LATEST NEWS
ನಮ್ಮನ್ನು ಬದುಕಲು ಬಿಡಿ: ಕೆನರಾ ಉದ್ಯಮಿಗಳ ಒಕ್ಕೂಟ ದಿಂದ ಒಕ್ಕೊರಲ ಆಗ್ರಹ
Published
3 years agoon
By
Adminಉಡುಪಿ: ಕರ್ನಾಟಕ ಸರಕಾರ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ನಂತಹ ತಪ್ಪು ನಿರ್ಧಾರಗಳನ್ನು ವಿರೋಧಿಸಿ ಜ.20ರಂದು ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಪ್ರಾಯೋಜಕತ್ವದಡಿ ಹೋಟೆಲ್ ಓಶನ್‌ಪರ್ಲ್ ನಲ್ಲಿ 30 ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜತೆಯಲ್ಲಿ ಕೆನರಾ ಉದ್ಯಮಿಗಳ ಒಕ್ಕೂಟದ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ಸರಕಾರ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂನಂತಹ ತಪ್ಪು ನಿರ್ಧಾರಗಳನ್ನು ವಿರೋಧಿಸಿ,
ಅವಿರೋಧವಾಗಿ ಖಂಡಿಸಿದ ಸರ್ವ ಉದ್ಯಮ ಸಂಘಟನೆಗಳು, ಶನಿವಾರ ಮತ್ತು ಆದಿತ್ಯವಾರ ತಮ್ಮ ತಮ್ಮ ವ್ಯವಹಾರಗಳನ್ನು ತೆರೆಯುವ ಮೂಲಕ ಅವೈಜ್ಞಾನಿಕ ಕರ್ಫ್ಯೂವನ್ನೂ ವಿರೋಧಿಸಲು ತೀರ್ಮಾನಿಸಲಾಯಿತು.
ಸಾಮಾಜಿಕ, ಧಾರ್ಮಿಕ ರಾಜಕೀಯ ಕಾರ್ಯಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಅದನ್ನು ತಡಗಟ್ಟಲು ಹೋಗದೆ, ಕೇವಲ ರಿಟೇಲ್ ಅಂಗಡಿಗಳನ್ನ ಮುಚ್ಚುವ ನಿರ್ಧಾರ ಯಾವ ರೀತಿಯ ವೈಜ್ಞಾನಿಕ ನಿರ್ಧಾರ? ಇದನ್ನು ನಿರ್ಧರಿಸಿದ ತಜ್ಞರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಅಷ್ಟೇ ಅಲ್ಲದೆ ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸೋತು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಿಗೆ ಯಾವ ಸರಕಾರ ಪರಿಹಾರ ನೀಡಿಲ್ಲ. ಇದರ ಬಗ್ಗೆ ಸರಕಾರದಲ್ಲಿ ಅಂಕಿ ಸಂಖ್ಯೆಗಳು ಇವೆಯೇ?
ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ರಾಷ್ಟ್ರೀಯ ಎನ್‌ಡಿ ಟಿವಿಗೆ ನೀಡಿದ ಸ0ದರ್ಶನದಲ್ಲಿ ಒಮಿಕ್ರಾನ್ ವೈರಸ್ ಮಾರಣಾಂತಿಕವಲ್ಲ.
ಆಸ್ಪತ್ರೆಯ ಹೊರ ರೋಗಿಗಳ ವಿಭಾಗಗಳಿಂದ ಚಿಕಿತ್ಸೆ ಪಡೆದರೆ ಸಾಕು ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳು ಅವರವರ ಅಗತ್ಯತೆಗಳ ಮೇಲೆ ಅವಲಂಬಿತವಾಗಿದೆ. ಮನೆಯ ನೀರಿನ ನಳ್ಳಿ ಸೋರಿದರೆ ಅದನ್ನು ಬದಲಾಯಿಸಲು ಹಾರ್ಡ್ವೇರ್ ಅಂಗಡಿ ಕೂಡ ಅಗತ್ಯ ವಸ್ತುವೇ ಆಗುತ್ತದೆ.
ಅದನ್ನು ಬಿಟ್ಟು ಬೀದಿಬದಿ ವ್ಯಾಪಾರಕ್ಕೆ ಅನುವು ಮಾಡುವ ಸರಕಾರದ ನಿರ್ಧಾರ ವು ಜಿ.ಎಸ್.ಟಿ ಸಂಗ್ರಹಿಸುವ ಉದ್ಯಮಗಳು ಕೂಡ ಅನಿವಾರ್ಯವಾಗಿ ಬೀದಿಬದಿ ವ್ಯಾಪಾರ ಮಾಡಲು ಪ್ರೇರೇಪಿಸುತ್ತವೆ
ಎಂದು ಕೆನರಾ ಉದ್ಯಮಗಳ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕುಮಾರ್ ಪ್ರಶ್ನಿಸಿದರು.
