Saturday, August 20, 2022

ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಆತ್ಮೀಯ ಸ್ವಾಗತ ..!

ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಇಂದು ಮಧ್ಯರಾತ್ರಿ ಸುಮಾರಿಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು.

ನಗರದ ಹೆಚ್​​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ರಾಜ್ಯದ ಸಚಿವರುಗಳಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಡಾ.ಅಶ್ವತ್ ನಾರಾಯಣ್, ವಿ ಸೋಮಣ್ಣ, ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ ಸೇರಿದಂತೆ ಅನೇಕ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.


ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಅಮಿತ್ ಶಾ ಬೆಳಗ್ಗೆ 11 ಗಂಟೆಗೆ ಕೇಂದ್ರ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ‘ಸಂಕಲ್ಪ ಸಿದ್ಧಿ’ 3ನೇ ಆವೃತ್ತಿಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಅದಾದ ಬಳಿಕ ಮಧ್ಯಾಹ್ನ 2 ಗಂಟೆಗೆ ಯಲಹಂಕದ ಮದರ್ ಡೈರಿಗೆ ಭೇಟಿ ನೀಡಲಿದ್ದು, ಬಳಿಕ ಡೈರಿ ಸರ್ಕಲ್ ಬಳಿ ಇರುವ ಕೆಎಂಎಫ್ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.


ಮಧ್ಯಾಹ್ನ 1 ಗಂಟೆಯಿಂದ 2 ಗಂಟೆವರೆಗೆ ಅಮಿತ್ ಶಾ ಸಮಯ ಮೀಸಲಿರಿಸಿದ್ದು, ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭೇಟಿ ನೀಡುವ ಸಾಧ್ಯತೆ ಇದೆ.

ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ‌ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಲಂಚ್ ಮೀಟ್​ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ನಂತರ ಕಾರ್ಯಕರ್ತರ ಆಕ್ರೋಶ, ಸಂಪುಟ ವಿಸ್ತರಣೆ ಕುರಿತ ವಿಚಾರಗಳ ಕುರಿತು ಈ ವೇಳೆ ಮಾತುಕತೆ ನಡೆಯಬಹುದು ಎನ್ನುವ ಮಾಹಿತಿ ಲಭಿಸಿದೆ.

ಕೇಂದ್ರ ಗೃಹ ಸಚಿವರು ಇಂದು ಮೂರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಧ್ಯಾಹ್ನದ ನಂತರ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...

ಸುರತ್ಕಲ್‌ನಲ್ಲಿ ಕತ್ತಿ ಬೀಸಿ ಹುಚ್ಚಾಟ: ಓರ್ವನ ಬಂಧನ

ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಾಂಡ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕಾನದಲ್ಲಿ ನಡೆದಿದೆ.ಅತಲ್ ಕುಲ್ಲು (30) ಬಂಧಿತ...

ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿಯ ಬಂಧನ

ಕುಶಾಲನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಘಟನೆ ಕುರಿತು ವಶಕ್ಕೆ ತೆಗೆದುಕೊಳ್ಳಲಾದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು...