ಬಂಟ್ವಾಳ: ‘ಚಡ್ಡಿಗಳೆ ಎಚ್ಚರ ಪಿ.ಎಫ್.ಐ.ನಾವು ಮರಳಿ ಬರುತ್ತೇವೆ’ ಈ ರೀತಿಯಲ್ಲಿ ಎಚ್ಚರಿಕೆಯ ಸಂದೇಶವನ್ನು ರಸ್ತೆಯಲ್ಲಿ ಬರೆದು ಬಂಟ್ವಾಳದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಹೊರಟಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ನಯನಾಡು ಗೊಳಿಯಂಗಡಿ ಸಂಪರ್ಕ ರಸ್ತೆಯಲ್ಲಿ “ಚಡ್ಡಿಗಳೆ ಎಚ್ಚರಿಕೆ PFI ನಾವು ಮರಳಿ ಬರುತ್ತೇವೆ “ಎಂದು ಬಿಳಿ ಬಣ್ಣದ ಸ್ಪ್ರೆ ಪೈಂಟಿನಿಂದ ಬೆದರಿಕೆ ಬರಹ ಬರೆದಿದ್ದಾರೆ.
ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿರುವುದರ ಬಗ್ಗೆ ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಮಾಹಿತಿ ನೀಡಿ ತಕ್ಷಣಕ್ಕೆ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಸಮಾಜದ ಸಾಮಾಜಿಕ ಅಶಾಂತಿಗೆ ಕೋಮು ದ್ವೇಷಕ್ಕೆ ಕಾರಣವಾದ ಈ ಬರಹದ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೆ ಪತ್ತೆ ಹಚ್ಚಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಯುವಮೋರ್ಚಾ ಬಂಟ್ವಾಳ ಆಗ್ರಹಿಸಿ ಪುಂಜಾಲಕಟ್ಟೆ ಠಾಣಾಧಿಕಾರಿ ಇವರಿಗೆ ದೂರು ದಾಖಲಿಸಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕಾಗಿ ಮನವಿ ಮಾಡಲಾಯಿತು.
ಪ್ರಮುಖರಾದ ಬಂಟ್ವಾಳ ಯುವಮೋರ್ಚಾದ ದಿನೇಶ್ ದಂಬೇದಾರ್, ಯತಿನ್ ಶೆಟ್ಟಿ ಕುಮಂಗಿಲ,ರಾಜೇಶ್ ಶೆಟ್ಟಿ ನಯನಾಡು ಹಾಗು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ಹೆಗ್ಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಹಾಗೂ ಸಾರ್ವಜನಿಕರಾದ ಪ್ರಕಾಶ್ ರಾವ್,ದಯಾನಂದ, ವಿಘ್ನೇಶ್,ಹರಿಂದ್ರ ಪೈ, ಜಯಪ್ರಸದ್, ನಿರಂಜನ್,ಆನಂದ,ಗುರುಪ್ರಸಾದ್ ಶೆಟ್ಟಿ,ಹರೀಶ್ ಶೆಟ್ಟಿ,ಗುರುಪ್ರಸಾದ್ ಶೆಟ್ಟಿ ಕೆರೆಕೊಡಿ,ವಿಜಯ್,ಅವಿನ್ ಕುಮಾರ್,ಚಂದ್ರಶೇಖರ್ ಮತ್ತಿತರು ಉಪಸ್ಥಿತರಿದ್ದರು.
ಇಡೀ ದೇಶವೇ ಆಯುಧ ಪೂಜೆಯ ಸಂಭ್ರಮದಿಂದ ಇದ್ದರೆ, ಯಾರೋ ಕಿಡಿಗೇಡಿಗಳು ರಸ್ತೆಯ ಮೇಲೆ ಬಳಪದಲ್ಲಿ ಬರೆದಿರುವ ಬರಹ ವ್ಯಾಪಕ ಚರ್ಚೆಗೆ ಗ್ರಾಮವಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ಎ.ಎನ್.ಐ ದಾಳಿಯ ಹಿನ್ನೆಲೆಯಲ್ಲಿ ಪಿ.ಎಫ್.ಐ.ಸಂಘಟನೆ ಚಡ್ಡಿಗಳೆ ಎಚ್ಚರ ಎಂಬ ಸಂದೇಶವನ್ನು ಗ್ರಾಮಾಂತರ ಭಾಗದ ರಸ್ತೆಯಲ್ಲಿ ಬರೆದ ಬರಹ ಇದೀಗ ಪೋಲಿಸರನ್ನು ನಿದ್ದೆಗೆಡಿಸುವಂತೆ ಮಾಡಿದೆ.