ಮಂಗಳೂರು/ಸಿಯೋಲ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಿಂದ ದಕ್ಷಿಣ ಕೊರಿಯಾದ ಮುವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ ಬಂದ ವಿಮಾನವು, ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿತ್ತು. ರನ್ ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿ, ತಕ್ಷಣವೇ ಸ್ಫೋ*ಟಗೊಂಡಿತ್ತು.
ಈ ವಿಮಾನ ದುರಂತದಲ್ಲಿ 6 ಮಂದಿ ಸಿಬ್ಬಂದಿ, 175 ಪ್ರಯಾಣಿಕರು ಇದ್ದರು. ಈ ಪೈಕಿ ಇಬ್ಬರಷ್ಟೇ ಬದುಕುಳಿದಿದ್ದಾರೆ. ಈ ದುರಂತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತ್ಯಂತ ಭೀ*ಕರ ವಿಮಾನ ದುರಂತಗಳಲ್ಲಿ ಒಂದಾಗಿದೆ.
ಸ್ಪಷ್ಟನೆ ಕೊಟ್ಟ ಸಾರಿಗೆ ಸಚಿವಾಲಯ
ಮುವಾನ್ ನಲ್ಲಿ ಅಪಘಾತಕ್ಕೀಡಾದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿತ್ತು. ದುರಂತ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮೊದಲು ‘ಅಪಾಯದ’ ಘೋಷಣೆ ಮಾಡಲಾಗಿತ್ತು ಎಂದು ಜೆಜು ಏರ್ ವಿಮಾನಯಾನ ಸಂಸ್ಥೆಯ ಜೆಟ್ ಪೈಲಟ್ ಹೇಳಿರುವುದಾಗಿ ಸಾರಿಗೆ ಸಚಿವಾಲಯ ಪ್ರಕಟಿಸಿದೆ.
ವಿಮಾನ ದುರಂತದಿಂದ ಪಾರಾದ ಇಬ್ಬರು
181 ಪ್ರಯಾಣಿಕರಲ್ಲಿ ಬದುಕುಳಿದಿದ್ದು ಕೇವಲ ಇಬ್ಬರು ಮಾತ್ರ. ಅವರೂ ಕೂಡ ಗಂ*ಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖುಷಿ ವಿಚಾರ ಏನೆಂದರೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೂ ಕೂಡ ಪ್ರಜ್ಞೆ ಬಂದಿದೆ. ಆದರೆ ದುರ್ಘಟನೆ ಬಗ್ಗೆ ನೆನಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಘಟನೆ ಬಗ್ಗೆ ಕೇಳಿ ಅಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ನಡೆದಿರುವ ಘಟನೆ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ ಎಂದು ವರದಿಯಾಗಿದೆ.
ವಿಮಾನ ಸ್ಕಿಡ್ ಆಗಿ ಅಪಘಾತಕ್ಕೆ ಒಳಗಾಗುತ್ತಿದ್ದಂತೆಯೇ ತುರ್ತು ರಕ್ಷಣಾ ಪಡೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಬದುಕುಳಿದವರಲ್ಲಿ ಇಬ್ಬರೂ ಕೂಡ ವಿಮಾನ ಸಿಬ್ಬಂದಿ ಆಗಿದ್ದಾರೆ. ಅವರಲ್ಲಿ ಓರ್ವನ ಹೆಸರು ಲೀ (Lee) ಎಂದಾಗಿದೆ. 32 ವರ್ಷದ ಲೀ ವಿಮಾನ ದುರಂತದಲ್ಲಿ ಬದುಕುಳಿದಿದ್ದಾರೆ. ಇನ್ನು ಇವರಿಗೆ ಪ್ರಜ್ಞೆ ಬರ್ತಿದ್ದಂತೆಯೇ ಏನಾಯ್ತು? ನಾನ್ಯಾಕೆ ಇಲ್ಲಿದ್ದೇನೆ ಎಂದು ವೈದ್ಯರ ಬಳಿ ಕೇಳಿದ್ದಾರೆ ಅಂತಾ ವರದಿಯಾಗಿದೆ.
