Connect with us

    LATEST NEWS

    ರಾಮನಗರದಲ್ಲಿ ಸಿಡಿಮದ್ದು ತುಂಬಿದ್ದ ಕಾರು ಸ್ಪೋಟ – ವ್ಯಕ್ತಿ ದೇಹ ಛಿದ್ರ..!

    Published

    on

    ರಾಮನಗರ : ಏಕಾಏಕಿ ಕಾರು ಸ್ಫೋಟಗೊಂಡು ವ್ಯಕ್ತಿ ಸಜೀವ ದಹನವಾದ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮನಗರದ ಕನಕಪುರ ತಾಲೂಕಿನ ಮರಳೆ ಗ್ರಾಮದ ಬಳಿ ನಡೆದಿದೆ.

    ಮರಳೆ ಗ್ರಾಮದ ಬಳಿ ಕಾರು ಸ್ಫೋಟಗೊಂಡು ದುರಂತ ಸಂಭವಿಸಿದೆ.

    ಕೆಎ 51, ಪಿ 3384 ನೋಂದಣಿ ಕಾರು ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಸ್ತುಗಳು ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದೆ.

    ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ವಸ್ತುಗಳು ಸಹಿತ ಕಾರಿನ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ.

    ಕಾರ್ ಸ್ಫೋಟದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾರಿನಲ್ಲಿದ್ದ ಓರ್ವ ಸಾವಿಗೀಡಾಗಿದ್ದಾನೆ. ಈತನನ್ನು ಮಹೇಶ್ ಎಂದು ಗುರುತಿಸಲಾಗಿದೆ.

    ಮೂಲತಃ ಮಹೇಶ್ ದೊಡ್ಡಾಲಹಳ್ಳಿ ಗ್ರಾಮದವನಾಗಿದ್ದು, ಕನಕಪುರದಲ್ಲಿ ಹಲವಾರು ವರ್ಷಗಳಿಂದ ವಾಸವಿದ್ದ ಎಂದು ಹೇಳಲಾಗುತ್ತಿದೆ.

    ಕಲ್ಲು ಗಣಿಗಾರಿಕೆಯ ಮಾಲೀಕರು ಶಿವರುದ್ರಪ್ಪ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಮನಗರ ಎಸ್.ಪಿ. ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    LATEST NEWS

    ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !

    Published

    on

    ಮಂಗಳೂರು/ಬೆಂಗಳೂರು: ಅರೆಸ್ಟ್ ವಾರೆಂಟ್ ಜಾರಿಯಾದ ಬೆನ್ನಲ್ಲೇ ಭಾರತ ಮಾಜಿ ಕ್ರಿಕೆಟರ್​ ರಾಬಿನ್ ಉತ್ತಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಸ್ತುತ ಆರೋಪ ಕೇಳಿ ಬಂದಿರುವ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಕೆಲ ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ.

    ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು. ಇದೀಗ ಈ ವಿಚಾರವಾಗಿ ಮಾಧ್ಯಮ ಪ್ರಕಟನೆಯ ಮೂಲಕ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದು, ಆರೋಪ ಹೊತ್ತ ಕಂಪನಿಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ. ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

    ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ತಮ್ಮ ಮೇಲೆ ಬಂದಿರುವ ಆರೋಪ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡ ಪ್ರತಿಕ್ರಿಯಿಸಿದೆ. ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆ ನೀಡಿದ್ದೇನೆ.

    ಅದರ ಹೊರತಾಗಿ ಪಿಎಫ್ ಅಧಿಕಾರಿಗಳು ಪ್ರಕ್ರಿಯೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಪರ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !

    2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಇದಕ್ಕಾಗಿ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕ ಮಾಡಿದ್ದವು. ಆದರೆ ಇವುಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ. ಇದರ ಜೊತೆ ಕಂಪನಿಗಳ ನಿತ್ಯದ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

    ವೃತ್ತಿಪರ ಕ್ರಿಕೆಟಿಗ, ಬಳಿಕ ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ಇದ್ದಿದ್ದರಿಂದ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲಿಲ್ಲ. ಇದುವರೆಗೂ ಹಣ ಹೂಡಿಕೆ ಮಾಡಿದ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಆದರೆ ಈಗ ಕೇಳಿ ಬಂದಿರುವ ಆರೋಪ ಇರುವ ಕಂಪನಿಗಳು ಸಾಲದ ರೂಪದಲ್ಲಿ ನೀಡಿದ ಹಣವನ್ನು ನನಗೆ ಮರುಪಾವತಿಸಲು ವಿಫಲವಾಗಿವೆ. ಹೀಗಾಗಿ ಹಲವು ವರ್ಷಗಳ ಹಿಂದೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದ್ದಾರೆ.

