Thursday, October 29, 2020

ಕೊರೊನಾದಿಂದಾಗಿ ಮೃತಪಟ್ಟ ಕೇಂದ್ರ ಸಚಿವರೊಬ್ಬರ ಅಂತ್ಯಕ್ರಿಯೆ ಹೀಗೂ ನಡೆಯುತ್ತಾ….!!

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..!

ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ : ಫರಂಗಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲವಾರು ದಾಳಿ..! ಬಂಟ್ವಾಳ :ಬಂಟ್ವಾಳದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಮುಂದುವೆರೆದಿದೆ. ಫೋಟೋ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ಫೋಟೊ ಗ್ರಾಫರ್ ಮೇಲೆ ತಲವಾರು...

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..!

ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ : ಖ್ಯಾತ ಗಾಯಕಿ ಅನನ್ಯ ಭಟ್ ತಂದೆಯ ಬಂಧನ..! ಮೈಸೂರು: ಕೊಲೆ ಪ್ರಕರಣದ ಆರೋಪದಲ್ಲಿ ಸೋಜಿಗದ ಸೋಜಿಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ ನನ್ನು...

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..!

ಯುರೋಪ್‌ ನಲ್ಲಿ ಕೊರೋನದ 2 ಅಲೆ ಶುರು :ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ..! ಸ್ಪೇನ್ :   ಭಾರತದ ಹಲವೆಡೆ ಕೋವಿಡ್ 19 ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ಯುರೋಪ್‌ ನ ಅನೇಕ...

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..!

 ಕ್ರೀಡಾ ಕ್ಷೇತ್ರದ ಅದ್ಭುತ ಸಾಧಕಿ ತೃಷಾಳಿಗೆ ಉಡುಪಿ ಪೊಲೀಸರ ಗೌರವ..! ಉಡುಪಿ :  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪುವಿನ ಅಮೃತೇಶ್ ಮಗಳಾದ ತೃಷಾ ಅವರನ್ನು ನಿನ್ನೆ ಕಾಪು ವೃತ್ತ ಕಛೇರಿಯಲ್ಲಿ ಸನ್ಮಾನಿಸಲಾಗಿದೆ. ತೃಷಾ ಉಡುಪಿಯ...

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ

ತೊಕ್ಕೊಟ್ಟು ಅಫಘಾತದಲ್ಲಿ ನವದಂಪತಿ ಸಾವನ್ನಪ್ಪಿದ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಭೇಟಿ ; ಬದಲಿ ಸಂಚಾರಿ ವ್ಯವಸ್ಥೆಗೆ ಸೂಚನೆ.. ಮಂಗಳೂರು : ಸರಣಿ ಅಪಘಾತ ಮತ್ತು ಜೀವಹಾನಿಗೆ ಕುಖ್ಯಾತಿ ಪಡೆದ ಮಂಗಳೂರು ಹೊರವಲಯದ...

ಬೆಂಗಳೂರು : ಕೊರೊನಾ ವೈರಸ್ ಸೋಂಕು ಬಂದವರನ್ನು ಅನೇಕರು ತುಂಬ ಹೀನಾಯವಾಗಿ ನೋಡುತ್ತಾರೆ. ಬಹುತೇಕ ಸಾಮಾಜಿಕ ಬಹಿಷ್ಕಾರ ಇರುತ್ತೆ ಅನ್ನೊದನ್ನು ಕೇಳಿದ್ದೇವೆ.

ಅದರಲ್ಲೂ ಕೊರೊನಾದಿಂದ ಸತ್ತವರ ಮುಖ ನೋಡಲು, ಹತ್ತಿರ ಹೋಗಲು, ಅವರ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಮಾಡಲು ಸಹ ಅವಕಾಶವಿರೋದಿಲ್ಲ. ಇಂತಹುದೇ ಪರಿಸ್ಥಿತಿ ಕೊರೊನಾ ವೈರಸ್‌ನಿಂದಾಗಿ ಇಹಲೋಕ ತ್ಯಜಿಸಿದ ಸಂಸದ ಸುರೇಶ್ ಅಂಗಡಿ ಅವರಿಗೂ ಬಂದಿದೆ.