ಈ ಎಲ್ಲಾ ಕಾರಣಗಳಿಂದ ಸರಕಾರ ನಿಗದಿಪಡಿಸಿದ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳನ್ನ ಕೂಡಲೇ ರದ್ದು ಪಡಿಸಲು ಈ ಮೂಲಕ ಸರ್ವ ಉದ್ಯಮ ಸಂಘಟನೆಗಳು ಕೆನರಾ ಉದ್ಯಮಿಗಳ ಒಕ್ಕೂಟದ ಮೂಲಕ ಹಕ್ಕೊತ್ತಾಯ ಮಂಡಿಸುತ್ತದೆ.
ನಾವು ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ , ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಿದ್ದೇವೆ. ಕನಿಷ್ಠ ನಮ್ಮ ಬಳಿ ಸೌಜನ್ಯಕ್ಕೂ ಉತ್ತರ ನೀಡಿಲ್ಲ.
ಅದಕ್ಕಾಗಿ ವ್ಯಾಪಾರಿಗಳು ಅಂಗಡಿ ಮುಂಗಟ್ಟು ತೆರೆದಿಟ್ಟು ಪ್ರತಿಭಟಿಸಲು ನಿರ್ಧರಿಸಿದ್ದೇವೆ ಎಂದು ಕೆನರಾ ವಾಣಿಜ್ಯ ಒಕ್ಕೂಟ ತಿಳಿಸಿದೆ.
LATEST NEWS
ಕ್ಯಾನ್ಸರ್ ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯೊಳಗೆ ಕತ್ತರಿ ಬಾಕಿ ; ಮುಂದೆ….??
Published
5 hours agoon
30/11/2024ಮಂಗಳೂರು/ಭೂಪಾಲ್: ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆಯ ಆಪರೇಷನ್ ಮಾಡಿದ ವೈದ್ಯರು ಆಕೆಯ ಹೊಟ್ಟೆಯೊಳಗೆ ಕತ್ತರಿ ಹಾಗೇ ಬಿಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಈ ಪ್ರಕರಣದಲ್ಲಿ ಎರಡು ವರ್ಷಗಳ ಬಳಿಕ ಮಹಿಳೆಯ ಹೊಟ್ಟೆಯ ಒಳಗಿನಿಂದ ಕತ್ತರಿ ಹೊರಗೆ ತೆಗೆಯಲಾಗಿದೆ. ಮಾಹಿತಿಗಳ ಪ್ರಕಾರ, 2 ವರ್ಷಗಳ ಹಿಂದೆ ಗ್ವಾಲಿಯರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಆ ಮಹಿಳೆ ಆಪರೇಷನ್ ಮಾಡಿಸಿಕೊಂಡ ವೇಳೆ ವೈದ್ಯರು ಆಕೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿದ್ದಾರೆ. ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಉಸ್ತುವಾರಿ ಸತೀಶ್ ಶರ್ಮಾ ಅವರು ಕಮಲಾ ಎಂಬ ಮಹಿಳೆಯ ಸಿಟಿ ಸ್ಕ್ಯಾನ್ ಮಾಡುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ :
ಮಹಳೆಯ ಹೊಟ್ಟೆಯ ಕ್ಯಾನ್ಸರ್‌ಗಾಗಿ 2022ರ ಫೆಬ್ರವರಿ 20ರಂದು ಗ್ವಾಲಿಯರ್‌ನ ಕಮಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ವೈದ್ಯರು ನಿರ್ಲಕ್ಷ್ಯ ವಹಿಸಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿದ್ದಾರೆ. ಮಹಿಳೆಗೆ ಅದರ ಅರಿವೇ ಇರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಔಷಧಿ ನೀಡಿದರೂ ನೋವು ಕಡಿಮೆಯಾಗದಿದ್ದಾಗ ವೈದ್ಯರು ಸಿಟಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದು, ಈ ವೇಳೆ ಹೊಟ್ಟೆಯಲ್ಲಿ ಕತ್ತರಿ ಸ್ಪಷ್ಟವಾಗಿ ಗೋಚರಿಸಿದೆ. ಹೊಟ್ಟೆಯಲ್ಲಿದ್ದ ಕತ್ತರಿ ಮಹಿಳೆಗೆ ಮಾರಕವಾಗಬಹುದು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಹಾಗೂ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿರುವ ವೈದ್ಯ ಸತೀಶ್ ಶರ್ಮಾ ಕೂಡ ಇದನ್ನು ಖಚಿತಪಡಿಸಿದ್ದಾರೆ.