    Continue Reading

    LATEST NEWS

    ಬಾರತೀಯ ಕಾರ್ಮಿಕರೊಂದಿಗೆ ಕುವೈತ್‌ನಲ್ಲಿ ಮೋದಿ ಸಂವಾದ

    Published

    on

    ಮಂಗಳೂರು/ಕುವೈತ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಕುವೈತ್‌ ಪ್ರವಾಸದಲ್ಲಿದ್ದಾರೆ. ಈ ವೇಳೆ ಕುವೈತ್‌ನ ಮಿನಾ ಅಬ್ದುಲ್ಲಾ ಪ್ರದೇಶದಲ್ಲಿರುವ ಗಲ್ಫ್ ಸ್ಪಿಕ್ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿಯವರು ಭಾರತೀಯರನ್ನುದ್ದೇಶಿಸಿ ಮಾತನ್ನಾಡಿದ್ದಾರೆ.

    ಪ್ರಧಾನಿ ಮೋದಿ ಕುವೈತ್​ಗೆ​​ ಭೇಟಿ ನೀಡಿದ ಮೊದಲ ದಿನ ಭಾರತದ ವಿವಿಧ ರಾಜ್ಯಗಳ ಸುಮಾರು 1,500 ಪ್ರಜೆಗಳೊಂದಿಗೆ ಸಂವಾದ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಜೊತೆಗೆ ಎಲ್ಲರಿಗೂ ತಿಂಡಿ ತಿನಿಸುಗಳನ್ನು ಬಡಿಸಿದ್ದಾರೆ. ವಿದೇಶದಲ್ಲಿರುವ ಭಾರತೀಯ ಕಾರ್ಮಿಕರಿಗೆ ಪ್ರಧಾನಿ ಮೋದಿ ಅವರ ಭೇಟಿ ವಿದೇಶದಲ್ಲಿರುವ ಬಾರತೀಯರಿ ಕಾರ್ಮಿಕರಿಗೆ ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಕಲ್ಯಾಣಕ್ಕಾಗಿ ಇ-ಮೈಗ್ರೇಟ್ ಪೋರ್ಟಲ್, ಎಂಎಡಿಎಡಿ ಪೋರ್ಟಲ್ ಮತ್ತು ವಿಮಾ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

     

    ಇದನ್ನೂ ಓದಿ : 43 ವರ್ಷಗಳ ಬಳಿಕ ಕುವೈತ್​ಗೆ ಭಾರತದ ಪ್ರಧಾನಿ ಮೋದಿ ಭೇಟಿ

     

    ವಿದೇಶದಲ್ಲಿರುವ ಭಾರತೀಯ ಕಾರ್ಮಿಕರ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಹತ್ವದ ದಾಪುಗಾಲು ಇಟ್ಟಿದ್ದಾರೆ. 40ಕ್ಕೂ ಹೆಚ್ಚು ಭಾರತೀಯರ ಸಾವಿಗೆ ಕಾರಣವಾದ ಕುವೈಟ್ ಅಗ್ನಿ ದುರಂತದ ಬಳಿಕ ಪಿಎಂ ಮೋದಿ ಅವರು ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿದ್ದರು. ಮೋದಿಜಿಯವರು 2015 ರಲ್ಲಿ ಅಬು ಧಾಬಿಯ ಕಾರ್ಮಿಕ ಶಿಬಿರಕ್ಕೂ ಭೇಟಿ ನೀಡಿದ್ದರು. ಅಲ್ಲಿ ಅವರು ವಲಸೆ ಕಾರ್ಮಿಕರ ಕಲ್ಯಾಣದ ಬಗ್ಗೆ ಭಾರತದ ಕಾಳಜಿಯನ್ನು ಎತ್ತಿ ತೋರಿಸಿತ್ತು. ಶಿಬಿರಗಳಲ್ಲಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು, ಭಾರತ ಸರ್ಕಾರವು ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ಚರ್ಚಿಸಿದ್ದರು.

    Continue Reading

    FILM

    ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

    Published

    on

    ಮಂಗಳುರು/ ತೆಲಂಗಾಣ : ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳು ಅ*ಪಘಾತದಿಂದ ಜೀ*ವ ಕಳೆದುಕೊಂಡ ಘಟನೆ ತೆಲಂಗಾಣದ ಸಂಧ್ಯಾ ಟಾಕೀಸ್ ಬಳಿ ನಡೆದಿದೆ.

