Saturday, November 26, 2022

ನಿತಿನ್ ಗಡ್ಕರಿಗೆ ‘ಲೋ ಶುಗರ್’-ವೇದಿಕೆಯ ಮೇಲೆ ಇದ್ದಕಿದ್ದಂತೆ ಅಸ್ವಸ್ಥರಾದ ಕೇಂದ್ರ ಸಚಿವ..!

ಪಶ್ಚಿಮಬಂಗಾಳ: ರಸ್ತೆಯ ಶಂಕು ಸ್ಥಾಪನೆ ಮಾಡಲು ಪಶ್ಚಿಮಬಂಗಾಳದ ಸಿಲಿಗುರಿಗೆ ಬಂದಿದ್ದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಅವರು ವೇದಿಕೆಯ ಮೇಲೆ ಕುಳಿತಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.


ಪಶ್ಚಿಮ ಬಂಗಾಳದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್‌ವರೆಗಿನ ರಸ್ತೆಯ ಶಂಕುಸ್ಥಾಪನೆ ಮಾಡಲು ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು.

ಆದರೆ ಒಂದೇ ಕ್ಷಣ ಇವರಿಗೆ ಸಕ್ಕರೆ ಪ್ರಮಾಣ ಇಳಿಕೆಯಾಗಿದೆ. ಅನಾರೊಗ್ಯಕ್ಕೆ ತುತ್ತಾದ ತಕ್ಷಣ ಇವರನ್ನು ವೇದಿಕೆಯು ಹಿಂಭಾಗದಲ್ಲಿ ಗ್ರೀನ್ ರೂಂಗೆ ಕರೆತಂದರೂ ಆರೋಗ್ಯ ಸ್ಥಿತಿ ಹತೋಟಿಗೆ ತರಲಾಗಲಿಲ್ಲ.

ನಂತರ ವೈದ್ಯರನ್ನು ಕರೆಸಿ ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಆ ಕಾರ್ಯಕ್ರಮವೇ ರದ್ದಾಗಿರಬಹುದು ಎಂದು ತಿಳಿದುಬಂದಿದೆ. ಇವರ ಚಿಕಿತ್ಸೆಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...