Connect with us

    LATEST NEWS

    ಟೋಲ್‌ ಸಿಬಂದಿ ಮೇಲೆ ಹಲ್ಲೆ ಪ್ರಕರಣ; ಹಲ್ಲೆ ನಡೆಸಿದ ಸಲೀಂ ಪೊಲೀಸ್‌ ವಶ

    Published

    on

    ಪಡುಬಿದ್ರೆ: ಹೆಜಮಾಡಿ ಹಳೆ ಎಂಬಿಸಿ ರಸ್ತೆ ಟೋಲ್‌ ಪ್ಲಾಝಾದಲ್ಲಿ ಹೆದ್ದಾರಿ ಟೋಲ್‌ ಪಾವತಿಸದೆ ತನ್ನ ಕಾರನ್ನು ನುಗ್ಗಿಸಿದ್ದ ಸಂದರ್ಭ ಕಾರನ್ನು ತಡೆದ ಟೋಲ್‌ ಸಿಬಂದಿ ದೀಕ್ಷಿತ್‌ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಪರಾರಿಯಾದ ಕಾರು ಮಾಲಕನ ವಿರುದ್ಧ ಪಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಂಟ್ವಾಳ ಮೂಲದ ಸಲೀಂ ಸುಂಕ ಪಾವತಿಸದೆ ತನ್ನ ಕೆಂಪು ಬಣ್ಣದ ಕಾರನ್ನು ಟೋಲ್‌ ಗೇಟಲ್ಲಿ ಆ.6ರಂದು ಬೆಳಿಗ್ಗಿನ 9-20ರ ಸುಮಾರಿಗೆ ನುಗ್ಗಿಸಿದ್ದ. ಅದನ್ನು ತಡೆದು ನಿಲ್ಲಿಸಿದ್ದ ಟೋಲ್‌ ಸಿಬಂದಿ ಮೇಲೆ ಕಾರನ್ನು ಅಪಾಯಕಾರಿಯಾಗಿ ಚಲಾಯಿಸಿ ಮುಂದಕ್ಕೆ ಕೊಂಡೊಯ್ದು ನಿಲ್ಲಿಸಿ ವಾಪಸ್‌ ಬಂದ ಆರೋಪಿ ಸಲೀಂ ಟೋಲ್‌ ಸಿಬಂದಿ ದೀಕ್ಷಿತ್‌ ಮೇಲೆ ಕೈಯಿಂದ ಹಾಗೂ ಕೊಡೆಯಿಂದ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿದ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿತ್ತು.

    ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಯುವಕನ ಗೂಂಡಾಗಿರಿ; ಟೋಲ್ ಸಿಬ್ಬಂದಿಗೆ ಹ*ಲ್ಲೆ !

    ಈ ಕುರಿತಂತೆ ಪಡುಬಿದ್ರೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಹಾಗೂ ತಕ್ಷಣ ಆರೋಪಿಯ ಜಾಡು ಹಿಡಿದು ಉಡುಪಿಯತ್ತ ಧಾವಿಸಿ ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

    LATEST NEWS

    ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ

    Published

    on

    ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ‌ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.

    ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

    ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.

    ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.

    Continue Reading

    LATEST NEWS

    ಸಿಜೆಐ ಮನೆಯಲ್ಲಿ ಗಣಪತಿ ಪೂಜೆಯಲ್ಲಿ ಪ್ರಧಾನಿ ಮೋದಿ- ಸಂಜಯ್‌ ರಾವತ್‌ ಆಕ್ಷೇಪ

    Published

    on

    ನವದೆಹಲಿ: ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಕ್ಕೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಗಣೇಶೋತ್ಸವ ಸಮಯದಲ್ಲಿ ಸಿಜೆಐ ನಿವಾಸಕ್ಕೆ ಆಗಮಿಸಿದ ಮೋದಿ ಗಣಪತಿಗೆ ಆರತಿ ಎತ್ತಿದ್ದರು. ಈ ವಿಚಾರವನ್ನು ರಾವತ್‌ ಪ್ರಸ್ತಾಪ ಮಾಡಿ ಹಲವು ಪ್ರಶ್ನೆ ಎತ್ತಿದ್ದಾರೆ. ಗಣಪತಿ ಹಬ್ಬ ನಡೆಯುತ್ತಿದೆ, ಜನರು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪ್ರಧಾನಿ ಇದುವರೆಗೆ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಪ್ರಧಾನಮಂತ್ರಿಯವರು ಸಿಜೆಐ ಮನೆಗೆ ತೆರಳಿ ಆರತಿ ಬೆಳಗಿದ್ದಾರೆ ಎಂದು ಟೀಕಿಸಿದ್ದಾರೆ.

    ಸಂವಿಧಾನದ ಪಾಲಕರು ರಾಜಕಾರಣಿಗಳನ್ನು ಭೇಟಿ ಮಾಡಿದರೆ, ಅದು ಜನರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಿಂದ ದೂರವಿರಬೇಕು. ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಕಾಣುತ್ತಿದೆ. ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಂಜಯ್‌ ರಾವತ್‌ ಕೇಳಿದ್ದಾರೆ.

    Continue Reading

    LATEST NEWS

    ಕಮ್ಯುನಿಸ್ಟ್‌ ನಾಯಕ ಸಿತಾರಾಮ್‌ ಯೆಚೂರಿ ಇನ್ನಿಲ್ಲ..!

    Published

    on

    ನವದೆಹಲಿ : ಕಮ್ಯುನಿಸ್ಟ್‌ ನಾಯಕ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. 72 ವರ್ಷ ವಯಸ್ಸಾಗಿದ್ದ ಯೆಚೂರಿ ಅವರು ಉಸಿರಾಟದ ತೊಂದರೆಗಾಗಿ ಆಗಸ್ಟ್‌ 19 ರಂದು ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನಗಳಿಂದ ಶ್ವಾಸಕೋಶದ ಸೋಂಕು ಉಲ್ಭಣವಾಗಿದ್ದು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.


    1952 ರಲ್ಲಿ ಚೆನೈನಲ್ಲಿ ಜನಿಸಿದ್ದ ಇವರು ಶಾಲಾ ಶಿಕ್ಷಣವನ್ನು ಹೈದರಾಬಾದ್‌ನಲ್ಲಿ ಪೂರೈಸಿದ್ದರು. 1969 ರಲ್ಲಿ ತೆಲಂಗಾಣ ಪ್ರತ್ಯೇಕತಾ ಹೋರಾಟ ಆರಂಭವಾದ ಬಳಿಕ ದೆಹಲಿಗೆ ತೆರಳಿದ್ದ ಯೆಚೂರಿ ದೆಹಲಿಯ ಜೆಎನ್‌ಯುನಲ್ಲಿ ಎಂಎ ಪದವಿ ಮುಗಿಸಿದ್ದರು. ಪಿಹೆಚ್‌ಡಿ ಆರಂಭಿಸಿದ್ದರಾದ್ರೂ ತುರ್ತು ಪರಿಸ್ಥಿತಿಯ ಕಾರಣದಿಂದ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. 1970 ರಿಂದ ಜೆಎನ್‌ಯುನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮೂರು ಭಾರಿ ಆಯ್ಕೆಯಾಗಿದ್ದರು. ಬಳಿಕ 1984 ರಲ್ಲಿ ಸಿಪಿಐಎಂನ ಕೇಂದ್ರ ಸಮಿತಿಗೆ ಆಯ್ಕೆಯಾಗಿ ಪಕ್ಷದಲ್ಲಿ ಇದುವರೆಗೂ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.

    Continue Reading

    LATEST NEWS

    Trending