    ಅ*ಪಘಾತದ ವೇಳೆ ತಾಯಿ ಹಾಗೂ ಮಗ ವಾಹನದಲ್ಲಿದ್ದರು. ತಾಯಿ ಮೃ*ತಪಟ್ಟಿದ್ದು, ಮಗ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃ*ತ ಮಹಿಳಯ ಕುಟುಂಬವನ್ನು ಭೇಟಿ ಮಾಡಿದ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ವೆಂಕಟ ರೆಡ್ಡಿ ಅವರಿಗೆ 25 ಲಕ್ಷ ಹಣ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟ ರೆಡ್ಡಿ ‘ಪುಷ್ಪ 2’ ಸಿನಿಮಾ, ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿಯೂ ಈ ಬಗ್ಗೆ ಮಾತನಾಡಿರುವ ಸಚಿವ ವೆಂಕಟ ರೆಡ್ಡಿ, ಚಿತ್ರರಂಗಕ್ಕೆ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ನಿಲ್ಲಿಸುತ್ತಿರುವದಾಗಿ ಘೋಷಣೆ ಮಾಡಿದ್ದಾರೆ.

    ಈ ಘಟನೆ, ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ಹೊಡೆತ ಕೊಟ್ಟಿದೆ. ಬಾಲಿವುಡ್ ನಂತರ ತೆಲುಗು ಚಿತ್ರರಂಗವೇ ಭಾರತದ ಅತ್ಯಂತ ದೊಡ್ಡ ಚಿತ್ರರಂಗ. ಬಾಕ್ಸ್ ಕಲೆಕ್ಷನ್​ ಲೆಕ್ಕಹಾಕಿ ನೋಡಿದರೆ ಇಡೀ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡುವ ಚಿತ್ರರಂಗ ಟಾಲಿವುಡ್. ಆದರೆ ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಹಾಗಾಗಿ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು, ಸ್ಟಾರ್ ನಟರು ಚಿಂತಾಮಗ್ನರಾಗಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳು ಕಡಿಮೆ ಇವೆ. ಆದರೆ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲಿ ನಿರ್ಮಾಪಕರು, ಸರ್ಕಾರದ ಬಳಿ ಮನವಿ ಮಾಡಿಕೊಂಡು ಟಿಕೆಟ್ ಬೆಲೆ ಹೆಚ್ಚಳ ಹಾಗೂ ಹೆಚ್ಚುವರಿ ಶೋ ಹಾಕಿಕೊಳ್ಳಲು ಅನುಮತಿ ಪಡೆದುಕೊಳ್ಳುತ್ತಾರೆ.

    “ಇಷ್ಟು ದಿನ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತುಗಳು, ಬೆನಿಫಿಟ್ ಶೋಗಳನ್ನು ರದ್ದು ಮಾಡಲಾಗುತ್ತಿದೆ. ಮಾತ್ರವಲ್ಲದೆ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ದರ ಹೆಚ್ಚಳ ಸವಲತ್ತನ್ನು ಸಹ ಹಿಂಪಡೆಯಲಾಗಿದೆ” ಎಂದು ಸಚಿವ ವೆಂಕಟ ರೆಡ್ಡಿ ತೆಲಂಗಾಣ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮ್ಮ ಸ್ವಂತ ಖಾತೆಯಿಂದ 25 ಲಕ್ಷ ರೂಪಾಯಿ ಹಣವನ್ನು ಮೃ*ತ ಮಹಿಳೆಯ ಕುಟುಂಬಕ್ಕೆ ನೀಡುತ್ತಿರುವಾಗಿ ಹಾಗೂ ಐಸಿಯುನಲ್ಲಿರುವ ಬಾಲಕ ಶ್ರೀತೇಜ ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

    ತೆಲಂಗಾಣ ಸರ್ಕಾರದ ಈ ನಿರ್ಣಯ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಪೆಟ್ಟು ನೀಡಲಿದೆ. ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳು ಇಲ್ಲದಿದ್ದರೆ ತೆಲುಗು ಸಿನಿಮಾಗಳು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ತೆಲಂಗಾಣ ಸರ್ಕಾರದ ಈ ನಿರ್ಧಾರದಿಂದಾಗಿ ಬಿಗ್ ಬಜೆಟ್ ಸಿನಿಮಾಗಳು ಚಿಂತೆಗೆ ದೂಡಲ್ಪಟ್ಟಿವೆ. ಇದೀಗ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸಂಕ್ರಾಂತಿಗೆ ಸಹ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿದ್ದು, ಅವುಗಳಿಗೂ ಸಹ ಸಮಸ್ಯೆ ಆಗಲಿದೆ.

    Continue Reading

    LATEST NEWS

    Trending