ಸುಳ್ಯ: ಮದರಸಾದಲ್ಲಿ ಪಾಠ ಮಾಡುತ್ತಿರುವಾಗ ಶಿಕ್ಷಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜದಲ್ಲಿ ನಡೆದಿದೆ.
ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ (51) ಮೃತ ದುರ್ದೈವಿ.
ಕಳಂಜ ಮದರಸಾದ ಗುರುಗಳು ರಜೆಯಲ್ಲಿದ್ದ ಹಿನ್ನೆಲೆ ರಶೀದ್ ಮುಸ್ಲಿಯಾರ್ ತಂಬಿನಮಕ್ಕಿಯಿಂದ ಪಾಠ ಮಾಡಲೆಂದು ಕಳಂಜ ಮದರಸಾಕ್ಕೆ ತೆರಳಿದ್ದರು. ಅದರಂತೆ ಪಾಠ ಮಾಡುತ್ತಿದ್ದಾಗ ಸುಮಾರು 7-30 ರ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ನಿನ್ನೆಯೇ ಅವರು ಎದೆನೋವಿನ ಬಗ್ಗೆ ಮನೆಯವರಲ್ಲಿ ಹೇಳಿದ್ದರು ಎನ್ನಲಾಗಿದೆ.
ಬೇರೆ ಬೇರೆ ಮದರಸಾಗಳ ಗುರುಗಲು ರಜಾದಲ್ಲಿದ್ದಾಗ ಹೋಗಿ ಪಾಠ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.