ಮಂಗಳೂರು/ಮುಂಬಯಿ: ಮಹಿಳೆಯೊಬ್ಬರ ಮೇಲೆ ಆಟೋ ಚಾಲಕನೊಬ್ಬ ಅ*ತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಸರ್‌ನ ಬೀಚ್‌ನಲ್ಲಿ ನಡೆದಿತ್ತು.
20 ವರ್ಷದ ಮಹಿಳೆ ಮೇಲೆ ಅ*ತ್ಯಾಚಾ*ರ ಎಸಗಿದ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕನನ್ನು ಶುಕ್ರವಾರ (ಜ.24) ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ತನ್ನ ಆಟೋ ರಿಕ್ಷಾದಲ್ಲಿ ಮುಂಬೈಗೆ ಕರೆತರುವ ಮೊದಲು ವಸೈನಲ್ಲಿ ಸಂತ್ರಸ್ತೆಯ ಮೇಲೆ ಅ*ತ್ಯಾಚಾ*ರವೆಸಗಿದ್ದಾನೆ ಎಂದು ವರದಿಯಾಗಿತ್ತು. ನಂತರ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಾಮಮಂದಿರದ ಬಳಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಕಸ್ಟಡಿಯಲ್ಲಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸ್ಮಿತಾ ಪಾಟೀಲ್ ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಹೇಳಿಕೆಯನ್ನು ನಿರಂತರವಾಗಿ ಬದಲಾಯಿಸುತ್ತಿದ್ದಾಳೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಆಟೋ ಚಾಲಕನೊಬ್ಬ ತನ್ನ ಮೇಲೆ ಅ*ತ್ಯಾಚಾ* ರ ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಮುಂಬೈನ ರಾಮಮಂದಿರ ಪ್ರದೇಶದಲ್ಲಿ ಬಾಲಕಿ ಅಳುತ್ತಿರುವುದು ಕಂಡು ಬಂದಿದ್ದು, ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಾಲಕಿ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿರುವುದರಿಂದ ಇಡೀ ಘಟನೆಯನ್ನು ಕ್ರಾಸ್ ಚೆಕ್ ಮಾಡಿ ತನಿಖೆ ನಡೆಸಿದ್ದಾರೆ. ಬಾಲಕಿ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತಿದ್ದಾರೆ. ಆಕೆಯ ಹಲವು ಹೇಳಿಕೆಗಳು ತಪ್ಪು ಎಂದು ತನಿಖೆಯ ವೇಳೆ ಸಾಬೀತಾಗಿದೆ. ಆಕೆ ತಾನು ಅನಾಥೆ ಎಂದು ಮೊದಲು ಹೇಳಿಕೊಂಡಿದ್ದಳು ಆದರೆ ಆಕೆಯ ತಂದೆ ಬಂದ ನಂತರ ಅದು ಸುಳ್ಳು ಎಂದು ಸಾಬೀತಾದ ಬಳಿಕ ಪೋಷಕರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.
ದೇ*ಹದ ಖಾ*ಸಗಿ ಭಾಗಗಳಲ್ಲಿ ಬ್ಲೇಡ್ ಮತ್ತು ಕಲ್ಲುಗಳು :
ಬಾಲಕಿಯನ್ನು ಕೆಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಘಾತಕಾರಿ ಘಟನೆಗಳಲ್ಲಿ ಆಕೆಯ ಖಾ*ಸಗಿ ಭಾಗದಿಂದ ಸರ್ಜಿಕಲ್ ಬ್ಲೇ*ಡ್ ಮತ್ತು ಕೆಲವು ಕಲ್ಲಿನ ತುಂಡುಗಳು ಪತ್ತೆಯಾಗಿವೆ. ರಾತ್ರಿ ಆಟೋ ಚಾಲಕನೊಂದಿಗೆ ಬೀಚ್‌ನಲ್ಲಿ ಇದ್ದಿದ್ದಕ್ಕೆ ಕುಟುಂಬದವರು ನಿಂದಿಸುವ ಭೀತಿಯಿಂದ ಮಹಿಳೆ ಪ್ರಕರಣವನ್ನು ತಿರುಗಿಸಲು ತನ್ನ ಖಾ*ಸಗಿ ಭಾಗಕ್ಕೆ ತಾನೇ ಸಿಸೇರಿಯನ್ ಬ್ಲೇ*ಡ್ ಮತ್ತು ಕಲ್ಲು ಹೊಯ್ದುಕೊಂಡಿದ್ದಾಳೆ. ನೋ*ವು ಜಾಸ್ತಿಯಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಆಕೆಯೇ ಪ್ರಮುಖ ಸ್ವ ಆರೋಪಿ ಎಂಬುವುದು ಸಾಬಿತಾಗಿದೆ.