Connect with us

    CAA ಬೆಂಬಲಿಸಿದಕ್ಕೆ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಿಗೆ ಸಾಮಾಜಿಕ ಬಹಿಷ್ಕಾರದ ಬೆದರಿಕೆ

    Published

    on

    ಮಂಗಳೂರು, ಜನವರಿ 20 : ಬಿಜೆಪಿ ನಾಯಕ ಹಾಗೂ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‍ರನ್ನ ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಬೇಕು  ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

    ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಕಾನೂನು ಪರ ಮಾತನಾಡುತ್ತಾ ಬಂದಿರುವ ರಹಿಂ ಉಚ್ಚಿಲ್‍ರನ್ನು ದೇಶದ್ರೋಹಿ ಎಂದು ಘೋಷಿಸಿ ಮುಸ್ಲಿಂ ಸಮುದಾಯ ದೂರ ಮಾಡಬೇಕು ಎಂಬ ಮಾತು ಕೇಳಿ ಬಂದಿದೆ.

    ಈಗಾಗಲೇ ವೈರಲ್ ಆಗ್ತಿರುವಾ ಆಡಿಯೋ ಒಂದರಲ್ಲಿ ಅನಾಮಧೇಯ ಯುವಕನೊರ್ವನ ಈ ಹೇಳಿಕೆ ನೀಡಿದ್ದು, ರಹೀಮ್ ಉಚ್ಚಿಲನಂತಹಾ ಸಂವಿಧಾನ ವಿರೋಧಿಗಳನ್ನು ಸಮಾಜ ಬಹಿಷ್ಕರಿಸಬೇಕಾದ ತುರ್ತು ಅಗತ್ಯ ಬಂದಿದೆ. ಮುಸ್ಲಿಂ ಸಮುದಾಯಕ್ಕೆ ಒಲಿತಿಗಾಗಿ ಸಿಎಎ ವಿರುದ್ಧ ಜಿಲ್ಲೆಯ ವಿವಿದೆಡೆ ಪ್ರತಿಭಟನೆ ನಡೆಯುತ್ತಿದೆ.

    ವೃದ್ಧರು ಮಹಿಳೆಯರೆನ್ನದೆ ಎಲ್ಲರೂ ಈ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಈ ವ್ಯಕ್ತಿ ಸಿಎಎ ಪರ ಮಾತನಾಡಿ ಸಮುದಾಯದ ವಿರುದ್ಧ ನಿಂತಿದ್ದಾನೆ. ಹಾಗಾಗಿ ಈತನನ್ನ ಸಮುದಾಯದಿಂದ ದೂರ ಮಾಡುವುದೇ ಸರಿಯಾದ ನಿರ್ಧಾರ ಎಂದಿದ್ದಾನೆ.

    ಇನ್ನು ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ದೇಶದ್ರೋಹಿಗಳಿಗೆ ಮಸೀದಿ ಪ್ರವೇಶ ಇಲ್ಲ ಎಂದು ಬೋರ್ಡ್ ಹಾಕಬೇಕು. ಆ ಮೂಲಕ ಮಸೀದಿ ಮಹಲ್ಲುಗಳಿಂದ ಇವನಂತಹಾ ದೇಶದ್ರೋಹಿಗಳನ್ನು ಸಮುದಾಯ ದೂರ ಮಾಡಬೇಕು. ಇವನ ಮನೆ ಇರುವ ಜಮಾತ್ ಕಮಿಟಿಯವರು ಈ ತೀರ್ಮಾನ ಕೈಗೊಂಡು ದೇಶ ದ್ರೋಹಿಗಳಿಗೆ ಕಬರ್ ಸ್ಥಾನದಲ್ಲಿ ದಫನ ಮಾಡಲು ಅವಕಾಶ ಇಲ್ಲ ಎಂದು ಫರ್ಮಾನು ಹೊರಡಿಸಿ ಎಚ್ಚರಿಸಬೇಕು.

    ಆ ಮೂಲಕ ಎಲ್ಲಾ ರೀತಿಯಲ್ಲಿಯೂ ಇವನಂತಹಾ ದೇಶದ್ರೋಹಿಗಳನ್ನು ಸಮಾಜ ಬಹಿಷ್ಕರಿಸಬೇಕು. ಈತ ಮುಸ್ಲಿಮನಾಗಿ ಇಸ್ಲಾಮಿನ ವಿರುದ್ಧ ಮಾತಾಡಿದರೂ , ಈತನಿಗೆ ಮುಸ್ಲಿಂ ಆಗಿ ಮುಂದುವರಿಯಲು ಯಾವುದೇ ತೊಂದರೆ ಇಲ್ಲ , ಆದರೆ ಈತ ಮುಸ್ಲಿಮನಾಗಿದ್ದು ದೇಶದ್ರೋಹದ ಮಾತಾಡುತ್ತಾನೆ ಮತ್ತು ಅಂತಹಾ ಚಿಂತನೆಗೆ ತನ್ನನ್ನು ತಾನು ಒಡ್ಡುತ್ತಾನೆ ಎಂದಾದಾಗ ಈತನನ್ನು ಸಮಾಜ ಯಾವ ಕಾರಣಕ್ಕೂ ಕ್ಷಮಿಸಬಾರದು ಮತ್ತು ಎಲ್ಲಾ ರೀತಿಯ ಬಹಿಷ್ಕಾರಕ್ಕೆ ಈತನನ್ನು ಒಳಪಡಿಸಬೇಕು ಎಂಬ ವಿಚಾರಗಳು ಈಗ ರಹಿಂ ಉಚ್ಚಿಲ್ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಡಿಯೋಗಾಗಿ..

    Click to comment

    Leave a Reply

    Your email address will not be published. Required fields are marked *

    LATEST NEWS

    ರಾಜ್ಯದ ‘KSRTC’ ಬಸ್ ಸೇರಿದಂತೆ 4 ಬಸ್‌ಗಳ ಮೇಲೆ ಕಲ್ಲು ತೂರಾಟ; ಕಿಡಿಗೇಡಿಗಳು ಪರಾರಿ

    Published

    on

    ಮಂಗಲುರು/ಹೈದ್ರಾಬಾದ್ : ಆಂಧ್ರಪ್ರದೇಶದ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್ಟಿಸಿ ಸಂಸ್ಥೆಯ ಐರಾವತ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಸಿರುವ ಘಟನೆ ಹೈದರಾಬಾದ್ ಸಮೀಪದ ಶಂಶಾಬಾದ್ ನಲ್ಲಿ ನಡೆದಿದೆ.

    ಗುರುವಾರ (ನ.7) ರಾತ್ರಿ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

    ಹೈದರಾಬಾದ್‌ನಿಂದ ಬೆಂಗಳೂರು ನಡುವೆ ಸಂಚರಿಸುವ ಸಾರಿಗೆ ಬಸ್‌ ರಾತ್ರಿ 10:45ರ ಸುಮಾರಿನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿನತ್ತ ಹೊರಟಿತ್ತು.

    ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್ ಮಾತ್ರವಲ್ಲದೇ ತೆಲಂಗಾಣದ ಒಂದು ಸರ್ಕಾರಿ ಬಸ್, ಖಾಸಗಿ ಬಸ್ ಸೇರಿದಂತೆ ಒಟ್ಟು 4 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಕಿಟಕಿಯ ಗಾಜುಗಳು ಮಾತ್ರ ಒಡೆದು ಹೋಗಿವೆ.

    ಈ ಪ್ರಕರಣದ ಸಂಬಂಧ ಶಂಶಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    BBK 11: ಬಿಗ್‌ಬಾಸ್ ವಾರದ ಕತೆಯಲ್ಲಿ ಮೋಕ್ಷಿತಾಗೆ ಕ್ಲಾಸ್ ತಗೊಳ್ತಾರಾ ಕಿಚ್ಚ?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 41ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ನ ಆಗಮನ ಆಗಿದೆ. ವೈಟ್​ ಅಂಡ್ ವೈಟ್​ನಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಈ​ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನು ಕಳೆದುಕೊಂಡವರು ಯಾರು ಅಂತ ಪ್ರಶ್ನೆ ಮಾಡಿದ್ದಾರೆ.

    ಹೌದು, ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​ ವೇದಿಕೆಗೆ ಬಂದಿದ್ದಾರೆ. ವಿಶೇಷ ಅಧಿಕಾರಗಳನ್ನು ಗೆಲ್ಲೋ ಉದ್ದೇಶವನ್ನು ಇಟ್ಟುಕೊಂಡಿತ್ತು ಇಡೀ ಮನೆ. ಈ​ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನು ಕಳೆದುಕೊಂಡವರು ಯಾರು ಅಂತ ಇಂದಿನ ಸಂಚಿಕೆಯಲ್ಲಿ ಚರ್ಚೆಯಾಗಲಿದೆ. ಸದ್ಯ ಇದೇ ಪ್ರೋಮೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಈ ವಾರ ಕಿಚ್ಚ ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂದು ಕಾದುನೋಡಬೇಕಾಗಿದೆ.

    ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಾಳಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಬಿಗ್​ಬಾಸ್​ ಮನೆಗೆ ಗುಡ್​ಬೈ ಹೇಳಬೇಕು. ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಅಂತ ಕಾದು ನೋಡಬೇಕಿದೆ.

    Continue Reading

    LATEST NEWS

    ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

    Published

    on

    ಮಂಗಳೂರು: ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

    ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದರು ಹೇಳಿದ್ದಾರೆ.

    ರಾಜ್ಯದ ಪ್ರಮುಖ ಹೆದ್ದಾರಿಯಾದ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಸುಗಮ ಸರಕು ಸಾಗಾಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ, ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದರು.

    ಹೀಗಾಗಿ, ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343,74,00,000 ರೂ. ಬಿಡುಗಡೆಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

    Continue Reading

    LATEST NEWS

    Trending