ವೈದ್ಯರ ಒಂದು ಎಡವಟ್ಟಿನಿಂದ ಮಹಿಳೆಯೋರ್ವಳು 4ನೇ ಬಾರಿ ಗರ್ಭಿಣಿಯಾದ(pregnant) ಘಟನೆ ಜಾರ್ಖಂಡ್ ನ ಬರ್ಗಾಂವ್ ಜಿಂದತೋಲಿ ಗ್ರಾಮದಲ್ಲಿ ನಡೆದಿದೆ.
ಜಾರ್ಖಂಡ್ : ವೈದ್ಯರ ಒಂದು ಎಡವಟ್ಟಿನಿಂದ ಮಹಿಳೆಯೋರ್ವಳು 4ನೇ ಬಾರಿ ಗರ್ಭಿಣಿಯಾದ(pregnant) ಘಟನೆ ಜಾರ್ಖಂಡ್ ನ ಬರ್ಗಾಂವ್ ಜಿಂದತೋಲಿ ಗ್ರಾಮದಲ್ಲಿ ನಡೆದಿದೆ.
ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರೂ ಗರ್ಭಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಡತನದಿಂದ ಬಳಲುತ್ತಿರುವ ಈ ಮಹಿಳೆಗೆ ಈಗಾಗಲೇ ಮೂರು ಮಕ್ಕಳಿದ್ದಾರೆ. ಇದೀಗ ವೈದ್ಯರ ನಿರ್ಲಕ್ಷ್ಯವದಿಂದ ಮತ್ತೊಂದು ಹೆಣ್ಣು ಮಗುವಾಗಿದೆ.
ರೇಖಾ ದೇವಿ ಮತ್ತು ಬುಧ್ರಮ್ ಮಹಾಲಿ ಇಲ್ಲಿನ ಬರ್ಗಾಂವ್ ಜಿಂದತೋಲಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಮೂರು ಮಕ್ಕಳ ಪಡೆದ ನಂತರ ರೇಖಾ ದೇವಿಯು 21 ಜುಲೈ 2022 ರಂದು ಸಿಸೈ ರೆಫರಲ್ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಮತ್ತೆ ಗರ್ಭಿಣಿಯಾಗಿದ್ದಾರೆ.
ಸಂತಾನಹರಣ ಮಾಡಿದ ಒಂದು ತಿಂಗಳ ನಂತರ, ಆರತಿ ದೇವಿ ತನ್ನ ಪತಿಯೊಂದಿಗೆ ಬನಾರಸ್‌ಗೆ ಇಟ್ಟಿಗೆ ಗೂಡು ಕೆಲಸ ಮಾಡಲು ಹೋಗಿದ್ದರು.
ಈ ಸಮಯದಲ್ಲಿ ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ. ಆದರೆ ಮೊದಲ ನಾಲ್ಕು ತಿಂಗಳು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ಮುಟ್ಟು ನಿಂತಿರಬಹುದು ಎಂದು ಭಾವಿಸಿದ್ದಾಳೆ.
ಆದರೆ ಐದನೇ ಅಥವಾ ಆರನೇ ತಿಂಗಳು ಬರುವಷ್ಟರಲ್ಲಿ ಹೊಟ್ಟೆ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.
ಜೌನ್‌ಪುರದ ಕೆರ್ಕಟ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಒಳಗಾದ ನಂತರ ಗರ್ಭಧಾರಣೆಯಾಗಿರುವುದು ವರದಿಯಾಗಿದೆ.
ಅಲ್ಲಿಂದ ಮನೆಗೆ ಬರಲು ಬಯಸಿದರಾದರೂ, ಜೀವನೋಪಾಯ ನಿರ್ವಹಿಸಬೇಕಾದ ಕಾರಣ ಹಿಂತಿರುಗಲು ಸಾಧ್ಯವಾಗಲಿಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ.
2023 ಮಾರ್ಚ್ 26 ರಂದು ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗು ಜನಿಸಿತು.
ಬಡತನದಿಂದ ಮಕ್ಕಳನ್ನು ಸಾಕಲು ಕಷ್ಟವಾದ ಕಾರಣ ಸಂತಾನಹರಣ ಮಾಡಿಸಲಾಗಿತ್ತು ಎಂದು ಪತಿ ಹೇಳಿದ್ದಾರೆ.
ಹೇಗೋ ಕೂಲಿ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದೇವೆ.
ಸಂತಾನಹರಣ ನಂತರವೂ ಹೆಣ್ಣು ಮಗು ಜನಿಸಿದ್ದು, ಆಕೆಗೆ ಜೀವನಾಂಶ ಪರಿಹಾರ ನೀಡಬೇಕು ಎಂದು ದಂಪತಿ ಆಗ್ರಹಿಸಿದ್ದಾರೆ.