Home ಪ್ರಮುಖ ಸುದ್ದಿ CAA ವಿರೋಧಿಸಿ ಅಡ್ಡೂರ್ ನಲ್ಲಿ ಬೃಹತ್ ಪ್ರತಿಭಟನೆ.

CAA ವಿರೋಧಿಸಿ ಅಡ್ಡೂರ್ ನಲ್ಲಿ ಬೃಹತ್ ಪ್ರತಿಭಟನೆ.

ಮಂಗಳೂರು:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂವಿಧಾನ ಸಂಕ್ಷರಣಾ ಸಮಿತಿ ಅಡ್ಡೂರು ಇದರ ವತಿಯಿಂದ ಮಂಗಳೂರಿನ ಅಡ್ಡೂರು ಜಂಕ್ಷನ್ ಮೈದಾನದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿ, ರಾಷ್ಟ್ರಪ್ರೇಮವನ್ನು ಪೋಸ್ಟ್ ಕಾರ್ಡ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯದಲ್ಲಿರಬೇಕು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವವರು ಬಡ ಹಾಗೂ ಯುವ ಜನರಲ್ಲಿ ಗನ್ ಕೊಟ್ಟು, ಜಾತಿ ಮತ್ತು ದೇಶದ ಹೆಸರಲ್ಲಿ ಕಚ್ಚಾಡುವಂತೆ ಮಾಡುತ್ತಿದ್ದಾರೆ ಎಂದು ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ರಾಂತಿ ಪ್ರತಿಯೊಬ್ಬರ ಮನೆಯಿಂದ ಆರಂಭವಾಗಬೇಕು. ಪ್ರತಿ ಮನೆಯಲ್ಲೂ ಗಾಂಧೀಜಿ, ಭಗತ್ ಸಿಂಗ್ ಕಾಣುವಂತಾಗಬೇಕು. ಜೈ ಶ್ರೀ ರಾಮ್ ಎನ್ನುವಾಗ ‘ಜೈ ಸಂವಿಧಾನ್, ಜೈ ಭೀಮ್’ ಎನ್ನುವ ಮಂದಿ ಹುಟ್ಟಿ ಬರಬೇಕು. ಹಿಂದುತ್ವದ ಹೆಸರಿನಲ್ಲಿ ದ್ವೇಷ ರಾಜಕಾರಣ ಮಾಡುವ ಇವರಲ್ಲಿ ಆರೆಸ್ಸೆಸ್ ಮನಸ್ಥಿತಿ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಭಾಸ್ಕರ್ ಪ್ರಸಾದ್, ವಿಲಿಯಂ ಮಾರ್ಟಿಸ್, ಸುಫ್ಯಾನ್ ಸಖಾಫಿ, ಅಶ್ರಫ್ ಮಾಚಾರ್ ಮತ್ತಿತ್ತರರು ಉಪಸ್ಥಿತರಿದ್ದರು.. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎನ್ಆರ್ಸಿ, ಸಿಎಎ, ಎನ್ಪಿಆರ್ ವಿರುದ್ಧ ಘೋಷಣೆ ಕೂಗಿದರು.

ವಿಡಿಯೋಗಾಗಿ

- Advertisment -

RECENT NEWS

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..! ಮಂಗಳೂರು : ಮಂಗಳೂರಿನ ಮುಲ್ಕಿಯಲ್ಲಿ ನಡೆದಿದ್ದ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ದಾಖಲಾಗಿದೆ. ಕಾರು...

ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ ಶವ ನೀರಿನ ಟ್ಯಾಂಕಿಯೊಳಗೆ ಪತ್ತೆ.......! ಮುಂಬೈ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿ ಮೂಲದ ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ...

ಜವನೆರ್ ಬೆದ್ರ ವತಿಯಿಂದ ಮನೆಗೊಂದು ಗಿಡ ಅಭಿಯಾನ ವಿಭಿನ್ನ ಕಾರ್ಯಕ್ರಮ….

ಲಾಕ್ ಡೌನ್ ಎಫೆಕ್ಟ್: ವಿಶ್ವ ಪರಿಸರ ದಿನವನ್ನು ಮನೆಗೊಂದು ಗಿಡ ಅಭಿಯಾನದ ಮೂಲಕ ಆಚರಣೆ… ಮೂಡಬಿದ್ರೆ: ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಮೂಡಬಿದ್ರೆಯ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಮನೆಗೊಂದು ಗಿಡ...

ಜೂನ್ 8 ರಿಂದ ಭಕ್ತರಿಗಾಗಿ ತೆರೆದುಕೊಳ್ಳಲಿದೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ….

2 ತಿಂಗಳ ಲಾಕ್‌ ಡೌನ್ ಬಳಿಕ ಭಕ್ತರ ಪ್ರವೇಶಕ್ಕೆ ತೆರವಾದ ಕುದ್ರೋಳಿ: ಬೆಳಗ್ಗೆ ಧನ್ವಂತರಿಯಾಗ ಹಾಗೂಶತಸೀಯಾಳಾಭಿಷೇಕ.... ಕುದ್ರೋಳಿ: ಸುಮಾರು ಎರಡೂವರೆ ತಿಂಗಳ ಸುಧೀರ್ಘ ಲಾಕ್‌ ಡೌನ್ ನಂತರ ಜೂ.8ರಂದು ಮಂಗಳೂರು ದಸರಾ ನಡೆಯುವ ಖ್ಯಾತ...