DAKSHINA KANNADA
ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ; ಮೂವರಿಗೆ ಗಾಯ
Published
5 hours agoon
30/11/2024By
NEWS DESK4ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ ಯಾಗಿ ಇಬ್ಬರು ಗಾ*ಯಗೊಂಡಿದ್ದು, ಓರ್ವ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ನಡೆದಿದೆ.
ಆಟೋ ಚಾಲಕ ಪಕ್ಷಿಕೆರೆ ಕಾಪಿಕಾಡು ನಿವಾಸಿ ರಾಮಚಂದ್ರ ( 45) ಮತ್ತು ಪ್ರಯಾಣಿಕ ಶೇಕ್ ಸಾಹೇಬ್ (60) ಗಾಯಗೊಂಡವರು.
ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಶೇಕ್ ಸಾಹೇಬ್ ಪಕ್ಷಿಕೆರೆಯಿಂದ ಆಟೋ ಮೂಲಕ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಕೆರೆಕಾಡು ಬಳಿ ನಾಯಿ ಅಡ್ಡ ಬಂದಿದ್ದು ಅಪಘಾ*ತ ತಪ್ಪಿಸಲು ಯತ್ನಿಸಿದಾಗ ಆಟೋ ಪ*ಲ್ಟಿಯಾಗಿದೆ. ಅಪ*ಘಾತದ ರಭಸಕ್ಕೆ ಆಟೋದಲ್ಲಿದ್ದವರು ಗಾ*ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
FILM
ಸಮಂತಾಗೆ ಪಿತೃ ವಿಯೋಗ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ
Published
6 hours agoon
30/11/2024By
NEWS DESK4ಮಂಗಳೂರು/ಹೈದರಾಬಾದ್ : ನಟಿ ಸಮಂತಾ ರುತ್ ಪ್ರಭು ತಂದೆ ಜೋಸೆಫ್ ಪ್ರಭು(72) ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಜೋಸೆಫ್ ಪ್ರಭು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿ*ಧನಕ್ಕೆ ಹಲವರು ಸಂ*ತಾಪ ಸೂಚಿಸಿದ್ದಾರೆ.
ಸ್ಯಾಮ್ ಭಾವುಕ ಪೋಸ್ಟ್ :
ಇತ್ತೀಚಿಗಷ್ಟೇ ಸಿಟಾಡೆಲ್ ವೆಬ್ ಸೀರೀಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದರು ಸಮಂತಾ. ಸಿಟಾಡೆಲ್ ಸಕ್ಸಸ್ ಖುಷಿಯಲ್ಲಿದ್ದ ಅವರಿಗೆ ತಂದೆಯ ಸಾ*ವು ಬರಸಿಡಿಲು ಬಡಿದಂತಾಗಿದೆ.
ಈ ನೋವಿನಲ್ಲಿರುವ ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಮತ್ತೆ ಭೇಟಿಯಾಗೋಣ ಡ್ಯಾಡ್’ ಎಂದು ಸಮಂತಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಹಾಕಿದ್ದಾರೆ.
ಸಿಟಾಡೆಲ್ ಹನಿಬನ್ನಿ ವೆಬ್ ಸೀರೀಸ್ ನವೆಂಬರ್ 7 ರಿಂದ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಮಂತಾ ಹಾಗೂ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶಿಸಿದ ಈ ಸೀರಿಸ್ ಜನಮನ ಗೆದ್ದಿದೆ.
ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಈ ಯಶಸ್ಸಿನ ಸಂಭ್ರಮವಾಗಿ ಮುಂಬೈನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ನವೆಂಬರ್ 28 ರ ರಾತ್ರಿ ಸಮಂತಾ ಸಿಟಾಡೆಲ್ ಸಕ್ಸಸ್ ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡು ಮನೆಗೆ ಹೋಗ್ತಿದ್ದಂತೆ ಸ್ಯಾಮ್‌ಗೆ ದೊಡ್ಡ ಶಾ*ಕ್ ಎದುರಾಗಿತ್ತು. ಒಂದೆಡೆ ಸ್ಯಾಮ್ ಮಾಜಿ ಪತಿಯ ಮದುವೆಯ ಶಾಸ್ತ್ರ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮಂತಾ ಮನೆಯಲ್ಲಿ ದುಃಖ ಆವರಿಸಿದೆ.
LATEST NEWS
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ: ಸರ್ಕಾರದ ಮಹತ್ವದ ಯೋಜನೆ
‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ
ಆರ್ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
ಕಟಪಾಡಿ: ಪತ್ನಿ ನಿ*ಧನದ ಬೆನ್ನಲ್ಲೇ ಆಘಾತದಿಂದ ಪತಿ ಸಾ*ವು
Trending
- BANTWAL2 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM1 day ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru3 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS2 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !