Connect with us

DAKSHINA KANNADA

ಗಂಗಾಕಲ್ಯಾಣ ಯೋಜನೆ ಅರ್ಜಿ ಆಹ್ವಾನ: ಮಾ. 17 ಕೊನೆ ದಿನಾಂಕ

Published

on

ಮಂಗಳೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2021-22ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲಿಚ್ಛಿಸುವ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ ಮತ್ತು 3ಎ, 3ಬಿ ಗೆ ಒಳಪಡುವ (ವಿಶ್ವಕರ್ಮ, ಅಂಬಿಗ, ಸವಿತಾ, ಮಡಿವಾಳ, ಕಾಡುಗೊಲ್ಲ, ಪಟ್ಟಿಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ, ಒಕ್ಕಲಿಗ, ಲಿಂಗಾಯಿತ, ಮರಾಠ ಮತ್ತು ಇದರ ಉಪಜಾತಿಗಳನ್ನು ಹೊರತುಪಡಿಸಿ) ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.


ಕನಿಷ್ಠ 1 ಎಕರೆ ಜಮೀನು ಹೊಂದಿರುವ, ನೀರಾವರಿ ಸೌಲಭ್ಯ ಹೊಂದಿಲ್ಲದ, ಸಣ್ಣ ಮತ್ತು ಅತೀ ಸಣ್ಣ ರೈತರು, ವಾರ್ಷಿಕ ವರಮಾನ 40 ಸಾವಿರ ರೂ.ಗಳ ಮಿತಿಯಲ್ಲಿರುವ ಅರ್ಹ ಫಲಾನುಭವಿಗಳು ನಿಗಮದ ವೆಬ್‍ಸೈಟ್ ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅಥವಾ ಆಯಾ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಮಾ. 17ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೇಡಿಯೋ ಪಾರ್ಕ್ ಬಳಿ, ಉರ್ವಾಸ್ಟೋರ್, ಮಂಗಳೂರು ಅಥವಾ 0824-2456544 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

DAKSHINA KANNADA

ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?

Published

on

ಮಂಗಳೂರು : ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನಾಡುವಾಗ ನಮ್ಮ ಹಿರಿಯರು ತಡೆಯುತ್ತಾರೆ. ಬಿಡ್ತು ಅಂತಾ ಹೇಳು ಎಂದು ಹೇಳಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನಾಡುವಾಗ ಅಶ್ವಿನಿ ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತಾರೆ. ಈ ಕಾರಣಕ್ಕಾಗಿ ಅವರು ನಾವು ಬೇಜಾರಲ್ಲಿ ಏನಾದರೂ ತಪ್ಪಿ ಮಾತನಾಡಿದಾಗ ಬಿಡ್ತು ಎಂದು ಹೇಳುವಂತೆ ನಮಗೆ ಹೇಳುತ್ತಿದ್ದರು. ಹಾಗಾದರೆ ಈ ಅಸ್ತು ದೇವತೆಗಳು ಯಾರು.? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತದೆಯೇ..?

ಅಶ್ವಿನಿ ದೇವತೆಗಳು ಯಾರು.?

ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್‌ ಸೂರ್ಯ ದೇವನಿಗೆ ಮತ್ತು ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಇವರನ್ನು ಅಶ್ವಿನಿ ಕುಮಾರರೆಂದು, ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ಮಾನವ ದೇಹವಾದರೆ, ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು.

ಅಶ್ವಿನಿ ದೇವತೆಗಳಿಗೆ ಕುದುರೆ ಮುಖ ಬರಲು ಕಾರಣವೇನು.?

ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಡೆಯಲಾರದೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ, ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ.

ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ಹೋಗುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಹಾಗಾಗಿ ಅವರಿಗೆ ಹುಟ್ಟಿದ ಮಕ್ಕಳಿಗೂ ಕುದುರೆಯ ಮುಖ ಇರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.

ಅಶ್ವಿನಿ ದೇವತೆಗಳ ಮಹತ್ವ:

ಅಶ್ವಿನಿ ದೇವತೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ ಎನ್ನುವುದು ನಂಬಿಕೆ. ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು, ಮಲಗಬಾರದು ಎಂದು ಹೇಳಲಾಗುತ್ತದೆ. ಅಶ್ವಿನಿ ದೇವತೆಗಳು ಅಸ್ತು, ಅಸ್ತು ಎಂದು ನುಡಿಯುತ್ತಿರುತ್ತಾರೆ. ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ ಅವರು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ಮಾತನಾಡಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ಅಶ್ವಿನಿ ದೇವತೆಗಳು ನಾವು ಒಳ್ಳೆಯದನ್ನ ಮಾತನಾಡಿದರೆ ಒಳ್ಳೆಯದೇ ಬಯಸುತ್ತಾರೆ ಹಾಗೆಯೇ ಕೆಟ್ಟದ್ದನ್ನೇ ಮಾತನಾಡಿದರೇ ಕೆಟ್ಟದ್ದು ಬಯಸುತ್ತಾರೆ ಎನ್ನುವುದು ಜನರ ನಂಬಿಕೆ.

Continue Reading

DAKSHINA KANNADA

ವೋಟ್ ಮಾಡಿ, ಊಟ ಮಾಡಿ: ಹೋಟೆಲ್‌ಗಳಲ್ಲಿ ಸಿಗಲಿದೆ ಫ್ರೀ ದೋಸೆ, ಸಿಹಿ ತಿಂಡಿ!

Published

on

ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್‌ಗಳು ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನ ಚುನಾವಣೆಯಲ್ಲಿ ಮಾಡಿದಂತೆಯೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.

ವೋಟ್ ಮಾಡಿ, ಊಟ ಮಾಡಿ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‌ ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್​​ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್‌ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ.

SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.

ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್‌ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.

Continue Reading

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

LATEST NEWS

Trending