Sunday, May 22, 2022

ಹೈವೇಯಲ್ಲಿ ಆ್ಯಂಬುಲೆನ್ಸ್​​​ಗೆ ದಾರಿ ಬಿಡದೆ ಉದ್ಧಟತನ ಮೆರೆದಿದ್ದ ಕಾರು ಚಾಲಕ ಮೋನಿಶ್ ಅರೆಸ್ಟ್..!​

ಮಂಗಳೂರು : ಎರಡು ಬೇರೆ ಬೇರೆ ಆ್ಯಂಬುಲೆನ್ಸ್​​​ಗಳಿಗೆ ಕಿಲೋಮೀಟರ್​ಗಟ್ಟಲೇ ದಾರಿ ಬಿಡದೆ ಉದ್ಧಟತನದಿಂದ ವರ್ತಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

 

ಮೋನಿಶ್ ಬಂಧಿತ ಕಾರು ಚಾಲಕ. ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸ್​​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಉಡುಪಿಯವರೆಗೆ ಸುಮಾರು 30 ಕಿಲೋಮೀಟರ್ ಈತ ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿರಲಿಲ್ಲ.

KA19 Md 6843 ಎಂಬ ರಿಜಿಸ್ಟ್ರೇಷನ್ ನಂಬರ್​ನ ಕಾರಿನ ಚಾಲಕ ಈ ರೀತಿ ಸತಾಯಿಸಿದ್ದಾನೆ. ಇದನ್ನು ಆ್ಯಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿ ವಿಡಿಯೋ ಮಾಡಿದ್ದರು.

ಇಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್​​​ಗೂ ಈತ ದಾರಿ ಬಿಡದೆ ಸತಾಯಿಸಿದ್ದಾನೆ.

ಈತನ‌ ದುರ್ವರ್ತನೆಯ ವಿಡಿಯೋ ಇಂದು ವೈರಲ್ ಆದ ಬೆನ್ನಲ್ಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

Big Breaking: ಪೆಟ್ರೋಲ್‌ 9.50 ಪೈಸೆ, ಡೀಸೆಲ್‌ 7 ರೂ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರೂ ಹಾಗೂ 6ರೂ ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ. ಇದರಿಂದ ಪ್ರತಿ...

ಕಾಂಗ್ರೆಸ್ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೋ ಅವರು ಗೊಂದಲ ಸೃಷ್ಟಿಸಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್...

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...