Connect with us

    BANTWAL

    ಕಾರು-ಲಾರಿ ಮುಖಾಮುಖಿ ಡಿಕ್ಕಿ; ಕಾರಿನಲ್ಲಿದ್ದ ವ್ಯಕ್ತಿ ಗಂಭೀ*ರ

    Published

    on

    ಬಂಟ್ವಾಳ: ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಕ್ರೆಟ್ಟಾ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡೂ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನಡೆದ ಈ ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸಜಿಪ ಎಂಬಲ್ಲಿ ಅಂಗಡಿ ನಡೆಸುತ್ತಿದ್ದ ಬೋಳಂಗಡಿಯ ಮುಸ್ತಾಫ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಕಾರಿನಲ್ಲಿದ್ದ ಮುಸ್ತಾಫ ಅವರಿಗೆ ಗಂಭೀರ ಗಾಯವಾಗಿದೆ.

     

    ಅಪಘಾತ ನಡೆದ ತಕ್ಷಣ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಮುಸ್ತಾಫ ಅವರನ್ನು ಕಾರಿನಿಂದ ಹೊರಗೆ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.

    ಪ್ರೀತಿಗಾಗಿ ಪೀಡಿಸಿದ ಅನ್ಯಮತೀಯ ಯುವಕ ಪೊಲೀಸ್ ವಶಕ್ಕೆ..!

    ತೀವ್ರ ಸ್ವರೂಪದ ಗಾಯವಾಗಿರುವ ಮುಸ್ತಾಫ ಅವರಿಗೆ ಬಂಟ್ವಾಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಗಾಯಾಳು ಮುಸ್ತಾಫ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

    BANTWAL

    ಬಂಟ್ವಾಳ: ಈದ್ ಮಿಲಾದ್ ಮೆರವಣಿಗೆಯಲ್ಲಿ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂ ಬಾಂಧವರು.!

    Published

    on

    ಬಂಟ್ವಾಳ: ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದು ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ನಡೆದಿದೆ.

    ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅದ್ದೂರಿಯಾಗಿ ಆಚರಿಸಿದರು. ಪ್ರಚೋದನಕಾರಿ ಹೇಳಿಕೆಯಿಂದ ಸಂಘಪರಿವಾರದ ಕಾರ್ಯಕರ್ತರು ಬಿಸಿ ರೋಡಿನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.

    ಇದೆಲ್ಲದರ ನಡುವೆ ಮಾಣಿಯಲ್ಲಿ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆಗೆ ಪಾತ್ರರಾದರು.

    ಅಲ್ಲದೆ ಅಂತ್ಯದಿನದವರೆಗೂ ನಮ್ಮ ಊರಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.

    Continue Reading

    BANTWAL

    ಬಿ.ಸಿ.ರೋಡ್‍ನಲ್ಲಿ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು: ಸದ್ಯ ಪರಿಸ್ಥಿತಿ ಶಾಂತ

    Published

    on

    ಬಂಟ್ವಾಳ: ಸಂಘಪರಿವಾರದ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಸೋಮವಾರ ಬಿಸಿರೋಡ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಜಮಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.

    ಪೊಲೀಸರು ಬಿ.ಸಿ.ರೋಡ್​ನಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಿಗದಿಕ್ಕಿಂತ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಸ್​​ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.

    ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಗುಂಪು ಜಮಾಯಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕಲ್ಪಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ‌.

    Continue Reading

    BANTWAL

    ಯಕ್ಷಸಿರಿ ಪ್ರಶಸ್ತಿಗೆ ದಿವಾಕರ್ ದಾಸ್ ಕಾವಳಕಟ್ಟೆ ಆಯ್ಕೆ

    Published

    on

    ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರತಿಷ್ಠಿತ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ತೆಂಕುತಿಟ್ಟಿನ ಪ್ರಸಾಧನ ಕಲಾವಿದರು ಮತ್ತು ವೇಷಧಾರಿಯಾದ ದಿವಾಕರ್ ದಾಸ್ ಕಾವಳಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

    ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಶನಿವಾರ(ಸೆ.14) ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ ತಿಂಗಳಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.

    ದಿವಾಕರ್ ದಾಸ್ ಕಾವಳಕಟ್ಟೆ ಇವರ ಬಗ್ಗೆ:

    ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಶ್ರುತಿ ಆರ್ಟ್ಸ್ ಸಂಸ್ಥೆಯ ಸಂಸ್ಥಾಪಕ, ಯಕ್ಷಗಾನ ಕಲಾವಿದ, ಸಂಘಟಕ ದಿವಾಕರ ದಾಸ್ ಕಾವಳಕಟ್ಟೆ. ಯಕ್ಷ ಕಲೆಯನ್ನು ಅತ್ಯಂತ ಒಲವಿನಿಂದ ಮೈಗೂಡಿಸಿಕೊಂಡು ಬೆಳೆಸುತ್ತ ಬೆಳೆದವರು.

