ಸಿಮೆಂಟ್ ಕಿಕ್ ಬ್ಯಾಕ್ ಆರೋಪ : ಇದು ಕಾಂಗ್ರೆಸ್ ಸುಳ್ಳಿನ ಕಂತೆ- ತನಿಖೆಗೆ ಸಿದ್ದ ಶಾಸಕ ಸುನಿಲ್ ಕುಮಾರ್ ಸ್ಪಷ್ಟನೆ
ಉಡುಪಿ :ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಸರ್ಕಾರಿ ಕಾಮಗಾರಿಯ ಗುತ್ತಿಗೆ ನೀಡಿರುವ ಕಾಂಟ್ರಾಕ್ಟರ್ ಗಳಿಂದ ನೂರಾರು ಗೋಣಿ ಸಿಮೆಂಟ್ ಪಡೆದು ತನ್ನ ಖಾಸಗಿ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಗೆ ಶಾಸಕರು ಪ್ರತಿಕ್ರೀಯಿಸಿದ್ದಾರೆ.
ಉಡುಪಿಯ ವೆಬ್ ಚಾನಲ್ ಒಂದು ತನ್ನ ಮೇಲೆ ನಿರಾಧಾರವಾದ ಆರೋಪ ಮಾಡಿದ್ದು, ಅದು ಯಾವುದೇ ದಾಖಲೆ ಇಲ್ಲದ ಸುಳ್ಳು ಕಂತೆ ಎಂದಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ನಿರ್ಮಾಣ ಮತ್ತು ವಿನ್ಯಾಸವನ್ನು ವಾಸ್ತು ಶಿಲ್ಪಿ ಪ್ರಮಲ್ ಕುಮಾರ್ ರವರಿಗೆ ನೀಡಿದ್ದು, ಕಟ್ಟಡ ಆರಂಭದಿಂದ ಪೂರ್ಣವಾಗುವವರೆಗೆ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ.
ಈ ಕಟ್ಟಡವನ್ನು ಸೃಷ್ಟಿ ವೆಂಚರ್ಸ್ ಇಂಡಸ್ಟ್ರಿಯಲ್ ಏರಿಯಾ ನಂದಿಕೂರು ಅವರಿಗೆ ನೀಡಿ ನಿರ್ಮಾಣದ ಒಪ್ಪಂದವನ್ನು 2019 ರಲ್ಲಿ ಮಾಡಿಕೊಳ್ಳಲಾಗಿದೆ. ಸಿಮೆಂಟ್ ಉತ್ಪಾದನೆಯಲ್ಲಿ ಸರಕಾರದ ಕೆಲಸಕ್ಕೆ ಬೇರೆ ಸಿಮೆಂಟ್ ಮತ್ತು ಖಾಸಗಿ ಕೆಲಸಕ್ಕೆ ಬೇರೆ ಸಿಮೆಂಟ್ ಇದೆ ಎಂಬುವುದು ನನ್ನ ಅನುಭವಕ್ಕೆ ಬಂದಿಲ್ಲ.
ಒಪ್ಪಂದದಂತೆ ಕಟ್ಟಡದ ಪೂರ್ತಿ ನಿರ್ಮಾಣದ ಗುತ್ತಿಗೆಯನ್ನು ಸೃಷ್ಟಿ ವೆಂಚರ್ ರವರೇ ಮಾಡುತ್ತಿದ್ದು, ಖರೀದಿ, ಸಾಗಾಣಿಕೆ , ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ಜವಬ್ದಾರಿಯೂ ಅವರದ್ದೇ ಆಗಿದ್ದು, ಇದರಲ್ಲಿ ನನ್ನ ಜವಬ್ದಾರಿ ಇರುವುದಿಲ್ಲ ಅಂತ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ನನ್ನ ವಿರುದ್ಧ ವಿರೋಧಿಗಳು ಹಾಗೂ ಕಾಂಗ್ರೆಸಿಗರು ಆರೋಪ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇಲ್ಲಿಯವರೆಗೂ ಮಾಡಿರುವ ಯಾವ ಆರೋಪಗಳಿಗೂ ದಾಖಲೆಗಳಿಲ್ಲ.
ವೆಬ್ ಚಾನೆಲ್ ಮುಖೇನ ವಿರೋಧಿಗಳು ಈಗ ಮಾಡಿರುವ ನಿರಾಧಾರ ಆರೋಪಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಷ್ಟೆ ಎಂದಿದ್ದಾರೆ. ಇನ್ನು ಈ ರೀತಿ ಯಾವುದೇ ಸ್ಪಷ್ಟತೆ , ದಾಖಲೆ ಇಲ್ಲದ ವಿಷಯವನ್ನಿಟ್ಟುಕೊಂಡು ಪತ್ರಕರ್ತರಂತೆ ಮುಖವಾಡ ಹಾಕಿರುವ ಕೆಲವರು ಇದನ್ನು ಮುಂದಿಟ್ಟುಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಇಂತಹ ಬ್ಲ್ಯಾಕ್ ಮೇಲ್ ಗಳಿಗೆ ನಾನಾಗಲಿ ನನ್ನ ಕುಟುಂಬವಾಗಲಿ ಭಯ ಪಡೋದಿಲ್ಲ. ಈ ರೀತಿಯಾಗಿ ಸಾರ್ವಜನಿಕವಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇನೆ. ಮತ್ತು ಈ ಬಗ್ಗೆ ತನಿಖೆಗೆ ಒತ್ತಾಯಿಸಿದರೂ ಎದುರಿಸಲು ನಾನು ಸಿದ್ದ ನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಕಳ ನಗರಸಭೆಯ ಸದಸ್ಯ ಕಾಂಗ್ರೆಸ್ ನಾಯಕ ಶುಭದ ರಾವ್ ಶಾಸಕ ಸುನೀಲ್ ಕುಮಾರ್ ಆರೋಪವನ್ನು ಮಾಡಿದ್ದರು. ಕಾರ್ಕಳ ತಾಲೂಕು ಪಂಚಾಯತ್ ರಸ್ತೆಯಲ್ಲಿ ಸುನೀಲ್ ಕುಮಾರ್ ಅವರ ಖಾಸಗಿ ಜಮೀನಿನಲ್ಲಿ ಬಹು ಮಹಡಿಯ ಕಚೇರಿ ನಿರ್ಮಾಣ ಆಗುತ್ತಿದೆ.
ಕಟ್ಟಡ ನಿರ್ಮಾಣಕ್ಕೆ ಅಲ್ಟ್ರಾ ಟೆಕ್ ಕಂಪನಿಯ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ಸಿಮೆಂಟ್ ಗಳನ್ನು ಬಳಸಲಾಗಿದೆ. ಗುತ್ತಿಗೆ ನೀಡಿದ ಕಾಂಟ್ರಾಕ್ಟ್ ಗಳಿಂದ ಶಾಸಕ ಸುನೀಲ್ ಕುಮಾರ್ ಸಿಮೆಂಟ್ ಚೀಲಗಳನ್ನು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಕಡಬ : ಶಾಲೆಗೆ ಬೈಕ್ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕ ಮೃತ ಪಟ್ಟ ಘಟನೆ ನಿನ್ನೆ ಕಡಬದಲ್ಲಿ ನಡೆದಿತ್ತು. ಕಡಬದ ಕಲ್ಲುಗುಡ್ಡೆ ನಿವಾಸಿ ಅಶೀಶ್ ಎಂಬ 16 ವರ್ಷದ ವಿದ್ಯಾರ್ಥಿ ಅಪಘಾತದಲ್ಲಿ ಮೃತ ಪಟ್ಟಿದ್ದ.
ಈ ಘಟನೆಯ ಬಳಿಕ ಕಡಬ ವ್ಯಾಪ್ತಿಯಲ್ಲಿ ಅನೇಕ ಅಪ್ರಾಪ್ತ ಯುವಕರು ಬೈಕ್ ಚಲಾಯಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಕಾರ್ಯಪ್ರವೃತ್ತರಾದ ಕಡಬ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಅಪ್ರಾಪ್ತರ ಕೈಲಿ ಬೈಕ್ ನೀಡಿದ ಪೋಷಕರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಶಾಲಾ ಕಾಲೇಜುಗಳಿಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿದ್ಯಾರ್ಥಿಗಳು ತಾರದಂತೆ ಶಾಲಾ ಮುಖ್ಯೋಪಾಧ್ಯಯರು ಮತ್ತು ಪ್ರಾಂಶುಪಾಲರು ಸೂಚನೆ ನೀಡಬೇಕು ಹಾಗೂ ಪೋಷಕರಿಗೆ ಈ ಬಗ್ಗೆ ಸೂಚನೆ ನೀಡಬೇಕು.
ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಶಾಲೆಯ ಆಡಳಿತ ಹಾಗೂ ಮುಖ್ಯಸ್ಥರನ್ನೇ ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಡಬ , ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.
ಮಂಗಳೂರು/ಮುಂಬೈ : ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕೂಡಲೇ ಕಾಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಕ್ ಚಾಲಕನ ವಿರುದ್ದ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಜೈಸ್ವಾಲ್ ಅವರು ಪ್ರಮುಖ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು.
‘ಹೊಸ ಕನಸುಗಳು ಮತ್ತು ಅಂತ್ಯವಿಲ್ಲದ ಸಾಧ್ಯತೆಗಳೊಂದಿಗೆ 2025ಕ್ಕೆ ಕಾಲಿಡುತ್ತಿದ್ದೇನೆ’ ಎಂದು ಜೈಸ್ವಾಲ್ ಅವರು ಹೊಸ ವರ್ಷದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಹಂಚಿಕೊಂಡಿದ್ದ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.