ಕೊರೊನಾ ಸೊಂಕು ಹರಡುವ ಪ್ರಾರಂಭಿಕ ತಿಂಗಳಲ್ಲಿ ಕೊರೊನಾ ದಿಂದ ಮೃತಪಟ್ಟವರನ್ನು ಜೆಸಿಬಿಯಲ್ಲಿ ಮಣ್ಣು ಮಾಡಿದ್ದರು. ಕೊರೊನಾದಿಂದ ಸತ್ತವರನ್ನು ಕೆಲ ತಿಂಗಳುಗಳ ಹಿಂದೆ ಒಂದೇ ಗುಂಡಿಯಲ್ಲಿ ಕಸದಂತೆ ಹಾಕಿ ಮುಚ್ಚಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಸ್ವತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈ ಘಟನೆಯನ್ನು ಖಂಡಿಸಿದ್ದರು.

ಆದರೆ ಈಗ ಅದೇ ಪರಿಸ್ಥಿತಿ ಕೇಂದ್ರ ಸಚಿವರೊಬ್ಬರಿಗೆ ಬಂದಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದರ ಪಾರ್ಥಿವ ಶರೀರವನ್ನು ಕಸದಂತೆ ಗುಂಡಿಗೆ ಎಸೆದು ಮಣ್ಣು ಮುಚ್ಚಲಾಗಿದೆ ಸಚಿವರಿಗೆ ಈ ರೀತಿಯಾದರೇ ಜನಸಾಮಾನ್ಯರ ಕಥೆಯೇನು? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


ಈ ಕುರಿತಂತೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಕೊರೊನಾ ವೈರಸ್ ಆರ್ಭಟ, ಅದರಿಂದ ಸಾಮಾನ್ಯ ಜನರ ನೋವು, ಧನನಷ್ಟ ನೆಮ್ಮದಿಹಾಳು, ಮಾನಸಿಕ ಒತ್ತಡ ಇವನ್ನು ತಕ್ಕಮಟ್ಟಿಗೆ ತಡೆಯಬಹುದು.

ಆದರೆ ಸತ್ತಾಗ ಬಂಧುಮಿತ್ರನು ನೋಡಲಾಗದೆ ಮುಖಮುಚ್ಚಿದ ಅನಾಮಿಕರು ಸತ್ತವರನ್ನು ಕಸದಂತೆ ಗುಂಡಿಯಲ್ಲಿ ಹೀಗೆ ಬಿಸಾಕುವ ಸ್ಥಿತಿ ಬಂದಮೇಲೆ ಯಾವ ಪುರುಷಾರ್ಥಕ್ಕೆ ಹಣ, ಅಧಿಕಾರ ನಾನು ನನ್ನದು ಮಮಕಾರ? ನಗುವಿನ ಬಾಳ್ವೆಯೇ ನಿಜ ಶ್ರೀಮಂತಿಕೆ’ ಎಂದು ಟ್ವೀಟ್ ಮಾಡಿದ್ದಾರೆ.


ಮಂಗಳೂರಿನಲ್ಲೂ ಮೊದಲು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಘಟನೆಗಳು ನಡೆದಿತ್ತು. ನಂತರ ಪಿಎಫ್ಐ, ಎಸ್ ಡಿಪಿಐ ಸೇರಿದಂತೆ ಇತರ ಸಂಘಟನೆಗಳು ಸತ್ತವರ ಧರ್ಮ ನೋಡದೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿ ದೇಶಕ್ಕೆ ಮಾದರಿಯಾಗಿದ್ದರು.

ಈಗ ಕರ್ನಾಟಕದಲ್ಲಿ ಬಹುತೇಕ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ. ಆದರೆ ದೆಹಲಿಯ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ ಎನ್ನುವುದು ಈ ವಿಡಿಯೋದಲ್ಲಿ ತಿಳಿಯುತ್ತದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.