    ಕಳೆದ 30 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ, ತರಬೇತುದಾರನಾಗಿ, ಯಕ್ಷಗಾನ ಸಂಘಟಕನಾಗಿ, ತಲಕಲ, ಕಾಂತಾವರ, ಸುರತ್ಕಲ್, ಮಂಗಳಾದೇವಿ ಮೇಳಗಳಲ್ಲಿ 14 ವರ್ಷ ಸ್ತ್ರೀ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಕಾವಳಕಟ್ಟೆಯಲ್ಲಿ ಶೃತಿ ಆರ್ಟ್ಸ್ ಕಲಾ ಸಂಸ್ಥೆ ಸ್ಥಾಪಿಸಿ ಕಲಾ ಪ್ರದರ್ಶನಗಳಿಗೆ ಬೇಕಾದ ವೇಷಭೂಷಣ ತಯಾರಿಸಿ, ಕರ್ನಾಟಕ ರಾಜ್ಯದ ಬಹುತೇಕ ಪ್ರಸಾದನ ಸಂಸ್ಥೆ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ ಹಾಗೂ ಕಲಾ ತಂಡಗಳಿಗೆ ವೇಷಭೂಷಣ ಒದಗಿಸಿರುವ ಇವರು ವಿದ್ಯಾರ್ಥಿಗಳಿಗೆ, ಯಕ್ಷಗಾನ ಆಸಕ್ತರಿಗೆ ನಾಟ್ಯ ಮತ್ತು ಅರ್ಥಗಾರಿಕೆಯ ತರಬೇತಿ ನೀಡಿದ್ದಾರೆ. ಅಲ್ಲದೇ ತೆಂಕುತಿಟ್ಟಿನ ಹೆಚ್ಚಿನ ಯಕ್ಷಗಾನ ಮೇಳಗಳಿಗೆ ವೇಷಭೂಷಣವನ್ನು ತಯಾರಿಸಿ ಕೊಡುತ್ತಿದ್ದಾರೆ.

    ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರನ್ನು ಒಟ್ಟು ಸೇರಿಸಿ ಅಲ್ಲಲ್ಲಿ ಯಕ್ಷಗಾನ, ತಾಳಮದ್ದಳೆ ಕೂಟಗಳನ್ನು ಸಂಘಟಿಸುತ್ತಿರುವ ಇವರು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಯಕ್ಷಗಾನ ತಂಡದೊಂದಿಗೆ ಭಾಗವಹಿಸಿ ಕಲಾ ಪ್ರದರ್ಶನ, ಹಂಪಿ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನ, ವಿಶ್ವ ಯುವಜನ ಮೇಳದಲ್ಲಿ ಯಕ್ಷಗಾನ ಪ್ರದರ್ಶನ, ರಾಜ್ಯ ಮಟ್ಟದ ಯುವಜನ ಮೇಳಗಳಲ್ಲಿ ಯಕ್ಷಗಾನ ಪ್ರದರ್ಶನ, ಆಫ್ರೀಕಾ ಶೃಂಗಸಭೆ, ದೆಹಲಿಯಲ್ಲಿ ಯಕ್ಷಗಾನ ನೃತ್ಯ ರೂಪಕ, ಮೈಸೂರು ದಸರಾ ಉತ್ಸವಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದಾರೆ. 2014ರಲ್ಲಿ ಸರಕಾರದ ಉದ್ಯೋಗ ಖಾತರಿ ಯೋಜನೆಯ ಜಾಗೃತಿ ಯಕ್ಷಗಾನ ಪ್ರದರ್ಶನ ನೀಡಿರುವ ಇವರು ಕೆದ್ದಳಿಕೆ ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಶಾಲೆಯನ್ನು ರಾಜ್ಯದಲ್ಲೇ ಮಾದರಿಯಾಗಿ ರೂಪಿಸುವಲ್ಲಿ ಪ್ರಯತ್ನಿಸಿದ್ದಾರೆ.

    ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರಾಜ್ಯ ಮಟ್ಟದ ಸುವರ್ಣ ಕರ್ನಾಟಕ ಸಾಧನಾಶ್ರೀ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುವರ್ಣ ಕರ್ನಾಟಕ ಜಯಂತಿ ಪ್ರಶಸ್ತಿ, ಕೆದ್ದಳಿಕೆ ಶಾಲೆಯ ಎಸ್.ಡಿ.ಎಂ.ಸಿ.ಗೆ ರಾಜ್ಯ ಮಟ್ಟದ ಉತ್ತಮ ಅಧ್ಯಕ್ಷ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ, ಉತ್ತಮ ಸ್ತ್ರೀ ವೇಷಧಾರಿ ಪ್ರಶಸ್ತಿ ಸೇರಿ ಸುಮಾರು 60ಕ್ಕೂ ಹೆಚ್ಚಿನ ಪ್ರಶಸ್ತಿಗಳು ಲಬಿಸಿವೆ.

    Continue Reading

    LATEST NEWS

    Trending