ಅದೇ ರೀತಿ 25 ವರ್ಷದ ಕ್ವಾನ್ ಅನ್ನೋರು ಕೂಡ ಬದುಕುಳಿದಿದ್ದಾರೆ. ಇವರ ನೆತ್ತಿ ಸೀಳಿದೆ, ಪಾದಕ್ಕೆ ಗಾಯವಾಗಿದೆ. ಕಿಬ್ಬೊಟ್ಟೆಗೂ ಬಲವಾದ ಪೆಟ್ಟು ಬಿದ್ದಿದೆ. ಇವರು ತಲೆ ಹಾಗೂ ಕಾಲು ಮತ್ತು ಹೊಟ್ಟೆ ನೋವು ಎಂದು ಕಿರುಚಾಡುತ್ತಿದ್ದಾರೆ. ಲೀ ಅವರಂತೆ ಇವರಿಗೂ ಕೂಡ ಘಟನೆ ಬಗ್ಗೆ ಜ್ಞಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಮಂಗಳೂರು/ಕೀನ್ಯಾ : 2025ರಲ್ಲಿ ಭೂಮಿಯ ಮೇಲೆ ಭಾಹ್ಯಾಶದಿಂದ ಉಲ್ಕೆಗಳು ಅಥವಾ ಏಲಿಯನ್ ದಾಳಿ ಆಗಬಹುದು ಅಂತ ಕಾಲಜ್ಞಾನಿ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾನೆ. ಇದಕ್ಕೆ ಪೂರಕ ಎಂಬಂತೆ ಒಂದು ಘಟನೆ ನಡೆದಿದ್ದು, ಆಕಾಶದಿಂದ 500 ಕೆಜಿ ತೂಕದ ಉಂಗುರವೊಂದು ಭೂಮಿಗೆ ಅಪ್ಪಳಿಸಿದೆ. ಹಾಗಂತ ಇದು ಏಲಿಯನ್ ಅಥವಾ ಕ್ಷುದ್ರಗ್ರಹಗಳಿಂದ ಸಿಡಿದ ಉಂಗುರ ಅಲ್ಲ ಅಂತ ವಿಜ್ಞಾನಿಗಳು ಸ್ಪಷ್ಟ ಪಡಿಸಿದ್ದಾರೆ.
ಈ ಬೃಹದಾಕಾರದ ಉಂಗುರ ಕೀನ್ಯಾ ದೇಶದ ಉತ್ತರದಲ್ಲಿರುವ ಮುಕುನಿ ಕೌಂಟಿಯ ಮುಕುಕು ಗ್ರಾಮದ ಮೇಲೆ ಬಂದು ಬಿದ್ದಿದೆ. ಇದು ಅಂದಾಜು 500 ಕೆ.ಜಿ ಭಾರ ಇರಬಹುದು ಅಂತ ಊಹಿಸಲಾಗಿದ್ದು, ಸದ್ಯಕ್ಕೆ ಈ ಉಂಗುರ ಬಿದ್ದ ಜಾಗವನ್ನು ಕೀನ್ಯಾ ಬಾಹ್ಯಾಕಾಶ ಸಂಸ್ಥೆ(KSA) ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದೆ. ಸುಮಾರು ಎಂಟು ಅಡಿ ವ್ಯಾಸದ ಬೃಹತ್ ಲೋಹದ ಉಂಗುರ ಇದಾಗಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಭೂಮಿಯಿಂದ ಅಂತರಿಕ್ಷಕ್ಕೆ ಉಡಾವಣೆಯಾದ ಉಡಾವಣಾ ವಾಹನದ ಭಾಗ ಎಂದು ಅಂದಾಜಿಸಲಾಗಿದೆ. ಆಕಾಶಕ್ಕೆ ನೆಗೆಯುವ ಉಡಾವಣಾ ವಾಹನಗಳು ಹಂತ ಹಂತವಾಗಿ ಕಳಚುವ ಸಮಯದಲ್ಲಿ ಬೇರ್ಪಟ್ಟ ಭಾಗ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಕೀನ್ಯಾದಲ್ಲಿ ಈ ಘಟನೆ ಮೊದಲ ಬಾರಿಗೆ ನಡೆದಿದೆಯಾದ್ರೂ ಕಳೆದ ಕೆಲವು ವರ್ಷಗಳಲ್ಲಿ ಇಂತಹ ಘಟನೆಗಳು ಭೂಮಿಯ ಅಲ್ಲಲ್ಲಿ ನಡಿತಾ ಇದೆ. ಬಾಹ್ಯಾಕಾಶದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ರಾಕೇಟ್ ಲಾಂಚರ್ಗಳ ಅವಶೇಷಗಳು ಭೂಮಿಗೆ ಅ*ಪಾಯ ತಂದೊಡ್ಡುತ್ತಿದೆ. ಕಳೆದ ವರ್ಷ ಇಂತಹದೇ ಒಂದು ಘಟನೆ ಫ್ಲೋರಿಡಾದಲ್ಲಿ ನಡೆದಿದ್ದು, ಆಕಾಶದಿಂದ ಬಿದ್ದ ಲೋಹದ ತುಂಡು ಮನೆಯೊಂದಕ್ಕೆ ಹಾನಿ ಮಾಡಿತ್ತು. ಇದಕ್ಕೆ ಮನೆಯವರು ನಾಸಾದ ವಿರುದ್ಧ ಕೇಸು ದಾಖಲಿಸಿದ್ದರು. ಇದಲ್ಲದೆ, 2024 ರ ಫೆಬ್ರವರಿಯಲ್ಲಿ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಇಂತಹ ಒಂದು ಬೃಹತ್ ವಸ್ತು ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ಬಿದ್ದಿರುವುದಾಗಿ ಹೇಳಿತ್ತು.
ಬಾಹ್ಯಾಕಾಶದಲ್ಲಿ ಲೋ ಅರ್ಥ್ ಆರ್ಬಿಟ್ ( LEO ) ವಿಶ್ವದ ಅತೀ ದೊಡ್ಡ ಕಸದ ಡಂಪ್ ಎಂದು ಪರಿಗಣಿಸಲಾಗಿದೆ. ನಾಸಾ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಸುಮಾರು ಆರು ಸಾವಿರ ಟನ್ ಇಂತಹ ತ್ಯಾಜ್ಯಗಳು ಸುತ್ತುತ್ತಿವೆ. ಇದು ಸಾಮಾನ್ಯವಾಗಿ ಉಂಟಾಗುವ ಘರ್ಷಣೆಯಿಂದ ಭೂಮಿಗೆ ಅಪ್ಪಳಿಸುತ್ತಿವೆ ಎಂದು ಹೇಳಿದೆ.
ಮಂಗಳೂರು/ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಮಾದರಿಯ ಹೂಮನ್ ಮೆಟಾಪ್ ನ್ಯುಮೋ (HMPV) ಸೋಂಕು ಹರಡಿ ಭಾರೀ ಆತಂಕ ಸೃಷ್ಟಿಸಿದೆ.
ಈ ಹಿಂದೆ ಚೀನಾದಲ್ಲಿ ಜನ್ಮ ತಾಳಿದ್ದ ಕೊರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಆವರಿಸಿ, ಲಾಕ್ ಡೌನ್ ಪರಿಸ್ಥಿತಿಗೆ ದೂಡಿತ್ತು. ವೈರಲ್ ಸೋಂಕಿಗೆ ಲೆಕ್ಕವಿಲ್ಲದಷ್ಟು ಜನ ಜೀವವನ್ನು ಕಳೆದುಕೊಂಡರು. ಅಂದು ಜನರನ್ನು ಕಾಡಿದ್ದ ಕೋವಿಡ್ ಈಗ ಐದು ವರ್ಷಗಳ ನಂತರ ಮತ್ತೊಂದು ರೂಪದಲ್ಲಿ ಚೀನಾದಲ್ಲಿ ಪತ್ತೆಯಾಗಿರುವುದು ಸದ್ಯ ಜಗತ್ತನ್ನು ಭಾರೀ ಆತಂಕಕ್ಕೆ ದೂಡಿದೆ.
ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ
ಕೋವಿಡ್ ನ ರೀತಿಯಲ್ಲಿ ಪತ್ತೆಯಾಗಿರುವ ಈ ವೈರಸ್ ನ ಹೆಸರು ಹ್ಯೂಮನ್ ಮೆಟಾಪ್ ನ್ಯುಮೋ ವೈರಸ್ (HMPV) ಎಂದು ಹೇಳಲಾಗಿದೆ. ಈ ಖಾಯಿಲೆ ಕೋವಿಡ್ ನಷ್ಟೇ ಮಾರಕ ಎನ್ನಲಾಗಿದ್ದು, ಈಗಾಗಲೇ ಹಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಚೀನಾದ ಆಸ್ಪತ್ರೆಗಳಲ್ಲಿ ಹಾಸಿಗೆಯು ಸಿಗದಷ್ಟು ರೋಗಿಗಳು ಆವರಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಕುರಿತು ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಯಾರೂ ಸಹ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಡಾ. ಅತುಲ್ ಗೋಯೆಲ್, ‘ಎಚ್ಚರಿಕೆಯ ಅಗತ್ಯವಿಲ್ಲ, ಅಲಾರಂ ಬೇಕಿಲ್ಲ. ಚೀನಾದಲ್ಲಿ HMPV ನಿಗೂಢ ವೈರಸ್ ಶೀತವನ್ನು ಉಂಟುಮಾಡುವ ಇತರೆ ಉಸಿರಾಟದ ವೈರಸ್ ನಂತೆ. ಇದು ಶೀತ-ಕೆಮ್ಮು ರೋಗ ಲಕ್ಷಣಗಳನ್ನು ತೋರಿಸುತ್ತದೆ. ಇದಕ್ಕೆ ತೀರ ಭಯ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ನಾವು ಇಲ್ಲಿನ ಪರಿಸ್ಥಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಮಾಹಿತಿಯನ್ನು ಆಗಾಗ್ಗೆ ಅಪ್ಡೇಟ್ ಮಾಡುತ್ತಿರುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನವೀಕರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
HMPV ವೈರಸ್ ಲಕ್ಷಣಗಳು ಏನು ?
ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್ ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.
ಮಂಗಳೂರು/ಕ್ಯಾಲಿಫೋರ್ನಿಯಾ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ವಾಣಿಜ್ಯ ಕಟ್ಟಡವೊಂದಕ್ಕೆ ಲಘು ವಿಮಾನ ಡಿಕ್ಕಿಯಾಗಿದೆ. ಈ ದುರಂತದಲ್ಲಿ ಇಬ್ಬರು ಮೃ*ತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.
ಲಾಸ್ ಏಂಜಲೀಸ್ ನಿಂದ ಆಗ್ನೇಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ಲೆರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ವಿಮಾನವು ಕಟ್ಟಡಕ್ಕೆ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೀಠೋಪಕರಣ ತಯಾರಿಕಾ ಕಂಪನಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತಕ್ಕೀಡಾದ ವಿಮಾನ ‘Van’s RV-10’ ಎಂದು ತಿಳಿಸಿರುವ ಫೆಡರಲ್ ವಿಮಾನಯಾನ ಅಧಿಕಾರಿಗಳು, ಘಟನೆ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ತನಿಖೆ ನಡೆಸುವುದಾಗಿ ಹೇಳಿದೆ. ಹತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಮಂದಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ ಎಂದು ಪುಲ್ಲರ್ಟನ್ ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಮೃ*ತಪಟ್ಟಿರುವವರು ವಿಮಾನದಲ್ಲಿದ್ದವರೇ ಅಥವಾ ಘಟನಾ ಸ್ಥಳದಲ್ಲಿ ಇದ್ದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ಭಾನುವಾರ, ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನದಲ್ಲಿ ಭಾರಿ ದುರಂತ ಸಂಭವಿಸಿತ್ತು. ಥಾಯ್ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ ಬಂದಿದ್ದ ವಿಮಾನ, ಲ್ಯಾಂಡಿಂಗ್ ವೇಳೆ ರನ್ ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿತ್ತು. ವಿಮಾನದಲ್ಲಿದ್ದ 181 ಮಂದಿಯ ಪೈಕಿ, 179 ಜನರು ಮೃತಪಟ್ಟಿದ್ದರು.