Thursday, September 29, 2022

ಕಡಬ: ಸೇತುವೆಗೆ ಢಿಕ್ಕಿ ಹೊಡೆದ ಕಾರು-ಇಬ್ಬರು ಸಾವು, ಐವರು ಗಂಭೀರ

ಕಡಬ: ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕಿರು ಸೇತುವೆಯ ತಡೆಗೋಡಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಇಂದು ನಡೆದಿದೆ.

ಬೆಂಗಳೂರಿನ ರಾಮನಗರ ನಿವಾಸಿಗಳಾದ ನಾಗೇಶ್ ( 32) , ತೇಜಸ್ವಿನಿ (14) ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಮಗು ಸೇರಿದಂತೆ ಇನ್ನುಳಿದ ಐವರಿಗೆ ಗಂಭೀರ ಗಾಯವಾಗಿದೆ.


ಸುಬ್ರಹ್ಮಣ್ಯಕ್ಕೆ ತೆರಳಿದ್ದ ರಾಮನಗರದ ಯಾತ್ರಾರ್ಥಿಗಳು ಇದ್ದ ಕಾರು ಡ್ರೈವರ್‌ನ ಕಂಟ್ರೋಲ್ ತಪ್ಪಿ ರಸ್ತೆ ಬದಿಯ ಕಿರು ಸೇತುವೆಯ ತಡೆಗೋಡಿಗೆ ಢಿಕ್ಕಿ ಹೊಡೆದಿದೆ.

ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಖಾಸಗಿ ಬಸ್ಸುಗಳಲ್ಲಿ ಕನ್ನಡ ನಾಮಫಲಕ ಇನ್ಮುಂದೆ ಕಡ್ಡಾಯ-ತುಳು ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ವತಿಯಿಂದ ಇಂದು ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರು...

ಮುಲ್ಕಿ: ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

ಮಂಗಳೂರು: ಮನೆಯೊಂದರಲ್ಲಿ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿದ್ದು ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದು ಮೃತದೇಹವನ್ನು ತೆರವುಗೊಳಿಸಿದ ಘಟನೆ ಮುಲ್ಕಿಯ ಕಿಲ್ಪಾಡಿ ಮದಕ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ಸುಧೀರ್ ಶೆಟ್ಟಿ...

ಮಂಗಳೂರು: ಚಿಟ್ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ. ಪಂಗನಾಮ-ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ಭಾರ್ಗವಿ ಫೈನಾನ್ಸ್‌ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್‌ ಮಾಲಕ ಅಶೋಕ್ ಭಟ್ ಮತ್ತು ಆತನ‌ ಪತ್ನಿ ವಿದ್ಯಾಭಟ್...