಲ. ಆಡುವಾಗ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ ಎನ್ನಲಾಗಿದೆ. ಆದರೆ ಈ ಟಾಸ್ಕ್ನಲ್ಲಿ ಯಾರು ಗೆದ್ದಿದಾರೆ ಎನ್ನುವುದು ಕುತೂಹಲ ವಿದೆ.
ಇನ್ನು ತ್ರಿವಿಕ್ರಮ್ ಹಾಗೂ ಮಂಜು ನಡುವೆ ಮಾತಿನ ಸಮರ ನಡೆದಿದ್ದು ಟಾಸ್ಕ್ನಲ್ಲೂ ಇಬ್ಬರು ಕೋಪದಲ್ಲೇ ಆಡಿದ್ದಾರೆ. ಮನೆ ಕ್ಯಾಪ್ಟನ್ ಆಗಿರುವ ರಜತ್ ಅವರು ಏನು ಮಾಡೋಕೆ ಆಗಲ್ಲ ಗುರು, ಕಾಪಾಡಿಕೋ ಎಂದು ಮಂಜುಗೆ ಹೇಳಿದ್ದಾರೆ. ಬಿಗ್ಬಾಸ್ ಪ್ರಕಾರ ಯಾರು ಟಾಸ್ಕ್ ಚೆನ್ನಾಗಿ ಪೂರ್ಣಗೊಳಿಸಿ ಗೆಲವು ಪಡೆಯುತ್ತಾರೋ ಅವರಿಗೆ ಫಿನಾಲೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರು ಆ ಅದೃಷ್ಣಶಾಲಿಗಳು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.
ಬಿಗ್ ಬಾಸ್ ಮನೆಯ ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ವಾರ ಫ್ಯಾಮಿಲಿ ರೌಂಡ್‌ನಿಂದ ಜಾಲಿ ಮೂಡ್‌ನಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಈ ವಾರವು ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ಕೊಟ್ಟಿದ್ದಾರೆ. ಅದುವೆ ಈ ಬಿಗ್ ಬಾಸ್ ಮನೆಯಲ್ಲಿ ಯಾರು ಡೇಂಜರ್, ಯಾರು ಜೋಕರ್? ಎಂದು ಮನೆ ಮಂದಿಗೆ ಕಿಚ್ಚ ಕೇಳಿದ್ದಾರೆ. ಈ ವೇಳೆ, ಕಿಚ್ಚನ ಮುಂದೆ ತ್ರಿವಿಕ್ರಮ್ ಡೇಂಜರ್ ಎಂದು ಹೇಳಿದ್ದಾರೆ.
ಹೌದು, ಈ ಜರ್ನಿಯಲ್ಲಿ ನೀವು ಯಾರು ಅಂತ ಇನ್ನೊಬ್ಬರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಂದು ಬೋರ್ಡ್ ಮೇಲೆ ಸ್ಪರ್ಧಿಗಳು ಈ ಮನೆಯಲ್ಲಿ ಯಾರು ಡೇಂಜರ್? ಯಾರು ಜೋಕರ್? ಹಾಗೂ ಯಾರು ಕಾಂಪಿಟೆಟರ್? ಅಂತ ಬರೆಯಲಾಗಿದೆ. ಅದರಂತೆ ಈ ಮನೆಯಲ್ಲಿರೋ ಸ್ಪರ್ಧಿಗಳಿಗೆ ಏನೇನೂ ಹೋಗುತ್ತೆ ಅಂತ ಬಾಣದ ಮೂಲಕ ಚುಚ್ಚಬೇಕು. ಅದರಂತೆ ಭವ್ಯಾ ಗೌಡ ಅವರು ‘ಡೇಂಜರ್’ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ತ್ರಿವಿಕ್ರಮ್ ಡೇಂಜರ್ ಎಂದು ಭವ್ಯಾ ಹೇಳಿದ್ದಾರೆ.
ಉಳಿದಂತೆ ರಜತ್ ಹಾಗೂ ಹನುಮಂತ ಚೈತ್ರಾಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ. ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹನುಮಂತ ಹೇಳಿದ್ದಾರೆ. ಬಳಿಕ ಮಾತಾಡಿ ರಜತ್ ಅವರು ಚೈತ್ರಾ ಅವರು ಬಂದು 14 ವಾರ ಆಗಿದೆ. ಇಲ್ಲಿತನಕ ಅವರು ಇಷ್ಟು ಸಂಪಾದನೆ ಮಾಡಿದ್ದಾರೆ ಎಂದು ಈ ಚಟುವಟಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.
ರಜತ್ ಮಾತಿಗೆ ಕೂಡಲೇ ಮಾತಾಡಿದ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನಿಸುವುದೇ ಇಲ್ಲ ಅಂತ ಹೇಳಿದ್ದಾರೆ. ಬೇಕಾದ್ರೇ ಚೈತ್ರಾ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ರಜತ್ ಠಕ್ಕರ್ ಕೊಟ್ಟಿದ್ದಾರೆ.
ಕನ್ನಡ ‘ಬಿಗ್ ಬಾಸ್’ ಸೀಸನ್ 11ರ ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.
ಸುದೀಪ್ ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.
ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.